ಅಯೋಧ್ಯೆ ನಂತರ ಬೆಂಗಳೂರಿನಲ್ಲಿ ರಾಮಮಂದಿರ ನಿರ್ಮಾಣ: ಆರ್ ಅಶೋಕ್

ಅಯೋಧ್ಯೆ ನಂತರ ಬೆಂಗಳೂರಿನಲ್ಲಿ ರಾಮಮಂದಿರ ನಿರ್ಮಾಣ: ಆರ್ ಅಶೋಕ್

0

ಹೌದು ಇದ್ದಕ್ಕಿದ್ದ ಹಾಗೆ ಆರ್ ಅಶೋಕ್ ರವರು ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸನ್ನು ಹೊತ್ತಿರುವ ಹಲವಾರು ಹಿಂದುಗಳಿಗೆ ಆ ಕನಸು ಇನ್ನು ಕೆಲವೇ ದಿನಗಳಲ್ಲಿ ನಿಜವಾಗುತ್ತದೆ ಎಂಬ ಆಶಾಭಾವನೆ ಈಗಾಗಲೇ ಉಂಟಾಗಿದೆ. ನರೇಂದ್ರ ಮೋದಿ ಅವರು ಸುಗ್ರೀವಾಜ್ಞೆ ಹೊರಡಿಸಲು ಪ್ರತಿಯೊಬ್ಬರು ಕಾಯುತ್ತಿದ್ದಾರೆ.

[do_widget id=et_ads-2]

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ ರವರು ಅಯೋಧ್ಯೆಯಲ್ಲಿ ಖಂಡಿತ ರಾಮಮಂದಿರ ನಿರ್ಮಾಣ ವಾಗಲಿದೆ ಅದೇ ರೀತಿ ಬೆಂಗಳೂರಿನಲ್ಲಿಯೂ ಸಹ ರಾಮಮಂದಿರ ನಿರ್ಮಾಣ ಮಾಡುವ ಯೋಜನೆ ನನ್ನ ಬಳಿ ಇದೆ.,ಅಯೋಧ್ಯೆಯಲ್ಲಿ ರಾಮಮಂದಿರದ ನಂತರ ಬೆಂಗಳೂರಿನಲ್ಲಿ ನಿರ್ಮಿಸುತ್ತೇವೆ ಎಂದು ಆರ್ ಅಶೋಕ್ ಅವರು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.

[do_widget id=et_ads-3]

ಇನ್ನು ಇದೇ ವೇಳೆ ಮಾತನಾಡಿದ ಆರ್ ಅಶೋಕ್ ರವರು ರಾಮ ಒಬ್ಬ ಮಹಾನ್ ಮರ್ಯಾದ ಪುರುಷೋತ್ತಮ ಇಡೀ ಭಾರತವೇ ಆತನಿಗೆ ಗೌರವ ನೀಡುತ್ತದೆ. ರಾಮಮಂದಿರ ವಿಚಾರದಲ್ಲಿ ಇಡೀ ಭಾರತೀಯರು ಒಂದಾಗಲಿದ್ದಾರೆ. ಕಳೆದ ಏಳು ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಪರಿಕರಗಳು ಅಯೋಧ್ಯೆಯಲ್ಲಿ ಇವೆ ಆದರೆ ಹಲವಾರು ತೊಡಕುಗಳಿಂದ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿರುವುದರಿಂದ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

[do_widget id=et_ads-4]