ಜೈಲಿನಿಂದ ಹೊರಬಂದು ಪಾಕ್ ಕೈದಿ ಮಾಡಿದ್ದೇನು ಗೊತ್ತಾ??

ಜೈಲಿನಿಂದ ಹೊರಬಂದು ಪಾಕ್ ಕೈದಿ ಮಾಡಿದ್ದೇನು ಗೊತ್ತಾ??

0

ಬರೋಬ್ಬರಿ 16 ವರ್ಷಗಳ ಹಿಂದೆ ಕೆಲವು ಸಂಶಯಾಸ್ಪದ ವಸ್ತುಗಳನ್ನು ಮತ್ತು ನಕ್ಷೆಗಳನ್ನು ಇಟ್ಟುಕೊಂಡು ಪಾಕಿಸ್ತಾನಕ್ಕೆ ಮರಳುತ್ತಿದ್ದ ವೇಳೆಯಲ್ಲಿ ಭಾರತೀಯ ಸೈನಿಕರು ಜಲಾಲುದ್ದೀನ್  ಎಂಬ ಕೈದಿಯನ್ನು ಬಂಧಿಸಿರುತ್ತಾರೆ. ಆತನಿಗೆ ಬರೋಬ್ಬರಿ 16 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸುತ್ತದೆ. 2001ರಿಂದ ಮೊನ್ನೆಯವರೆಗೂ ಜೈಲಿನ ಶಿಕ್ಷೆ ಅನುಭವಿಸಿದ್ದ ಜಲಾಲುದ್ದೀನ್ ರವರು ಜೈಲಿನಿಂದ ಬಿಡುಗಡೆಯಾದ ತಕ್ಷಣ ಮಾಡಿದ ಕೆಲಸ ನೋಡಿದರೆ ನೀವು ಒಂದು ಕ್ಷಣ ಶಾಕ್ ಆಗುತ್ತೀರಾ.

[do_widget id=et_ads-2]

ಕಳೆದ ಮೂರು ವರ್ಷಗಳಿಂದ ಜೈಲಿನ ಕ್ರಿಕೆಟ್ ತಂಡದಲ್ಲಿ ಅಂಪಾಯರ್ ಆಗಿದ್ದ ಜಲಾಲುದ್ದೀನ್ ಜೈಲಿನಲ್ಲಿದ್ದುಕೊಂಡು ಎಂಎ ಪದವಿಯನ್ನು ಮಾಡಿದ್ದಾರೆ ಅಷ್ಟೇ ಅಲ್ಲದೆ ಎಲೆಕ್ಟ್ರಿಷಿಯನ್ ಕೋರ್ಸ್ ಸಹ ಮುಗಿಸಿಕೊಂಡಿದ್ದಾರೆ. ಇದೀಗ ಪಾಕಿಸ್ತಾನಕ್ಕೆ ಅದನ್ನು ವಾಪಸ್ ಕಳುಹಿಸಿ ಕೊಡಲು ಸಕಲ ವ್ಯವಸ್ಥೆಯನ್ನು ಮಾಡಿರುವ ಭಾರತಕ್ಕೆ ಆತ ಒಂದು ಕೋರಿಕೆಯನ್ನು ಇಟ್ಟಿದ್ದ ಅದುವೇ ಭಗವದ್ಗೀತೆ.

[do_widget id=et_ads-3]

ಹೌದು ಬಿಡುಗಡೆಯಾದ ತಕ್ಷಣ ಭಗವದ್ಗೀತೆ ಪ್ರತಿಯನ್ನು ತೆಗೆದುಕೊಂಡು ಪಾಕಿಸ್ತಾನಕ್ಕೆ ಆತ ಹೊರಟಿದ್ದಾನೆ. ಇಲ್ಲಿಯೇ ಇದ್ದು ಒಬ್ಬ ಕೈದಿಯ ಆಗಿದ್ದರೂ ಸಹ ಜೈಲಿನಲ್ಲೇ ಇದ್ದುಕೊಂಡು ಭಗವದ್ಗೀತೆಯಿಂದ ಪ್ರಭಾವಿತನಾಗಿ ತನ್ನ ದೇಶಕ್ಕೆ ಹೊರಡುವಾಗ ಭಗವದ್ಗೀತೆ ಪುಸ್ತಕ ವನ್ನು ತನ್ನ ಜೊತೆಯೇ ಕೊಂಡು ಹೋಗಿದ್ದಾನೆ. ಅಂದರೆ ಭಗವದ್ಗೀತೆಯ ಮಹತ್ವ ಆತನಿಗೂ ತಿಳಿದಿರಬೇಕು.

[do_widget id=et_ads-4]

ಆದರೆ ಹಲವಾರು ಭಾರತೀಯರಿಗೆ ಭಗವದ್ಗೀತೆಯ ಮಹತ್ವ ಇಂದಿಗೂ ತಿಳಿದಿಲ್ಲ ಎಂಬುದು ಒಂದು ವಿಷಾದಕರ ಸಂಗತಿ. ಜಪಾನ್ ದೇಶವೇ ಮಕ್ಕಳಿಗೆ ಶಾಲೆಯಲ್ಲಿ ಭಗವದ್ಗೀತೆಯನ್ನು ತಿಳಿಸಿಕೊಡುತ್ತದೆ ಅಂತಹ ಮಹಾನ್ ಗ್ರಂಥವನ್ನು ಭಾರತೀಯ ಯಾವುದೇ ಶಾಲೆಗಳಲ್ಲಿ ತಿಳಿಸಿ ಕೊಡುವುದಿಲ್ಲ. ಒಂದು ವೇಳೆ ಭಾರತದಲ್ಲಿಯೂ ಸಹ ಈ ಮಹಾನ್ ಗ್ರಂಥ ದ ಬಗ್ಗೆ ಶಾಲೆಗಳಲ್ಲಿ ತಿಳಿಸಿಕೊಡುವ ಹಾಗೆ ಆದರೆ ಎಷ್ಟು ಚಂದ ಅಲ್ಲವೇ??

[do_widget id=et_ads-5]