ಅಯ್ಯಪ್ಪ ದೇಗುಲದ ವಿಷಯದಲ್ಲಿ ನಾಲಿಗೆ ಹರಿಬಿಟ್ಟ ಪ್ರಕಾಶ್ ರೈ

ಅಯ್ಯಪ್ಪ ದೇಗುಲದ ವಿಷಯದಲ್ಲಿ ನಾಲಿಗೆ ಹರಿಬಿಟ್ಟ ಪ್ರಕಾಶ್ ರೈ

0

ದಕ್ಷಿಣ ಭಾರತದ ನಟರಾದ ಪ್ರಕಾಶ್ ರೈ ರವರು ಇದ್ದಕ್ಕಿದ್ದ ಹಾಗೆ ಎಲ್ಲೆಂದರಲ್ಲಿ ಕಾಣಿಸಿಕೊಂಡು ನಾಲಿಗೆ ಹರಿ ಬಿಡುವುದರಲ್ಲಿ ಪ್ರಸಿದ್ಧರು. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಪ್ರಕಾಶ್ ರೈ ಈಗ ಶಬರಿಮಲೆ ದೇಗುಲದ ವಿಷಯದಲ್ಲಿ ಮಾತನಾಡಿ ಮತ್ತೊಂದು ಬೃಹತ್ ವಿವಾದವನ್ನು ಮಾಡಿಕೊಂಡು ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ.

[do_widget id=et_ads-2]

ಶಬರಿಮಲೆ ಅಯ್ಯಪ್ಪ ದೇಗುಲ ದಲ್ಲಿ ಮಹಿಳೆಯರಿಗೆ ಮೊದಲಿನಿಂದಲೂ ಪ್ರವೇಶ ನಿಷೇಧಗೊಂಡಿದೆ. ಆದರೆ ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಿಂದ ಮಹಿಳೆಯರು ದೇವಸ್ಥಾನದ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅಯ್ಯಪ್ಪ ಮೂರ್ತಿಯ ಮೇಲೆ ಸ್ಯಾನಿಟರಿ ನ್ಯಾಪ್ ಕಿನ್ ಎಸೆಯಬೇಕು ಎಂದು ಮುಡಿಯಲ್ಲಿ ಇಟ್ಟುಕೊಂಡು ಹೋಗಿದ್ದ ಮಹಿಳೆಯೊಬ್ಬರ ವಿವಾದದ ಕಾವು ಇನ್ನೂ ಕಡಿಮೆಯಾಗಿಲ್ಲ ಅಂತಹ ಸಮಯದಲ್ಲಿ ಪ್ರಕಾಶ್ ರೈ ಈ ವಿಷಯಕ್ಕೆ ಎಂಟ್ರಿಕೊಟ್ಟು ಮತ್ತಷ್ಟು ಕಾವು ಹೆಚ್ಚಿಸಿದ್ದಾರೆ.

[do_widget id=et_ads-3]

ಮಹಿಳೆಯರನ್ನು ನೋಡದ ದೇವರು ದೇವರಲ್ಲ ಎಂದು ಶಬರಿಮಲೆ ಅಯ್ಯಪ್ಪ ನನ್ನ ದೇವರೇ ಅಲ್ಲ ಎಂದಿರುವ ಪ್ರಕಾಶ್ ರೈ ರವರು ಹೆಣ್ಣಿನ ಬಗ್ಗೆ ನಾಲ್ಕೈದು ಒಳ್ಳೆ ಮಾತುಗಳನ್ನು ಆಡಿದ್ದಾರೆ. ಆದರೆ ಕೊನೆಯಲ್ಲಿ ಅಯ್ಯಪ್ಪ ದೇವರು ದೇವರೇ ಅಲ್ಲ ಎಂಬ ಎಂಬ ಮಾತಿನ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

[do_widget id=et_ads-4]