ಬಿಗ್ ಬ್ರೇಕಿಂಗ್: ರಾಜಕೀಯ ಒತ್ತಡಕ್ಕೆ ರೆಡ್ಡಿ ಮೇಲೆ ನಕಲಿ ಕೇಸ್

ಬಿಗ್ ಬ್ರೇಕಿಂಗ್: ರಾಜಕೀಯ ಒತ್ತಡಕ್ಕೆ ರೆಡ್ಡಿ ಮೇಲೆ ನಕಲಿ ಕೇಸ್

0

ಅಭಿಡೆಂಟ್ ಕಂಪನಿಯ ಜೊತೆ ಜನಾರ್ದನ ರೆಡ್ಡಿ ರವರಿಗೆ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಈ ವಿಷಯವನ್ನೇ ಮೂಲವಾಗಿಟ್ಟು ಕೊಂಡು ಜನಾರ್ದನ ರೆಡ್ಡಿ ಅವರನ್ನು ಹೆಣೆಯುವುದು ರಾಜಕೀಯ ನಾಯಕರ ಪ್ರಮುಖ ಉದ್ದೇಶವಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದ್ದು ದ್ವೇಷ ರಾಜಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರಕರಣ ಸಂಪೂರ್ಣ ತಿಳಿಯಲು ದಯವಿಟ್ಟು ಸಂಪೂರ್ಣ ಓದಿ.

[do_widget id=et_ads-2]

ಅಭಿಡೆಂಟ್ ಕಂಪನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಬಚಾವಾಗಿದ್ದಾರೆ. ಪ್ರಕರಣದ ಆರೋಪಿ ಆಲಿ ಖಾನ್ ರವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದರಿಂದ ಈ ಮೂಲಕ ಜನಾರ್ದನ ರೆಡ್ಡಿ ಅವರಿಗೂ ಸಹ ಬಿಗ್ ರಿಲೀಫ್ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

[do_widget id=et_ads-3]

ಇದೇ ವೇಳೆ ಮಾತನಾಡಿದ ಆಲಿ ಖಾನ್ ಪರ ವಕೀಲರಾದ ಚಂದ್ರಶೇಖರ್ ರವರು ಸಿಸಿಬಿ ರವರು ರಾಜಕೀಯ ಒತ್ತಡಕ್ಕೆ ಮಣಿದು ಆಲಿಖಾನ್ ಅವರ ಮೇಲೆ ಕೇಸ್ ನಲ್ಲಿ ಸಿಕ್ಕಿ ಹಾಕಿಸಿ ಇದರ ಮೂಲಕ ಜನಾರ್ದನ ರೆಡ್ಡಿ ಹಣಿಯಲು ಪ್ರಯತ್ನಪಟ್ಟಿದ್ದಾರೆ.  ಯಾವುದೋ ಒಂದು ಕೇಸ್ ನಲ್ಲಿ ರೆಡ್ಡಿ ಅವರ ಹೆಸರು ತರಬೇಕು ಎಂದು ರಾಜಕೀಯ ನಾಯಕರು ಪ್ರಯತ್ನ ಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

[do_widget id=et_ads-4]

ಈ ಹುನ್ನಾರದ ವಿರುದ್ಧವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು, ನಮ್ಮ ಮೊರೆಯನ್ನು ಕೇಳಿದ ನ್ಯಾಯಾಲಯವು ಆಲಿ ಖಾನ್ ರವರಿಗೆ ಜಾಮೀನು ಮಂಜೂರು ಮಾಡಿದೆ ಈ ಮೂಲಕ ನಮ್ಮ ಕಡೆ ಸತ್ಯ ಇದೆ ಎಂಬುದು ಸಾಬೀತಾಗಿದೆ ಸಿಸಿಬಿ ಪೊಲೀಸರು ರಾಜಕೀಯ ನಾಯಕರ ಕೈಗೊಂಬೆಯಾಗಿರುವ ಅತ್ಯಂತ ವಿಷಾದನೀಯ ಸಂಗತಿ ಎಂದು ಹೇಳಿದ್ದಾರೆ.

[do_widget id=et_ads-5]

ಕಂಪನಿಯು ಸಾರ್ವಜನಿಕ ವಂಚನೆ ಮಾಡಿದ್ದಾರೆ ಎಂದು ಕಳೆದ ಕೆಲವು ತಿಂಗಳುಗಳ ಹಿಂದೆ ದೂರು ದಾಖಲಾಗಿತ್ತು, ಇದನ್ನು ಸಿಸಿಬಿ ರವರಿಗೆ ಸಹ ವರ್ಗಾಯಿಸಲಾಗಿತ್ತು ಆದರೆ ಆಲಿ ಖಾನ್ ರವರಿಗೆ ಹಾಗೂ ಜನಾರ್ದನ ರೆಡ್ಡಿಗೂ ಕೇವಲ ಸ್ನೇಹವಿದೆ ಹೊರತು ಜನಾರ್ಧನರೆಡ್ಡಿ ಅವರಿಗೆ ಅಭಿಡೆಂಟ್ ಕಂಪನಿಯ ಜೊತೆ ಯಾವುದೇ ವ್ಯವಹಾರ ಸಂಬಂಧಗಳು ಇಲ್ಲ ಎಂದು ಚಂದ್ರಶೇಖರ್ ಇದೇ ವೇಳೆ ತಿಳಿಸಿದ್ದಾರೆ.

[do_widget id=et_ads-6]

ಕಂಪನಿ ವಿರುದ್ಧ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಬೇಕಿತ್ತು ಆದರೆ ಸಿಸಿಬಿ ಪೊಲೀಸರು ಅದನ್ನು ಬಿಟ್ಟು ಯಾವುದೋ ಒಂದು ಇಲ್ಲ ಸಲ್ಲದ ಫೋಟೋಗಳನ್ನು ತೋರಿಸಿ ಯಾವುದೋ ಸಂದರ್ಭದಲ್ಲಿ ವ್ಯಕ್ತಿ ಜೊತೆ ಇದ್ದಂತಹ ಫೋಟೋವನ್ನು ಸಿಸಿಬಿ ಪೊಲೀಸರು ದುರ್ಬಳಕೆ ಮಾಡಿಕೊಂಡು ಕೇವಲ ಆಲಿಖಾನ್ ಅವರ ಜೊತೆ ಫೋಟೋ ಇದ್ದ ಮಾತ್ರಕ್ಕೆ ರೆಡ್ಡಿ ರವರು ಆಲಿಖಾನ್ ಅವರ ಎಲ್ಲಾ ವ್ಯವಹಾರಗಳಿಗೆ ತಲೆ ತುರಿಸುತ್ತಾರೆ ಎಂಬುದು ಶುದ್ಧ ಸುಳ್ಳು ಈ ಪ್ರಕರಣವು ಕೇವಲ ರೆಡ್ಡಿ ಅವರನ್ನು ಹಣಿಯಲು ಎಂದು ಚಂದ್ರಶೇಖರ್ ಇದೇ ವೇಳೆ ತಿಳಿಸಿದ್ದಾರೆ.

[do_widget id=et_ads-7]