ಟಿಪ್ಪು ಜಯಂತಿಗೆ ಕಡಕ್ ಉತ್ತರ ನೀಡಿದ ಪ್ರತಾಪ್ ಸಿಂಹ

ಟಿಪ್ಪು ಜಯಂತಿಗೆ ಕಡಕ್ ಉತ್ತರ ನೀಡಿದ ಪ್ರತಾಪ್ ಸಿಂಹ

0

ಮೊದಲಿನಿಂದಲೂ ಕರ್ನಾಟಕದಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿರುವ ಪ್ರಮುಖ ನಾಯಕರಲ್ಲಿ ಸಂಸದರಾದ ಪ್ರತಾಪ್ ಸಿಂಹ ರವರ ಹೆಸರು ಮೊದಲನೇ ಸಾಲಿನಲ್ಲಿ ಕಂಡುಬರುತ್ತದೆ. ಹಲವಾರು ಇತಿಹಾಸಗಳನ್ನು ಕೆದಕಿರುವ ಪ್ರತಾಪ್ ಸಿಂಹರವರು ದಾಖಲೆಗಳ ಮೂಲಕ ಟಿಪ್ಪು ಜಯಂತಿಯನ್ನು ಆಚರಿಸಬಾರದು ಎಂದು ಪ್ರತಿ ಬಾರಿಯೂ ವಿರೋಧಿಸುತ್ತಾರೆ.

[do_widget id=et_ads-2]

ಈಗಾಗಲೇ ನವಂಬರ್ 10ರಂದು ರಾಜ್ಯ ಸರ್ಕಾರವು ಈ ಬಾರಿ ಟಿಪ್ಪು ಜಯಂತಿಯನ್ನು ಆಚರಿಸಲು ನಿಗದಿ ಮಾಡಿದೆ. ಆದ್ದರಿಂದ ರಾಜ್ಯ ಸರ್ಕಾರಕ್ಕೆ ಟಿಪ್ಪು ಜಯಂತಿ ಯನ್ನು ಮಾಡುವ ಬದಲಾಗಿ ನಿಮಗೆ ಮಾನ ಮರ್ಯಾದೆ ಎಂಬುದು ಇದ್ದರೆ ದಯವಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯನ್ನು ಆಚರಿಸಿ  ಎಂದು ಹೇಳಿದ್ದಾರೆ.

[do_widget id=et_ads-3]

ಇದೇ ವೇಳೆ ಮಾತನಾಡಿದ ಪ್ರತಾಪ್ ಸಿಂಹರವರು ಕೊಡಗಿನಲ್ಲಿ ಟಿಪ್ಪು ಹೆಸರನ್ನು ನಾಯಿಗಳಿಗೆ ಇಡುತ್ತಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ಸರ್ಕಾರವು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಜಯಂತಿಯನ್ನು ಆಚರಿಸುತ್ತಾರೆ, ಇದಕ್ಕೆ ಜನರ ಆಕ್ರೋಶವೇ ಕಾರಣ, ಜನರ ಭಾವನೆಗಳಿಗೆ ಬೆಲೆ ಕೊಡದೆ ನಾಲ್ಕು ಗೋಡೆಗಳ ಮಧ್ಯೆ ಪೊಲೀಸರ ಭದ್ರತೆಯಲ್ಲಿ  ಕದ್ದು ಮುಚ್ಚಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

[do_widget id=et_ads-4]

ಮೈಸೂರಿಗೆ ಯದುವಂಶದ ಕೊಡುಗೆ ಅಪಾರ, ಸಾಕಷ್ಟು ಕೊಡುಗೆಗಳನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ್ದಾರೆ ಹೀಗಾಗಿ ನಿಮಗೆ ಪ್ರೀತಿ ಗೌರವ ಇದ್ದರೆ ದಯವಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯನ್ನು ಆಚರಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ.

[do_widget id=et_ads-5]