ಶೃತಿ- ಸರ್ಜಾ ಮೀ – ಟು ಪ್ರಕರಣಕ್ಕೆ ಬಿಗ್ ಪೊಲಿಟಿಕಲ್ ಟ್ವಿಸ್ಟ್

ಶೃತಿ- ಸರ್ಜಾ ಮೀ – ಟು ಪ್ರಕರಣಕ್ಕೆ ಬಿಗ್ ಪೊಲಿಟಿಕಲ್ ಟ್ವಿಸ್ಟ್

0

ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ವಿಸ್ಮಯ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾಗುತ್ತಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ತಲ್ಲಣಗೊಳಿಸಿದೆ. ಕ್ಷಣಕ್ಷಣವೂ ಹೊಸ ತಿರುವುಗಳನ್ನು ಪಡೆದು ಕೊಳ್ಳುತ್ತಿರುವ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ರವರ ಮೀಟು ಪ್ರಕರಣ ದಿನೇ ದಿನೇ ಹೆಚ್ಚು ಸುದ್ದಿಯಾಗುತ್ತದೆ. ಹಲವಾರು ತಿರುವುಗಳನ್ನು ಪಡೆದು ಕೊಂಡಿರುವ ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

[do_widget id=et_ads-2]

ಅಷ್ಟಕ್ಕೂ ಆ ತಿರುವು ಏನು ಗೊತ್ತಾ?

ಚಿತ್ರರಂಗದಿಂದ ಪ್ರಾರಂಭವಾದ ಈ ಪ್ರಕರಣ ಮೊದಲು ಎಡಪಂಥೀಯ ಮತ್ತು ಬಲಪಂಥೀಯ ರ ನಡುವಿನ ಕಾಳಗವಾಗಿ ಮಾರ್ಪಟ್ಟಿತ್ತು ಆದರೆ ಈಗ ಈ ಪ್ರಕರಣ ನೇರವಾಗಿ ದೇಶದ ಪ್ರಧಾನಿ  ಮೋದಿ ಅವರನ್ನು ತಲುಪಿದೆ. ಹೌದು ಈ ಪ್ರಕರಣ ಕೇವಲ ಸಾಮಾನ್ಯ ದಲ್ಲ ಎಂದು ಹಲವಾರು ಜನರು ಯೋಚಿಸುವಂತೆ ಮಾಡಿದೆ ಈ ತಿರುವು.

[do_widget id=et_ads-6]

ಇಂದು ಇದ್ದಕ್ಕಿದ್ದ ಹಾಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಜೆಪಿ ಎಂಎಲ್ಸಿ ತೇಜಸ್ವಿನಿ ರಮೇಶ್ ರವರು ಸಿಡಿಸಿದ ಬಾಂಬ್ ಗೆ ಹಲವಾರು ನಾಯಕರು ಒಂದು ಕ್ಷಣ ಶಾಕ್ ಆಗಿದ್ದಾರೆ.ಇವರ ಹೇಳಿಕೆಗಳನ್ನು ನೋಡಿದರೆ ಈ ಪ್ರಕರಣ ಅಷ್ಟು ಸುಲಭವಾಗಿ ಮುಗಿಯುವಂತೆ ಕಾಣುತ್ತಿಲ್ಲ.

[do_widget id=et_ads-5]

ಇದ್ದಕ್ಕಿದ್ದ ಹಾಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾದ ತೇಜಸ್ವಿನಿ ರಮೇಶ್ ರವರು ಈ ಪ್ರಕರಣಕ್ಕೆ ಕೇವಲ ಅರ್ಜುನ್ ಸರ್ಜಾ ರವರು ಟಾರ್ಗೆಟ್ ಅಲ್ಲ ಬದಲಾಗಿ ಈ ಪ್ರಕರಣದ ಮೂಲಕ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ಈ ಪ್ರಕರಣವನ್ನು ಎಡಪಂಥೀಯರು ಬೆಂಬಲಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

[do_widget id=et_ads-7]

ಹೌದು ಅರ್ಜುನ್ ಸರ್ಜಾ ಅವರು ಮೂಲತಹ ಆರ್ ಎಸ್ ಎಸ್ ಸಂಘಟನೆ ಯವರು ಆಗಿದ್ದು ಶೃತಿ ಬೆಂಬಲಕ್ಕೆ ನಿಲ್ಲುವ ವರೆಲ್ಲರೂ ಎಡಪಂಥೀಯರು ಆಗಿದ್ದಾರೆ.ಬೇಕಿದ್ದರೆ ನೀವು ಗಮನಿಸಿ ಪ್ರಕಾಶ್ ರೈ, ಚೇತನ್, ಕವಿತಾ ಲಂಕೇಶ್ ಎಲ್ಲರೂ ಮೋದಿ ವಿರೋಧಿಗಳು,  ಅರ್ಜುನ್ ಸರ್ಜಾ ರವರು ಮೋದಿಯನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಅರ್ಜುನ್ ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

[do_widget id=et_ads-4]

ತೇಜಸ್ವಿನಿ ರವರು ಇದ್ದಕ್ಕಿದ್ದ ಹಾಗೆ ಪೊಲೀಸ್ ಠಾಣೆಯಲ್ಲಿ ಯಾಕೆ ಪ್ರತ್ಯಕ್ಷವಾದರು ಎಂದು ಎಲ್ಲರೂ ಯೋಚಿಸುತ್ತಿರುವಾಗ ಅವರ ಹೇಳಿಕೆಗಳು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ದಿನೇದಿನೆ ಬಹಳ ತಿರುವುಗಳನ್ನು ಪಡೆದು ಕೊಳ್ಳುತ್ತಿರುವ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ರವರ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

[do_widget id=et_ads-3]