ಸಚಿವ ಎಚ್.ಡಿ ರೇವಣ್ಣ ಮಕ್ಕಳಿಗೆ ಶಾಕ್: ಅಕ್ರಮ ಒತ್ತುವರಿಗೆ ಬಿತ್ತು ಬ್ರೇಕ್
ಸಚಿವ ಎಚ್.ಡಿ ರೇವಣ್ಣ ಮಕ್ಕಳಿಗೆ ಶಾಕ್: ಅಕ್ರಮ ಒತ್ತುವರಿಗೆ ಬಿತ್ತು ಬ್ರೇಕ್
ಹಾಸನ ಜಿಲ್ಲೆಯಲ್ಲಿ ಏನಿದ್ದರೂ ದೇವೇಗೌಡರ ಕುಟುಂಬದ್ದೆ ಕಾರುಬಾರು. ಇಲ್ಲಿ ಸಾಮಾನ್ಯವಾಗಿ ದೇವೇಗೌಡರ ಕುಟುಂಬದ ವಿರುದ್ಧ ಯಾರೂ ಮಾತನಾಡುವುದಿಲ್ಲ ಯಾಕೆಂದರೆ ಇಡೀ ಹಾಸನವನ್ನು ಹಲವಾರು ವರ್ಷಗಳಿಂದ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಮಾಜಿ ಪ್ರಧಾನಿಗಳಾದ ದೇವೇಗೌಡರು.
[do_widget id=et_ads-2]
ದೇವೇಗೌಡರ ಪುತ್ರರಾದ ಎಚ್ ಡಿ ರೇವಣ್ಣ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಆದರೆ ಒಂದು ರಾಜ್ಯದ ಲೋಕೋಪಯೋಗಿ ಸಚಿವರ ಮಕ್ಕಳು ಈ ರೀತಿಯ ಕೆಲಸ ಮಾಡಿರುವುದು ಎಷ್ಟು ಸರಿ ಎಂದು ಎಲ್ಲರಿಗೂ ಅನಿಸುತ್ತಿದೆ ಯಾಕೆಂದರೆ ಹಾಸನ ನಗರಸಭೆ ಯು ಎಚ್ ಡಿ ರೇವಣ್ಣ ಅವರ ಪುತ್ರರ ವಿರುದ್ಧ ಹಾಸನ ನಗರಸಭೆ ನೋಟೀಸ್ ಜಾರಿ ಮಾಡಿದೆ.
[do_widget id=et_ads-3]
ಹೌದು ಒಂದನೇ ವಾರ್ಡ್ ವ್ಯಾಪ್ತಿಯ ಬಿಎಂ ರಸ್ತೆಗೆ ಹೊಂದಿಕೊಂಡಂತೆ ಸಚಿವ ರೇವಣ್ಣ ರವರಿಗೆ ಇರುವ ಆಸ್ತಿಯಲ್ಲಿ 6 ಮೀಟರ್ ಕಟ್ಟಡ ರೇಖೆಯನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದನ್ನು ಮನವರಿಕೆ ಮಾಡಿಕೊಂಡ ಹಾಸನ ನಗರಸಭೆ ಯು ಎಚ್ ಡಿ ರೇವಣ್ಣ ಅವರ ಪುತ್ರರಿಗೆ ನೋಟಿಸ್ ಜಾರಿ ಮಾಡಿದೆ ಈ ನೋಟಿಸ್ ಜಾರಿ ಮಾಡಿದ ಕೇವಲ ಏಳು ದಿನಗಳಲ್ಲಿ ಅತಿಕ್ರಮಿಸಿದ ಜಾಗವನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಕಟ್ಟಡಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಗರಸಭೆಗೆ ಹಾಜರುಪಡಿಸಬೇಕು.
[do_widget id=et_ads-4]
ಒಂದು ವೇಳೆ ಈ ನೋಟಿಸ್ ಅನ್ನು ತಿರಸ್ಕರಿಸಿದರೆ ಅಥವಾ ಉತ್ತರ ನೀಡದೇ ಇದ್ದರೆ ಸಚಿವ ರೇವಣ್ಣ ಅವರ ಪುತ್ರರು ಕಾನೂನು ಸಮರವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಂದು ವೇಳೆ ಪ್ರಕರಣ ಸಾಬೀತಾದರೆ ಶಿಕ್ಷೆಯನ್ನು ತಪ್ಪಿದ್ದಲ್ಲ.
[do_widget id=et_ads-5]