ನಮೋ ನಿರ್ಧಾರಕ್ಕೆ ಅರ್ಥ ತುಂಬಿದ ತ್ರಿಪುರ ಸಿಎಂ – ನಿರುದ್ಯೋಗ ಮುಕ್ತ ವಾಗಲಿದೆ ತ್ರಿಪುರ

ನಮೋ ನಿರ್ಧಾರಕ್ಕೆ ಅರ್ಥ ತುಂಬಿದ ತ್ರಿಪುರ ಸಿಎಂ – ನಿರುದ್ಯೋಗ ಮುಕ್ತ ವಾಗಲಿದೆ ತ್ರಿಪುರ

0

ತ್ರಿಪುರ ರಾಜ್ಯದ ಮಂತ್ರಿಗಳಾದ ಬಿಪ್ಲಬ್ ದೇಬ್ ರವರು ಮೊದಲಿನಿಂದಲೂ ತಮ್ಮ ಮಾತಿನ ಶೈಲಿಯಿಂದ ಮತ್ತು ಕೆಲಸಗಳಿಂದ ಪ್ರತಿಯೊಬ್ಬರ ಮನ ಗೆಲ್ಲುತ್ತ ಬಂದಿದ್ದಾರೆ. ಮೊದಲಿನಿಂದಲೂ ಕಡೆಗಣಿಸುತ್ತಾ ಬಂದಿರುವ ತ್ರಿಪುರ ರಾಜ್ಯದಲ್ಲಿ ನಿರುದ್ಯೋಗಿಗಳು ಹೆಚ್ಚಾಗಿದ್ದಾರೆ ಎಂಬುದನ್ನು ಅರಿತ ಮುಖ್ಯಮಂತ್ರಿಗಳು  ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

[do_widget id=et_ads-2]

ಈ ಬಾರಿಯೂ ಸಹ ರಾಜ್ಯದಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದರಂತೆ ತ್ರಿಪುರ ರಾಜ್ಯದ ಐದು ಸಾವಿರ ಕುಟುಂಬಗಳಿಗೆ ದನಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಯೋಜನೆ ಜಾರಿಗೊಳಿಸಿದರೆ ಎಲ್ಲರೂ ಒಂದು ಕ್ಷಣ ಮಾತನಾಡಿ ಸುಮ್ಮನಾಗುತ್ತಿದ್ದರು ಆದರೆ ಯುವಕರನ್ನು ಉತ್ತೇಜಿಸುವಂತಹ ಮಾತುಗಳನ್ನು ಆಡಿದ ತ್ರಿಪುರಾದ ಮುಖ್ಯಮಂತ್ರಿಗಳು ಇಡೀ ದೇಶದ ಹಿಂದುಗಳ ಮನವನ್ನು ಕೇವಲ ತಮ್ಮ ಮಾತುಗಳ ಮೂಲಕ ಗೆದ್ದಿದ್ದಾರೆ.

[do_widget id=et_ads-3]

ಯೋಜನೆ ಜಾರಿಗೊಳಿಸುವ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು ದೊಡ್ಡ ಕೈಗಾರಿಕೆಗಳು ಎರಡು ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಸಲು ಬರೋಬ್ಬರಿ ಕನಿಷ್ಠ 10 ಸಾವಿರ ಕೋಟಿ ಹೂಡಿಕೆ ಮಾಡುತ್ತಾರೆ. ಆದರೆ 10,000 ಹಸುಗಳನ್ನು ಐದು ಸಾವಿರ ಕುಟುಂಬಗಳಿಗೆ ನೀಡಿದರೆ ಜನರು ಕೇವಲ ಆರು ತಿಂಗಳಲ್ಲಿ ಹಣ ಗಳಿಸಲು ಪ್ರಾರಂಭಿಸುತ್ತಾರೆ. ನಮ್ಮ ಮನೆಯಲ್ಲಿಯೂ ಸಹ ನಾನು ಸಾಕಿದ ಹಸುಗಳ ಹಾಲನ್ನು ಸೇವಿಸುತ್ತೇನೆ ಇದರಿಂದ ತ್ರಿಪುರಾದ ಜನರಿಗೆ ಸ್ಪೂರ್ತಿ  ಅಷ್ಟೇ ಅಲ್ಲದೆ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.

[do_widget id=et_ads-4]

ಯಾರು ನಾವು ಪದವೀಧರರು ಹಸುಗಳನ್ನು ಸಾಕಬೇಕೆ  ಎಂದು ಚಿಂತಿಸಬೇಡಿ ಇದು ಕೇವಲ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದಾಗಿರಬೇಕು ಪ್ರತಿಯೊಂದು ಕುಟುಂಬವೂ ಸಹ ಒಂದು ಹಸುವನ್ನು ಸಾಗಿಸಬೇಕು. ಒಂದು ಲೀಟರ್ ಹಾಲಿಗೆ ಈಗ ಬರೋಬ್ಬರಿ 50 ರೂ ಇದೆ. ಹತ್ತು ವರ್ಷಗಳಿಂದ ಪದವಿದರ ಉದ್ಯೋಗ ಹರಸುವ ವೇಳೆಯಲ್ಲಿ ಒಂದು ದನ ಸಾಕಿದ್ದರೆ ಆತನಿಗೆ ಮತ್ತು ಆತನ ಜೀವನಕ್ಕೆ ಈಗಾಗಲೇ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ಇರುತ್ತಿತ್ತು.

[do_widget id=et_ads-5]

ನಾನು ಮುಖ್ಯಮಂತ್ರಿಯಾಗಿದ್ದರು ಸಹ ನನ್ನ ಮನೆಯಲ್ಲಿ ಈಗಲೂ ಹಸುಗಳನ್ನು ಸಾಕುತ್ತೇನೆ ದಯವಿಟ್ಟು ಯಾರೂ ಹಸುಗಳನ್ನು ಸಾಕುವುದು ಎಂದರೆ ಕೀಳಾಗಿ ನೋಡಬೇಡಿ, ಈ ಹಸು ಸಾಕಾಣಿಕೆ ಯೂ ನಿಮ್ಮ ಜೀವನದಲ್ಲಿ ಒಂದು ಪ್ರಮುಖ ಅಂಶವಾಗಿರುತ್ತದೆ ಮತ್ತು ಸಾಮಾನ್ಯ ಕೆಲಸವಾಗಿರುತ್ತದೆ. ಇದರಿಂದ ನಿಮ್ಮ ಘನತೆಗೆ ಯಾವುದೇ ಧಕ್ಕೆ ಬರುವುದಿಲ್ಲ ಘನತೆಯು ಕುಂದುತ್ತದೆ ಎಂದು ನಂಬಬೇಡಿ ಎಂದು ಎಲ್ಲರಿಗೂ ತಿಳಿ ಮಾಡಿ ಹೇಳಿ ಕೊಟ್ಟರು.

ಇದೇ ವೇಳೆ ರಾಜ್ಯದ ಐದು ಸಾವಿರ ಬಡ ಕುಟುಂಬಗಳಿಗೆ 10000 ಹಸುಗಳನ್ನು ತ್ರಿಪುರ ರಾಜ್ಯದ ಮುಖ್ಯಮಂತ್ರಿಗಳು ಉಚಿತವಾಗಿ ನೀಡುವ ಘೋಷಣೆ ಯನ್ನು ಘೋಷಿಸಿದರು.

[do_widget id=et_ads-6]