ಬಿಗ್ ಬ್ರೇಕಿಂಗ್: ಜಮಖಂಡಿಯಲ್ಲಿ ಮರು ಚುನಾವಣೆ !!

ಬಿಗ್ ಬ್ರೇಕಿಂಗ್: ಜಮಖಂಡಿಯಲ್ಲಿ ಮರು ಚುನಾವಣೆ !!

0

ಇನ್ನೇನು ಉಪ ಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳುತ್ತದೆ, ಆದರೆ ಇಂತಹ ಸಮಯದಲ್ಲಿ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಜಮಖಂಡಿ ಉಪ ಚುನಾವಣೆಯಲ್ಲಿ ಭಾರಿ ಅಕ್ರಮ ಎಸಗಲಾಗಿದೆ ಎಂದು ಹಲವು ಕಾರ್ಯಕರ್ತರು ಧರಣಿ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಮೇಲೆ ಭಾರಿ ಆಕ್ರೋಶವನ್ನು ವ್ಯಕ್ತಪಡಿಸಿರುವ ಕಾರ್ಯಕರ್ತರು ಮತ್ತು ಸ್ಥಳೀಯರು ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

[do_widget id=et_ads-2]

ಅಷ್ಟಕ್ಕೂ ಮರು ಚುನಾವಣೆ ನಡೆಸಲು ಕಾರಣವೇನು ಗೊತ್ತಾ?

ಇದ್ದಕಿದ್ದ ಹಾಗೆ ನಗರಸಭೆ ಕಾರುಗಳಲ್ಲಿ ಮತ ಯಂತ್ರಗಳು ಪತ್ತೆಯಾಗಿವೆ. ಕಾರಿನಲ್ಲಿ ಏನು ಇದನ್ನು ಗಮನಿಸಿದ ಗ್ರಾಮಸ್ಥರು ಬಾರಿ ಕುತೂಹಲದಿಂದ ಏನು ಇರಬಹುದು ಎಂದು ಪರಿಶೀಲಿಸಿದಾಗ ಮತ ಯಂತ್ರಗಳು ಇರುವುದು ಖಚಿತವಾಗಿದೆ. ಕುನ್ನೂರ ಮತ್ತು ಕಾಜಿಬೀಳಗಿ ಗ್ರಾಮಗಳಲ್ಲಿ ಮತಯಂತ್ರಗಳು ಪತ್ತೆಯಾಗಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.

[do_widget id=et_ads-3]

ಈ ಎಲ್ಲಾ ವಿದ್ಯಮಾನಗಳನ್ನು ಕಂಡ ಸ್ಥಳೀಯ ಗ್ರಾಮಸ್ಥರು ಮತ್ತು ಎಲ್ಲಾ ಪಕ್ಷದ ಕಾರ್ಯಕರ್ತರು ಚುನಾವಣಾ ಆಯೋಗದ ಮೇಲೆ ಘೋಷಣೆಗಳನ್ನು ಕೂಗುತ್ತ ಆರೋಪಗಳನ್ನು ಮಾಡುತ್ತಾ ಮರು ಚುನಾವಣೆ ನಡೆಸಲು ಆಗ್ರಹಿಸುತ್ತಿದ್ದಾರೆ. ಈ ವಿಷಯ ಟಿವಿ5 ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದಂತೆ ಹಲವಾರು ನಾಯಕರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.

[do_widget id=et_ads-4]

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿಕೊಂಡಿದ್ದಾರೆ ಒಂದು ವೇಳೆ ಮತ ಯಂತ್ರಗಳು  ಪತ್ತೆಯಾಗಿದ್ದು ನಿಜವಾಗಿದ್ದಲ್ಲಿ ಜಮಖಂಡಿಯಲ್ಲಿ ಮತ್ತೊಮ್ಮೆ ಮರು ಚುನಾವಣೆ ನಡೆಯಲಿದೆ.

[do_widget id=et_ads-5]