ಕೈಕೊಟ್ಟ ಕುಮಾರಸ್ವಾಮಿ: ಬಂಧನ ಭೀತಿಯಲ್ಲಿ ರೈತರು

ಕೈಕೊಟ್ಟ ಕುಮಾರಸ್ವಾಮಿ: ಬಂಧನ ಭೀತಿಯಲ್ಲಿ ರೈತರು

0

ಕುಮಾರಸ್ವಾಮಿ ರವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ರೈತರ ಕಣ್ಣಿಗೆ ಮಣ್ಣೆರೆಚುತ್ತ ಬಂದಿದ್ದಾರೆ. ನಿಮ್ಮ ಸಾಲ ಮನ್ನಾ ಆಗಿದೆ ಬ್ಯಾಂಕಿನ ಅಧಿಕಾರಿಗಳು ಮನೆ ಬಳಿ ಬಂದರೆ ನನ್ನ ಹೆಸರು ಹೇಳಿ ಎಂದು ಹೇಳುತ್ತಿರುವ ಕುಮಾರಸ್ವಾಮಿ ರವರು ಸಾಲ ಮನ್ನಾ ಮಾತ್ರ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಕೆಲವು ರೈತರು ಮಾತ್ರ ಸಾಲ ಮನ್ನಾ ಆಗಿದೆ ಎಂದು ಹೇಳುತ್ತಿದ್ದಾರೆ ಆದರೆ ನಿಜವಾಗಿಯೂ ಒಬ್ಬ ರೈತನ ಸಾಲ ಮನ್ನಾ ಆಗಿಲ್ಲ.

[do_widget id=et_ads-2]

ಇದಕ್ಕೆ ಶ್ರೀರಾಮುಲು ರವರು ಒಬ್ಬ ರೈತನ ಆದರೂ ಸರಿ ನನ್ನ ಸಾಲ ಮನ್ನಾ ಆಗಿದೆ ಎಂದು ಬಹಿರಂಗವಾಗಿ ಹೇಳಿ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಬಹಿರಂಗವಾಗಿ ಚಾಲೆಂಜ್ ಹಾಕಿದ್ದರು. ಆದರೆ ಕುಮಾರಸ್ವಾಮಿ ಬೆಂಬಲಿಗರು ಮಾತ್ರ ಇದನ್ನು ಒಪ್ಪಲು ತಯಾರಿಲ್ಲ.

[do_widget id=et_ads-3]

ಈಗ ಕುಮಾರಸ್ವಾಮಿ ಅವರ ಮಾತನ್ನು ನಂಬಿಕೊಂಡಿದ್ದ ರೈತರಿಗೆ ಶಾಕ್ ಆಗಿದೆ ಯಾಕೆಂದರೆ ಬರೋಬ್ಬರಿ 180 ಕ್ಕೂ ಹೆಚ್ಚು ರೈತರಿಗೆ ಇದೀಗ ಬಂಧನ ವಾರೆಂಟ್ ಜಾರಿಯಾಗಿದೆ. ಇದರಿಂದ ಕಂಗಾಲಾಗಿರುವ ರೈತರು ತಲೆಮರೆಸಿಕೊಂಡು ತಮ್ಮ ಊರಿನಲ್ಲಿ ಅಡಗಿ ಕುಳಿತಿದ್ದಾರೆ. ಹೌದು ಎಕ್ಸಿಸ್ ಬ್ಯಾಂಕ್ ಕೋಲ್ಕತಾದ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ಬೆಳಗಾವಿಯ 180 ರೈತರ ಮೇಲೆ ದಾಖಲು ಮಾಡಿದ್ದು ಈಗ ಎಲ್ಲಾ ರೈತರು ಬಂಧನ ಭೀತಿಯಲ್ಲಿ ಕುಳಿತಿದ್ದಾರೆ.

[do_widget id=et_ads-4]

ಈ ವಾರೆಂಟ್ ವಿಷಯವನ್ನು ಕುಮಾರಸ್ವಾಮಿ ರವರ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಅಧಿಕಾರದ ಗದ್ದುಗೆ ಹಿಡಿದ ಕುಮಾರಸ್ವಾಮಿ ರವರಿಗೆ ರೈತರ ಅಳಲು ಕೇಳುತ್ತಿಲ್ಲ. ಬದಲಾಗಿ ಸುಮ್ಮನೆ ಬ್ಯಾಂಕಿನವರು ಮನೆ ಬಳಿ ಬಂದರೆ ನನ್ನ ಹೆಸರು ಹೇಳಿ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಮನೆ ಬಳಿ ಬಂದಿರುವುದು ಬ್ಯಾಂಕಿನವರು ಅಲ್ಲ ಬದಲಾಗಿ ತಮ್ಮದೇ ಊರಿನ ಪೊಲೀಸರು.

[do_widget id=et_ads-5]