ಜಯಮಾಲಾ: ಒಂದು ಜಯಂತಿಗೆ ಯಾಕೆ ಇಷ್ಟೊಂದು ವಿವಾದ ! ಮೇಡಂ ಇಲ್ಲಿದೆ ನೋಡಿ ಉತ್ತರ

ಜಯಮಾಲಾ: ಒಂದು ಜಯಂತಿಗೆ ಯಾಕೆ ಇಷ್ಟೊಂದು ವಿವಾದ ! ಮೇಡಂ ಇಲ್ಲಿದೆ ನೋಡಿ ಉತ್ತರ

0

ಕರ್ನಾಟಕದ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಜಯಮಾಲಾ ರವರು ಟಿಪ್ಪು ಜಯಂತಿಯ ಕುರಿತು ಅದನ್ನು ವಿರೋಧಿಸುತ್ತಿರುವ ನಾಯಕರಿಗೆ ಕೇವಲ ಒಂದು ಜಯಂತಿಯ ಆಚರಣೆಯ ಕುರಿತು ಯಾಕೆ ಇಷ್ಟೊಂದು ವಿವಾದ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ನಾವು ಇಲ್ಲಿ ನೀಡುತ್ತಿದ್ದೇವೆ ನೋಡಿ ಸರಿಯಾದ ಉತ್ತರ.

[do_widget id=et_ads-2]

ನಿಮ್ಮ ಪ್ರಕಾರ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ನಾನು ಓದಿದ ಪುಸ್ತಕ ಗಳಲ್ಲಿಯೂ ಸಹ ಮೈಸೂರಿನ ಹುಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತ ಇಷ್ಟೇ ಅಲ್ಲದೆ ಟಿಪ್ಪುವಿನ ಸಾಹಸಗಳನ್ನು ಸಮಾಜ ವಿಜ್ಞಾನ ಪುಸ್ತಕದಲ್ಲಿ ನಿಮ್ಮದೇ ಆದ ಕಾಂಗ್ರೆಸ್ ಸರ್ಕಾರ ಪ್ರಿಂಟ್ ಮಾಡಿಸಿತ್ತು.

[do_widget id=et_ads-3]

ಅದನ್ನು ಓದಿದ ನಾವು ಯಾವುದೇ ಇತಿಹಾಸದ ಅರಿವಿಲ್ಲದೆ ಮೈಸೂರಿನ ಹುಲಿ ಟಿಪ್ಪು ಸುಲ್ತಾನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವು. ನಾವು ಆಗ ಚಿಕ್ಕ ಮಕ್ಕಳು ಶಾಲೆಯಲ್ಲಿ ಓದುವುದೇ ಕಷ್ಟವಾಗಿತ್ತು ಇನ್ನು ಹೊರಗೆ ಬಂದು ಇತಿಹಾಸ ಓದುವುದೇ?? ಸಾಧ್ಯವೇ ಇಲ್ಲ. ಆದರೆ ನಿಮಗೆ ತಿಳಿದಿರುವ ಹಾಗೆ ಸತ್ಯವನ್ನು ಹೆಚ್ಚಿನ ಕಾಲ ಮುಚ್ಚಿಡಲು ಸಾಧ್ಯವಿಲ್ಲ.

[do_widget id=et_ads-4]

ವೃತ್ತಿಗಾಗಿಯೋ ಅಥವಾ ದೇಶದ ಮೇಲೆ ಆಸಕ್ತಿಯೋ ತಿಳಿದಿಲ್ಲ ನಾವು ಇತಿಹಾಸಗಳನ್ನು ಓದಲು ಪ್ರಾರಂಭಿಸಿದೆವು ನಿಮ್ಮ ಸರ್ಕಾರ ಪ್ರಿಂಟ್ ಮಾಡಿದ ಪುಸ್ತಕಗಳನ್ನು ಬಿಟ್ಟು ಬೇರೆ ಬೇರೆ ಪುಸ್ತಕಗಳನ್ನು ಓದಿ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಪಟ್ಟೆವು ಅಂತಹ ಸಮಯದಲ್ಲಿ ಹಲವಾರು ಲೇಖಕರ ಪುಸ್ತಕಗಳನ್ನು ಓದಿದ ನಮಗೆ ಟಿಪ್ಪುವಿನ ಅಸಲಿ ರೂಪ ಬಯಲಾಗಿತ್ತು.

[do_widget id=et_ads-5]

ಟಿಪ್ಪು ನಿಜವಾಗಿಯೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ನಲ್ಲ ಆತ ಕೇವಲ ತನ್ನ ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ತನ್ನ ಧರ್ಮದ ವಿಸ್ತಾರಕ್ಕಾಗಿ ಹಲವಾರು ಹಿಂದೂಗಳನ್ನು ದಾರುಣವಾಗಿ ಕೊಂದ, ನೀವು ಹೇಳುತ್ತೀರಾ ಆತ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಅಡವಿಟ್ಟಿದ್ದ , ದೇಶವನ್ನು ಉಳಿಸಿಕೊಳ್ಳಲು ಎಂದು ಆದರೆ ಇತಿಹಾಸ ಹೇಳುತ್ತದೆ ಆತ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರಿಗೆ ಮಮಕಾರ ವಿಲ್ಲದೆ ಮಕ್ಕಳನ್ನು ಅಡವಿಟ್ಟಿದ್ದ ಎಂದು.

[do_widget id=et_ads-6]

ಇಷ್ಟೇ ಅಲ್ಲದೆ ಟಿಪ್ಪುವಿನ ಇತಿಹಾಸ ಕೆದಕುತ್ತಾ ಹೋದರೆ ಮತ್ತಷ್ಟು ಕೆಟ್ಟ ಸಂಗತಿಗಳು ನಮಗೆ ತಿಳಿದು ಬರುತ್ತವೆ ಆದರೆ ಎಲ್ಲವನ್ನೂ ನಾವು ಇಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಯಾಕೆಂದರೆ ಆತನ ಬಗ್ಗೆ ಮತ್ತು ಆತನ ಕೃತ್ಯಗಳ ಬಗ್ಗೆ ಬರೆಯುತ್ತಾ ಹೋದರೆ ಒಂದು ಪುಸ್ತಕ ವಾಗುತ್ತದೆ. ನೆನಪಿರಲಿ ಮೇಡಂ ನಾವು ಇಲ್ಲಿ ವಿರೋಧಿಸುತ್ತಿರುವುದು ಕೇವಲ ಒಬ್ಬ ಟಿಪ್ಪುವನ್ನು, ಬದಲಾಗಿ ಧರ್ಮವನ್ನು ಅಲ್ಲ. ನಮಗೆ ಯಾವ ಧರ್ಮದ ಮೇಲೆಯೂ ಸಹ ಕೋಪವಿಲ್ಲ. ನೀವು ಜಯಂತಿಯನ್ನು ಆಚರಿಸಬೇಕು ಎಂದು ಕೊಂಡರೆ ಅಬ್ದುಲ್ ಕಲಾಂರ ಜಯಂತಿಯನ್ನು ಆಚರಿಸಿ, ನಿಮ್ಮ ಜೊತೆ ಕೂಡಿ ನಾವು ಹೆಮ್ಮೆಯಿಂದ ಆಚರಿಸುತ್ತೇವೆ.

[do_widget id=et_ads-7]

ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುತ್ತಿರುವ ನೀವು ಹಲವಾರು ಸ್ವಾತಂತ್ರ ಹೋರಾಟಗಾರರ ರಕ್ತದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದನ್ನು ತಿಳಿದುಕೊಳ್ಳಿ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಹೇಳುತ್ತಾ ಹೋದರೆ ಹಲವಾರು ನಮ್ಮ ಪ್ರೀತಿಯ ನಾಯಕರು ಸ್ವಾತಂತ್ರ್ಯಕ್ಕಾಗಿ ಮರಣ ಹೊಂದಿದ್ದಾರೆ ನೀವ್ಯಾಕೆ ಆ ಜಯಂತಿಗಳನ್ನು ಆಚರಿಸಬಾರದು ?? ನಿಮಗ್ಯಾಕೆ ಕೇವಲ ಟಿಪ್ಪು ಜಯಂತಿ ಬೇಕು? ಈಗ ನೀವು ಉತ್ತರಿಸಿ.

[do_widget id=et_ads-8]