ಟಿಪ್ಪು ಜಯಂತಿ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ರಾಜ್ಯದಲ್ಲಿ ಅಕ್ಟೋಬರ್ ನವೆಂಬರ್ ತಿಂಗಳು ಬಂತು ಎಂದರೆ ಕಳೆದ ಐದು ವರ್ಷಗಳಿಂದ ಕೇವಲ ಒಂದು ಜಯಂತಿಯದ್ದೇ ಮಾತಾಗಿರುತ್ತದೆ. ಯಾಕೆಂದರೆ ಹಿಂದೂ ವಿರೋಧಿ ಆಗಿದ್ದ ಟಿಪ್ಪುಸುಲ್ತಾನನ ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಿಸಿಕೊಂಡು ಬಂದಿತ್ತು.ಯಾರಾದರೂ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದರೆ ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಕಾಂಗ್ರೆಸ್ ಪಕ್ಷದವರು ಉತ್ತರಿಸುತ್ತಿದ್ದರು.

[do_widget id=et_ads-2]

ಆದರೆ ಹಲವಾರು ಇತಿಹಾಸ ಪುಸ್ತಕಗಳ ದಾಖಲೆಯೊಂದಿಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಮತ್ತು ಹಲವಾರು ಹಿಂದೂ ಪರ ಹೋರಾಟಗಾರರು ಟಿಪ್ಪು ಒಬ್ಬ ಹಿಂದೂ ವಿರೋಧಿ, ಆತ ತನ್ನ ಆಡಳಿತದ ಕಾಲದಲ್ಲಿ ಲಕ್ಷಾಂತರ ಹಿಂದೂಗಳನ್ನು ಕೊಂದು ಮತಾಂತರ ಮಾಡಿಸಿದ ಎಂದು ಹೇಳುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಬೇಕು ಎಂದು ಹಲವು ನಾಯಕರು ಹಲವಾರು ವರ್ಷಗಳಿಂದ ಹೋರಾಡುತ್ತಾ ಬಂದಿದ್ದಾರೆ.

[do_widget id=et_ads-3]

ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಾ ಬಂದಿದೆ ಅಷ್ಟೇ ಅಲ್ಲದೆ ಇಂದಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ಹೇಳಿದ್ದಾಗಿದೆ. ಇದರಿಂದ ಕರ್ನಾಟಕದಲ್ಲಿ ವಾತಾವರಣ ಮತ್ತಷ್ಟು ಹದಗೆಟ್ಟಿದ್ದು ಮತ್ತೊಮ್ಮೆ ಪ್ರತಿಭಟನೆಯ ಕಾವು ಏರತೊಡಗಿದೆ.

[do_widget id=et_ads-4]

ಇದರ ಬೆನ್ನಲ್ಲೇ ಕರ್ನಾಟಕದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದು ಟಿಪ್ಪು ಜಯಂತಿಯ ವಿಷಯದಲ್ಲಿ ಹಲವಾರು ಹಿಂದೂ ನಾಯಕರಿಗೆ ಟಿಪ್ಪು ಜಯಂತಿ ವಿಷಯದಲ್ಲಿ ಒಂದು ಆಶ್ವಾಸನೆ ಸಿಕ್ಕಂತಾಗಿದೆ. ಹೌದು ಕರ್ನಾಟಕದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದು ಟಿಪ್ಪು ಒಬ್ಬ ಸ್ವಾತಂತ್ರ ಹೋರಾಟಗಾರ ನಲ್ಲ ನೀವು ಆತನ ಜಯಂತಿಯನ್ನು ಯಾಕೆ ಆಚರಿಸಬೇಕು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ .

[do_widget id=et_ads-5]

ಒಂದು ವೇಳೆ ರಾಜ್ಯ ಸರ್ಕಾರವು ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ದಲ್ಲಿ ಅದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ ಎಂದು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಹೈಕೋರ್ಟ್ ನ ನಿರ್ಧಾರಕ್ಕೆ ಉಘೇ ಉಘೇ ಎನ್ನುತ್ತಿದ್ದಾರೆ.

[do_widget id=et_ads-6]

Post Author: Ravi Yadav