ಬುದ್ಧಿಜೀವಿಗಳಿಗೆ ಮಾತಿನ ಏಟು ಕೊಟ್ಟ ಯತ್ನಾಳ್

ಬುದ್ಧಿಜೀವಿಗಳಿಗೆ ಮಾತಿನ ಏಟು ಕೊಟ್ಟ ಯತ್ನಾಳ್

0

ವಿಜಯಪುರ ಶಾಸಕರಾದ ಬಸವಗೌಡ ಪಾಟೀಲ್ ಯತ್ನಾಳ್ ಅವರು ಮೊದಲಿನಿಂದಲೂ ಹಲವಾರು ದೇಶದ್ರೋಹಿಗಳಿಗೆ ಮಾತಿನಲ್ಲಿ ಏಟು ಕೊಡುವುದರಲ್ಲಿ ಪ್ರಸಿದ್ಧರು. ಈಗ ಮತ್ತೊಮ್ಮೆ ದೇಶದ್ರೋಹಿಗಳನ್ನು ಮತ್ತು ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್ ಅವರು ಭಾರತದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ಯಾವುದೇ ಭಯವಿಲ್ಲದೆ ನೇರ ನುಡಿ ಯಲ್ಲಿ ಮಾತನಾಡಿ ಎಲ್ಲರ ಬೆವರಿಳಿಸಿದ್ದಾರೆ.

[do_widget id=et_ads-2]

ಯೋಧರ ಮೇಲೆ ದಾಳಿ ಅಥವಾ ಹತ್ಯೆಯಾದಾಗ ಯಾವುದೇ ಬುದ್ಧಿಜೀವಿಗಳಗಲಿ ಅಥವಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಾಗಲಿ ಮುಂದೆ ಬರುವುದಿಲ್ಲ ಆ ಸಮಯದಲ್ಲಿ ಈ ಆಯೋಗಗಳು ಎಲ್ಲಿ ಇರುತ್ತವೆ ಎಂದು ಯಾರಿಗೂ ತಿಳಿದಿಲ್ಲ ಬದಲಾಗಿ ದೇಶದ್ರೋಹಿಗಳಿಗೆ ಹೊಡೆದರೆ ಮಾತ್ರ ಬುದ್ಧಿಜೀವಿಗಳು ಬಂದು ಪ್ರತಿಭಟನೆ ಮಾಡುತ್ತಾರೆ ಎಂದು ವಿಜಯಪುರದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

[do_widget id=et_ads-3]

ಹೆಮ್ಮೆಯ ಸೈನಿಕರನ್ನು ಕೊಂದಾಗ ಇವರೆಲ್ಲಾ ಎಲ್ಲಿ ಹೋಗಿರುತ್ತಾರೆ ಎಂದು ಪ್ರಶ್ನೆ ಮಾಡಿದ ಯತ್ನಾಳ್ ಅವರು ಕಾಶ್ಮೀರದಲ್ಲಿ ದೇಶದ್ರೋಹಿಗಳನ್ನು ಹತ್ಯೆ ಮಾಡಿದರೆ ಅಥವಾ ಧ್ವಜ ಸುಟ್ಟವರ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿದರೆ ಸಾಕು ಬುದ್ಧಿಜೀವಿಗಳಿಗೆ ಉರಿಯುತ್ತದೆ ಎಂದು ನೇರ ಮಾತುಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

[do_widget id=et_ads-4]