ಬಯಲಾಯಿತು ಮೈತ್ರಿ ಸರ್ಕಾರದ 180 ಕೋಟಿ ಹಗರಣ..!!

ಬಯಲಾಯಿತು ಮೈತ್ರಿ ಸರ್ಕಾರದ 180 ಕೋಟಿ ಹಗರಣ..!!

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅಧಿಕಾರ ನಡೆಯುತ್ತಿದೆ. ರಾಜ್ಯ ರಾಜಧಾನಿಯಾದ ಬೆಂಗಳೂರು ಮಹಾನಗರದ ಅಧ್ಯಕ್ಷಗಿರಿ ಅಲ್ಲಿಯೂ ಸಹ ಮೈತ್ರಿ ಸರ್ಕಾರವು ಬಹುಮತವನ್ನು ನಿರೂಪಿಸಿ ಇತ್ತೀಚೆಗಷ್ಟೇ ಹೊಸ ಮೇಯರ್ ಅನ್ನು ಆಯ್ಕೆ ಮಾಡಿದ್ದರು. ಆದರೆ ಆಯ್ಕೆಯಾದ ತಕ್ಷಣ ತಮ್ಮ ಪ್ರಥಮ ಸಭೆಯಲ್ಲಿ ಪರಮಾಧಿಕಾರವನ್ನು ಚಲಾಯಿಸಿ ಬರೋಬ್ಬರಿ 180 ಕೋಟಿ ರೂ ಕಸದ ಟೆಂಡರ್ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

[do_widget id=et_ads-2]

ರಾಜ್ಯ ಹೈಕೋರ್ಟಿನ ಬಳಿ ಛೀಮಾರಿ ಹಾಕಿಸಿಕೊಂಡು ಬೆಂಗಳೂರು ಮಹಾನಗರದ ಕಸ ಎತ್ತಲು ವಿಫಲವಾಗಿರುವ ಈ ಕಂಪನಿಗೆ ಮೇಯರ್ ಗಂಗಾಂಬಿಕೆ ರವರು ಮೊದಲ ಸಭೆಯಲ್ಲಿ 180 ಕೋಟಿ ಟೆಂಡರನ್ನು ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಈ ಕಂಪನಿಯು ಬೆಂಗಳೂರು ಕಸ ಎತ್ತುವಲ್ಲಿ ವಿಫಲವಾಗಿತ್ತು ಈ ಕಾರಣದಿಂದಾಗಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿತ್ತು.

[do_widget id=et_ads-5]

ಕೋರ್ಟ್ ಆದೇಶ ನೀಡಿದ್ದರೂ ಈ ಸಂಸ್ಥೆ ಕಸ ತೆಗೆಯಲು ಸಂಪೂರ್ಣ ವಿಫಲವಾಗಿ ಆದೇಶಗಳನ್ನು ಸಹ ಉಲ್ಲಂಘಿಸಿತ್ತು ಇಂತಹ ಸಂಸ್ಥೆಗೆ ನೇರವಾಗಿ 180 ಕೋಟಿ ರೂಗಳ ಟೆಂಡರನ್ನು ನೀಡಲು ನಿರ್ಧರಿಸಿರುವ ಗಂಗಾಂಬಿಕೆ ರವರ ವಿರುದ್ಧ ಹಲವಾರು ನಾಯಕರು ಧ್ವನಿ ಎತ್ತಿದ್ದಾರೆ ಮತ್ತು ಅವರ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

[do_widget id=et_ads-4]

ಈ ಟೆಂಡರ್ ನೀಡಿರುವ ಹಿಂದೆ ಕಾಣದ ಕೈವಾಡ ಇದೆ ಎಂಬುದು ನಮ್ಮ ಅಭಿಪ್ರಾಯ ಯಾಕೆಂದರೆ ಒಂದು ವಿಫಲವಾದ ಸಂಸ್ಥೆಯ ಕೈಯಲ್ಲಿ ಮತ್ತೆ ಅದೇ ಕೆಲಸವನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ ಅದು ಕೇವಲ 1 ಕೋಟಿ 2 ಕೋಟಿ ಬೆಲೆ ಬಾಳುವಷ್ಟು ಟೆಂಡರ್ ಅಲ್ಲ ಬರೋಬ್ಬರಿ 180 ಕೋಟಿ ಬೆಲೆಬಾಳುವ ಟೆಂಡರ್. ಜನರು ಕಷ್ಟಪಟ್ಟು ದುಡಿದು ಅದರಲ್ಲಿ ತೆರಿಗೆ ಕಟ್ಟಿದರೆ ಅಧಿಕಾರಕ್ಕೆ ಬಂದ ನಾಯಕರು ಈ ರೀತಿ ತೆರಿಗೆ ಹಣವನ್ನು ದುರ್ವಿನಿಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮ್ಮ ಅಭಿಪ್ರಾಯ

[do_widget id=et_ads-3]