ಹರಕೆಯ ಕುರಿ ಆಗುವವರೇ ಮಧು ಬಂಗಾರಪ್ಪ

ಹರಕೆಯ ಕುರಿ ಆಗುವವರೇ ಮಧು ಬಂಗಾರಪ್ಪ

0

ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದ ಉಪಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಹೊರಬೀಳಲಿದೆ. ಅಷ್ಟರಲ್ಲಾಗಲೇ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಅದರಂತೆ ನಾವು ಶಿವಮೊಗ್ಗ ಕ್ಷೇತ್ರದ ಚುನಾವಣೆಯ ಲೆಕ್ಕಾಚಾರಗಳನ್ನು ನೋಡಿದಾಗ ಮಧು ಬಂಗಾರಪ್ಪನವರು ಹರಕೆಯ ಕುರಿ ಆಗುವವರೇ ಎಂಬ ಪ್ರಶ್ನೆ ಎಲ್ಲರಲ್ಲಿ ಹುಟ್ಟಿಕೊಳ್ಳುತ್ತದೆ.

[do_widget id=et_ads-2]

ಮೊದಲಿನಿಂದಲೂ ಶಿವಮೊಗ್ಗದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿಕೊಂಡು ಬಂದಿರುವ ಯಡಿಯೂರಪ್ಪನವರ ಮಗನಾದ ಬಿ ಎಸ್ ರಾಘವೇಂದ್ರರವರು ಮಧು ಬಂಗಾರಪ್ಪ ರವರ ವಿರುದ್ಧ ಸ್ಪರ್ಧಿಸಿದ್ದಾರೆ. ಹಲವಾರು ಕಾಂಗ್ರೆಸ್ ನಾಯಕರು ಈಗಾಗಲೇ ಶಿವಮೊಗ್ಗದಲ್ಲಿ ಸೋಲುತ್ತೇವೆ ಎಂದು ಸೋಲನು ಒಪ್ಪಿಕೊಂಡಿದ್ದಾರೆ. ಆದರೆ ಮಧು ಬಂಗಾರಪ್ಪ ನವರಿಗೆ ಎಲ್ಲೋ ಒಂದು ಕಡೆ ಆಸೆ ಇದೆ ಎಂದರೆ ತಪ್ಪಾಗಲಾರದು.

[do_widget id=et_ads-4]

ಯಾಕೆಂದರೆ ಈ ಬಾರಿ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರ ಕಣಕ್ಕಿಳಿದಿದ್ದಾರೆ. ಸೋಲು ಖಚಿತ ಎಂದು ಗೊತ್ತಿದ್ದರೂ ಕಣಕ್ಕಿಳಿದ ಮಧು ಬಂಗಾರಪ್ಪನವರ ಮೈತ್ರಿ ಸರ್ಕಾರದ ನೆಪವೊಡ್ಡಿ ಗೆಲ್ಲುವ ಕನಸನ್ನು ಕಾಣುತ್ತಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬಿಎಸ್ವೈ ವರ್ಚಸ್ಸು ಶಿವಮೊಗ್ಗದಲ್ಲಿ ಹೆಚ್ಚಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಹೀಗಿರುವಾಗ ಗೆಲುವು ಕಷ್ಟ.

[do_widget id=et_ads-3]