ಓಲ್ಡ್ ಮಾಂಕ್ ರಮ್ ಪ್ರಿಯರಿಗೊಂದು ಗುಡ್ ನ್ಯೂಸ್

ಓಲ್ಡ್ ಮಾಂಕ್ ರಮ್ ಪ್ರಿಯರಿಗೊಂದು ಗುಡ್ ನ್ಯೂಸ್

0

ಓಲ್ಡ್ ಮಾಂಕ್ ಪ್ರಿಯರಿಗೊಂದು ಸಿಹಿ ಸುದ್ದಿ. ಈ ಮದ್ಯವಿನ್ನು ಹಲವು ಬಣ್ಣಗಳ ಜತೆ ವಿವಿಧ ಫ್ಲೇವರ್ (ಸ್ವಾದ)ಗಳಲ್ಲಿ ಲಭ್ಯವಾಗಲಿವೆ. ಹಲವು ಸ್ವಾದಿಷ್ಟ ಓಲ್ಡ್ ಮಾಂಕ್ ರಮ್ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ The Connoisseur Collection ಎಂಬ ಟ್ಯಾಗ್ ಲೈನ್ ಅನ್ನೂ ನೀಡಲಾಗಿದೆ.

[do_widget id=et_ads-2]

ಈಗಾಗಲೇ ಇರುವ ಓಲ್ಡ್ ಮಾಂಕ್ ಜತೆಗೆ, ಓಲ್ಡ್ ಮಾಂಕ್ ಆರೇಂಜ್ (ಕಿತ್ತಳೆ) ರಮ್, ಓಲ್ಡ್ ಮಾಂಕ್ ಲೆಮೆನ್ (ಲಿಂಬು) ರಮ್, ಓಲ್ಡ್ ಮಾಂಕ್ ಆಪಲ್ (ಸೇಬು) ರಮ್, ಓಲ್ಡ್ ಮಾಂಕ್ ಕೋಲಾ, ಓಲ್ಡ್ ಮಾಂಕ್ ಕ್ರ್ಯಾನ್ ಬೆರ್ರಿ, ಓಲ್ಡ್ ಮಾಂಕ್ ಮೊಜಿತೊ ಫ್ಲೇವರ್ ಈಗ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

[do_widget id=et_ads-3]

ಈಗಾಗಲೇ ಸಾಮಾಜಿಕ ಜಾಲತಾಣ ಹಾಗೂ ಕೆಲವು ವರದಿಯಲ್ಲಿ ಪ್ರಕಟವಾಗಿರುವಂತೆ ಕ್ರ್ಯಾನ್ ಬೆರ್ರಿ, ಕೋಲಾ, ಮೊಜಿತೊ ಸೇರಿ ಈ ಹೊಸ ಫ್ಲೇವರ್ ಹೊಂದಿರುವ ರಮ್ ಮದ್ಯವು ಈ ಮೊದಲಿನ ಓಲ್ಡ್ ಮಾಂಕ್ ಗಿಂತ ತುಸು ಹೆಚ್ಚೇ ಆಲ್ಕೋಹಾಲ್ ಪ್ರಮಾಣ ಇರುವುದಾಗಿ ಹೇಳಲಾಗಿದೆ. ಅಲ್ಲದೆ, ಇವುಗಳನ್ನು ನೋಡಿದರೆ, ಬಕಾರ್ಡಿಸ್ ಬ್ರೀಜರ್ ನಂತೆ ಭಾಸವಾಗುತ್ತವೆ. ಪ್ರಸ್ತುತ ಈ ಹೊಸ ಬ್ರ್ಯಾಂಡ್ ಗಳು ಕರ್ನಾಟಕ, ಪುಣೆ ಹಾಗೂ ಮುಂಬೈನಲ್ಲಿ ಲಭ್ಯವಿದ್ದು, ಮದ್ಯಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

[do_widget id=et_ads-4]

ಆದರೆ, ಹಲವರು ಬೇಸರ ವ್ಯಕ್ತಪಡಿಸಿದ್ದು, ಹಳೆಯ ಕಲಾತ್ಮಕ ಓಲ್ಡ್ ಮಾಂಕ್ ಗೆ ಇವಾವುವೂ ಸರಿಸಾಟಿಯಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಬೆಂಗಳೂರಿಗರಿಗೆ ಇನ್ನೊಂದು ಸಂತಸ ವಿಷಯವೆಂದರೆ, ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳ ಖ್ಯಾತ ಮದ್ಯ ಮಳಿಗೆ/ಬಾರ್ ಗಳಲ್ಲಿ ಇವು ಲಭ್ಯ.

[do_widget id=et_ads-5]