ನರೇಂದ್ರ ಮೋದಿ ಅವರು ಈ ಹಿಂದಿನ ಎಲ್ಲಾ ಪ್ರಧಾನಿ ಗಳಿಗಿಂತ ಹೆಚ್ಚಿನ ಪ್ರಸಿದ್ಧರು. ಯಾವ ಪ್ರಧಾನಿ ಗಳಿಗೂ ಇಲ್ಲದಂತಹ ಅಭಿಮಾನಿಗಳು ನರೇಂದ್ರ ಮೋದಿ ಅವರಿಗೆ ಇದ್ದಾರೆ ಎಂದರೆ ನೀವು ನಂಬಲೇಬೇಕು, ತಮ್ಮನ್ನು ತಾವು ನಮೋ ಭಕ್ತರು ಎಂದು ಗುರುತಿಸಿಕೊಳ್ಳುವ ನರೇಂದ್ರ ಮೋದಿ ಅಭಿಮಾನಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ.
[do_widget id=et_ads-2]
ನರೇಂದ್ರ ಮೋದಿಯವರನ್ನು ಏನು ಮಾಡಿದರು ಈಗ ಬಹು ದೊಡ್ಡ ಸುದ್ದಿಯಾಗುತ್ತದೆ, ಅದಕ್ಕೆ ನರೇಂದ್ರ ಮೋದಿರವರ ಕುರ್ತಾ ಜಾಕೆಟ್ಗಳು ಹೊರತಲ್ಲ. ಹೌದು ನರೇಂದ್ರ ಮೋದಿ ರವರು ತೊಡುವ ಕುರ್ತ ಹಾಗೂ ಜಾಕೆಟ್ಗಳು ಬಹಳ ಪ್ರಸಿದ್ಧವಾಗಿವೆ. ಅದರಲ್ಲಿಯೂ ಮೋದಿ ತೊಟ್ಟಿದ್ದ ಕುರ್ತಾ ಜಾಕೆಟ್ ಗಳನ್ನು ದಕ್ಷಿಣ ಕೊರಿಯಾದ ಅಧ್ಯಕ್ಷ ಹೊಗಳಿ ಉಡುಗೊರೆಯಾಗಿ ಪಡೆದ ಮೇಲೆ ಯುವ ಜನಾಂಗದಲ್ಲಿ ಹೊಸ ಫ್ಯಾಶನ್ ಸೃಷ್ಟಿಯಾಗಿದೆ.
[do_widget id=et_ads-3]
ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಖಾದಿ ಇಂಡಿಯಾ ಕಂಪನಿಯು ಮೋದಿ ರವರ ಕೂರ್ತ ಜಾಕೆಟ್ ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು. ನವದೆಹಲಿಯ 7 ವಸ್ತ್ರ ಭಂಡಾರಗಳಲ್ಲಿ ಪ್ರತಿದಿನವೂ 1400 ಕ್ಕಿಂತಲೂ ಹೆಚ್ಚು ಮೋದಿ ಶೈಲಿಯ ವಸ್ತುಗಳು ಮಾರಾಟವಾಗುತ್ತವೆ ಎಂದರೆ ನೀವು ನಂಬಲೇಬೇಕು. ಇದರಿಂದ ಖಾದಿ ಇಂಡಿಯಾ ಕಂಪನಿಗೆ ಹೆಚ್ಚು ಲಾಭವಾಗುತ್ತಿದ್ದು ಮತ್ತಷ್ಟು ಮೋದಿ ರವರ ಜಾಕೆಟ್ ಡಿಸೈನ್ ಗಳನ್ನು ತಯಾರು ಮಾಡಿ ಮಾರಾಟಕ್ಕೆ ಇಡುತ್ತೇವೆ ಎಂದಿದ್ದಾರೆ.
[do_widget id=et_ads-4]