ಬಿಹಾರದಂತಾಗಲಿದೆಯೇ ಕರ್ನಾಟಕ- ಬಿಎಸ್ ಯಡಿಯೂರಪ್ಪ ನವರು ಮತ್ತೆ ಮುಖ್ಯಮಂತ್ರಿ? !

ಬಿಹಾರದಂತಾಗಲಿದೆಯೇ ಕರ್ನಾಟಕ- ಬಿಎಸ್ ಯಡಿಯೂರಪ್ಪ ನವರು ಮತ್ತೆ ಮುಖ್ಯಮಂತ್ರಿ?

0

ಕರ್ನಾಟಕದ ಕಥೆ ಕೇಳುವ ಮೊದಲು ನೀವು ಬಿಹಾರದ ಕಥೆ ಕೇಳಲೇ ಬೇಕು. ಬಿಹಾರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ತಪ್ಪಿಸಲು ಪ್ರಾದೇಶಿಕ ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡು ಜೆಡಿಯು ಪಕ್ಷವು ಅಧಿಕಾರದ ಗದ್ದುಗೆ ಹೇರಿತ್ತು. ಆದರೆ ಈ ಮೈತ್ರಿ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ ಮೈತ್ರಿಯ ಸರ್ಕಾರದ ಒಳಗಡೆ ಕಚ್ಚಾಟಗಳು ಶುರುವಾಗಿತ್ತು. ಇದನ್ನು ಅರಿತ ಜೆಡಿಯು ಪಕ್ಷದ ನಾಯಕರು ಅಧಿಕಾರ ಮತ್ತು ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿ ಪ್ರಾದೇಶಿಕ ಪಕ್ಷಗಳ ಮೈತ್ರಿಯನ್ನು ಕಳಚಿಕೊಂಡು ಸರ್ಕಾರ ರಚಿಸಿದ್ದರು.

[do_widget id=et_ads-2]

ಈಗ ಕರ್ನಾಟಕ ದಲ್ಲಿಯೂ ಸಹ ಅದೇ ರೀತಿಯಾಗಿ ವಿದ್ಯಮಾನಗಳು ನಡೆಯುವ ಸೂಚನೆಗಳು ಕಾಣುತ್ತಿವೆ ಆದರೆ ಇಲ್ಲಿನ ಸ್ವಲ್ಪ ಬದಲಾವಣೆ ಏನೆಂದರೆ ಮುಖ್ಯಮಂತ್ರಿಗಳು ಸಹ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ಕಾರಣವೆಂದರೆ ಇತ್ತೀಚಿಗೆ ಹೊರಬಿದ್ದ ಉಪಚುನಾವಣೆಯ ಫಲಿತಾಂಶ.

[do_widget id=et_ads-3]

ಬಳ್ಳಾರಿಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಬಿಜೆಪಿಯ ಭದ್ರ ಕೋಟೆಯಲ್ಲಿ ಶ್ರೀರಾಮುಲುರವರ ತಂಗಿ ಶಾಂತಾ ಅವರನ್ನು ಸೋಲಿಸುವುದರಲ್ಲಿ ಮಹತ್ವದ ಪಾತ್ರವಹಿಸಿದ್ದ ಡಿಕೆ ಶಿವಕುಮಾರ್ ರವರು ಸುಖಾಸುಮ್ಮನೆ ಈ ಕೆಲಸವನ್ನು ಮಾಡಿಲ್ಲ ತಮಗೆ ಸಾಮರ್ಥ್ಯವಿದೆ ಎಂಬುದನ್ನು ನಿರೂಪಣೆ ಮಾಡಿಕೊಳ್ಳಲು ಬಿಜೆಪಿಯ ಭದ್ರಕೋಟೆ ಎಂದೇ ಛಿದ್ರ ಗೊಳಿಸಿದರು. ಇದರಿಂದ ಹೈಕಮಾಂಡ್ ಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದಾರೆ.

[do_widget id=et_ads-4]

ಹೌದು ಈಗ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ, ಆದರೆ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ ಸಿದ್ದರಾಮಯ್ಯ ಅವರು ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ಇನ್ನು ಕೆಲವೇ ವರ್ಷಗಳಲ್ಲಿ ಸಿದ್ದರಾಮಯ್ಯರವರು ರಾಜಕೀಯ ನಿವೃತ್ತಿಯನ್ನು ಘೋಷಿಸಲಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದಲ್ಲಿ ಭಿನ್ನಮತಗಳು ಭುಗಿಲೇಳುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ ಯಾಕೆಂದರೆ ಮೊದಲಿನಿಂದಲೂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ತಡೆಗೋಡೆಯಾಗಿ ಇರುವುದೇ ಸಿದ್ದರಾಮಯ್ಯರವರು.

[do_widget id=et_ads-5]

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಗಳು ಹೆಚ್ಚಾದರೆ ಮರು ಚುನಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ ಆದರೆ ಜೆಡಿಎಸ್ ಪಕ್ಷಕ್ಕೆ ಈಗ ಮರು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಈಗಾಗಲೇ ಮೈತ್ರಿ ಇಲ್ಲದೆ ಗೆಲ್ಲುವುದು ಸಾಧ್ಯವಿಲ್ಲ ಎಂಬುದು ನಿರೂಪಣೆಯಾಗಿದೆ. ಆದ್ದರಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯನ್ನು ಬಿಜೆಪಿ ಜೊತೆ ಹಂಚಿಕೊಂಡು ಯಡಿಯೂರಪ್ಪನವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

[do_widget id=et_ads-6]