ಭಾರತದ ವಿರುದ್ಧ ಸರಣಿಗೆ ಸ್ಮಿತ್ ವಾರ್ನರ್ ವಾಪಸು ಬರುತ್ತಾರೆಯೇ?

ಭಾರತದ ವಿರುದ್ಧ ಸರಣಿಗೆ ಸ್ಮಿತ್ ವಾರ್ನರ್ ವಾಪಸು ಬರುತ್ತಾರೆಯೇ?

0

ಚೆಂಡು ವಿರೂಪಗೊಳಿಸಿದ ಆರೋಪದ ಅಡಿಯಲ್ಲಿ ಆಸ್ಟ್ರೇಲಿಯ ತಂಡದ ಮಾಜಿ ನಾಯಕರಾದ ಸ್ಟೀವ್ ಸ್ಮಿತ್ ಹಾಗೂ ಮಾಜಿ ಉಪ ನಾಯಕರಾದ ಡೇವಿಡ್ ವಾರ್ನರ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ 12 ತಿಂಗಳ ನಿಷೇಧಕ್ಕೆ ಒಳಪಡಿಸಿತ್ತು. ಆದರೆ ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರ ಅಸೋಶಿಯೇಶನ್ ನಿಷೇಧ ವಾಪಸ್ ಪಡೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಒತ್ತಡ ಹೇರುತ್ತಿದೆ.

[do_widget id=et_ads-2]

ಕಳೆದ ಕೆಲವು ತಿಂಗಳುಗಳಿಂದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರ ಅನುಪಸ್ಥಿತಿಯಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲು ವಿಫಲವಾಗುತ್ತಿದೆ. ಹಲವಾರು ಸ್ಟಾರ್ ಆಟಗಾರರು ಇದ್ದರೂ ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ಕೊರತೆ ಎದ್ದು ಕಾಣುತ್ತಿದ್ದು ಹಲವಾರು ಬಾರಿ ತಂಡವು ಸೋಲನ್ನು ಕಾಣುತ್ತಿದ್ದು ಇದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಚಿಂತೆಗೆ ಒಳಗಾಗಿದೆ.

[do_widget id=et_ads-3]

ನವಂಬರ್ ತಿಂಗಳಲ್ಲಿ ಆರಂಭಗೊಳ್ಳುವ ಭಾರತದ ವಿರುದ್ಧ ಸರಣಿಗೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಇದ್ದರೆ ಬಲಿಷ್ಠ ತಂಡವಾಗಿರುವ ಭಾರತವನ್ನು ಸೋಲಿಸುವುದು ಅಸಾಧ್ಯವೆಂಬುದು  ತಿಳಿದಿರುವ ಆಸ್ಟ್ರೇಲಿಯಾ ಕ್ರಿಕೆಟಿಗರ ಅಸೋಸಿಯೇಶನ್ ಸಂಸ್ಥೆಯು ಅವರಿಬ್ಬರನ್ನು ವಾಪಸು ಕರೆತರುವ ಪ್ರಯತ್ನ ಮಾಡಿದೆ. ಇದೇ ನವಂಬರ್ ನಲ್ಲಿ 3 20-20 , ನಾಲ್ಕು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ಗಳಿಗೆ ಇಬ್ಬರು ಆಟಗಾರರು ವಾಪಸ್ ಆಗುವ ಸೂಚನೆಗಳು ಕಾಣಿಸುತ್ತಿವೆ.

[do_widget id=et_ads-4]