ಟಿಪ್ಪು ವಿವಾದ: ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲ್ ಹಾಕಿದ ಆರ್ ಅಶೋಕ್

ಟಿಪ್ಪು ವಿವಾದ: ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲ್ ಹಾಕಿದ ಆರ್ ಅಶೋಕ್

0

ರಾಜ್ಯದಲ್ಲಿ ಟಿಪ್ಪು ಜಯಂತಿ ಹತ್ತಿರ ಬಂದಿದೆ, ಇದರಿಂದ ಟಿಪ್ಪು ಪರ ವಿರೋಧ ಹೇಳಿಕೆಗಳು ಹೆಚ್ಚಾಗುತ್ತಿವೆ. ಒಂದು ಕಡೆ ರಾಜ್ಯ ಸರ್ಕಾರ ನವಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರೆ, ಇನ್ನೊಂದು ಕಡೆ ಟಿಪ್ಪು ಜಯಂತಿಯನ್ನು ತಡೆಯುತ್ತೇವೆ ಎಂದು ಬಿಜೆಪಿ ನಾಯಕರು ತೊಡೆ ತಟ್ಟಿದ್ದಾರೆ.

[do_widget id=et_ads-2]

ಇದೇ ವಿಷಯವಾಗಿ ಮಾತನಾಡಿದ ಪರಮೇಶ್ವರ್ ಅವರು ಒಂದು ವೇಳೆ ಟಿಪ್ಪು ಜಯಂತಿಯನ್ನು ತಡೆಯುವ ಯಾವುದೇ ಪ್ರಯತ್ನ, ಪ್ರತಿಭಟನೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಟಿಪ್ಪು ವಿರುದ್ಧ ಪೋಸ್ಟ್ಗಳು ಕಂಡುಬಂದಲ್ಲಿ ಅವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಬಹಿರಂಗ ಎಚ್ಚರಿಕೆಯನ್ನು ನೀಡಿದ್ದಾರೆ.

[do_widget id=et_ads-3]

ಇದರಿಂದ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿದೆ. ಈ ಹೇಳಿಕೆಗಳಿಗೆ ಉತ್ತರಿಸಿದ ಮಾಜಿ ಡೆಪ್ಯೂಟಿ ಸಿಎಂ ರವರಾದ ಆರ್ ಅಶೋಕ್ ರವರು ಟಿಪ್ಪು ಒಬ್ಬ ಕನ್ನಡ ದ್ವೇಷಿ, ಪರ್ಷಿಯನ್ ಭಾಷೆಯ ಪ್ರೇಮಿ, ಮೈಸೂರು ಅರಸರನ್ನು ದಿಗ್ಬಂಧನ ಮಾಡಿದ್ದು ಟಿಪ್ಪು, ಇನ್ನೂ ಹಲವಾರು ಇತಿಹಾಸಗಳನ್ನು ಕೆದಕಿದ ಆರ್ ಅಶೋಕ್ ರವರು ಟಿಪ್ಪು ಜಯಂತಿ ಆಚರಣೆ ಮಾಡಲು ಸರ್ಕಾರ ಮುಂದಾಗಿರುವುದು ಒಂದು ವಿಷಾದನೀಯ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

[do_widget id=et_ads-4]

ಇದೇ ವೇಳೆಯಲ್ಲಿ ಮಾತನಾಡಿದ ಆರ್ ಅಶೋಕ್ ಅವರು ಇಡೀ ರಾಜ್ಯ ದಂತ ಯುವ ಬಿಜೆಪಿ ಕಾರ್ಯಕರ್ತರು ಅದರಲ್ಲಿಯೂ ಮುಖ್ಯವಾಗಿ ಮೈಸೂರು ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಜೋರಾಗಿರುತ್ತದೆ.

[do_widget id=et_ads-5]

ನಾಯಕ ಸಮುದಾಯದ 20 ಸಾವಿರ ಜನರನ್ನು ಮತಾಂತರ ಮಾಡಿದ್ದು ಈ ಟಿಪ್ಪುಗೆ ಕೊಡಗು ಭಾಗದ ಲಕ್ಷಾಂತರ ಜನರನ್ನು ಒತ್ತಾಯದಿಂದ ಮತಾಂತರ ಮಾಡಿದ ಎಂದು ಆರೋಪಿಸಿದ ಅಶೋಕ್ ರವರು, ಕೇವಲ ಹಿಂದೂಗಳನ್ನು ಹತ್ಯೆ ಮಾಡಲಿಕ್ಕಾಗಿ ಒಂದು ಖಡ್ಗವನ್ನು ಟಿಪ್ಪು ಬಳಸುತ್ತಿದ್ದ ಅದರ ಮೇಲೆ ಹಿಂದೂಗಳ ಹತ್ಯೆ ಮಾಡಲು ಎಂದು ಬರೆದಿತ್ತು ಎಂಬುದನ್ನೂ ಬಹಿರಂಗಪಡಿಸಿದ ಆರ್ ಅಶೋಕ್ ರವರು ನಾವು ಪ್ರತಿಭಟನೆ ಮಾಡಿಯೇ ತೀರುತ್ತೇವೆ ದಮ್ಮಿದ್ದರೆ ನಮ್ಮನ್ನು ಬಂಧಿಸಿ ಎಂದು ಮೈತ್ರಿ ಸರಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

[do_widget id=et_ads-6]