ಹಲವಾರು ವರ್ಷಗಳಿಂದ ಪ್ರತಿ ನಾಯಕರು ಮತ್ತು ಪ್ರಜೆಗಳು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಕೇವಲ 1 ವರ್ಷದ ಹಿಂದಷ್ಟೇ ಇಂದಿನ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ರವರು ಸಹ ಟಿಪ್ಪು ಜಯಂತಿಯನ್ನು ವಿರೋಧಿಸುವ ಬಣದಲ್ಲಿ ಗುರುತಿಸಿಕೊಂಡಿದ್ದ ರು. ಆದರೆ ಈಗ ತಮ್ಮ ಅಧಿಕಾರದ ಆಸೆಗಾಗಿ ಟಿಪ್ಪು ಜಯಂತಿ ಯನ್ನು ಮುಂದುವರಿಸಲು ನಿರ್ಧರಿಸಿರುವುದು ವಿಷಾದನೀಯ ಸಂಗತಿ.
[do_widget id=et_ads-2]
ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿರುವ ಸರ್ಕಾರವು ಟಿಪ್ಪು ಜಯಂತಿಯ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನವಂಬರ್ 10ರಂದು ಸಂಜೆ ಆರು ಮೂವತ್ತಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
[do_widget id=et_ads-3]
ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಯಾದ ಜಯಮಾಲಾ ಮತ್ತು ಸಚಿವರಾದ ಜಮೀರ್ ಅಹಮದ್ ರವರು ಮುಸ್ಲಿಂ ಧರ್ಮ ಗುರುಗಳಾದ ಹಜರತ್ ಮೌಲನ ಸಮೀರ್ ಅಹಮದ್ ಅವರ ಮನೆಗೆ ತೆರಳಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಗೆ ಆಹ್ವಾನವನ್ನು ನೀಡಿದ್ದಾರೆ.
[do_widget id=et_ads-4]
ಮೈಸೂರಿನ ಹುಲಿ ಟಿಪ್ಪು ಸುಲ್ತಾನನ ಜಯಂತಿಯನ್ನು ಕೈ ಬಿಡುವ ಮಾತೇ ಇಲ್ಲ ಎಂದು ಹೇಳಿರುವ ಸರ್ಕಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಮೊಘಲರ ರೀತಿಯ ದೌಲತ್ತು ಎಂದು ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ.
[do_widget id=et_ads-5]