ಹೊರಬಿತ್ತು ಮಹಾ ಸಮೀಕ್ಷೆ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ ಗೊತ್ತಾ?

ಹೊರಬಿತ್ತು ಮಹಾ ಸಮೀಕ್ಷೆ ಉಪಚುನಾವಣೆಯಲ್ಲಿ ಗೆಲುವು ಯಾರಿಗೆ ಗೊತ್ತಾ?

0

ರಾಜ್ಯದಲ್ಲಿ ಇಂದು  ನಡೆದಿರುವ ಉಪಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ ಯಾಕೆಂದರೆ ಈ ಉಪಚುನಾವಣೆಯ ಮುಂದಿನ ಲೋಕಸಭಾ ಚುನಾವಣೆಗೆ ಹಿಡಿದ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು. ಒಂದು ಕಡೆ ಕಾಂಗ್ರೆಸ್ ಜೆಡಿಎಸ್ ಪಕ್ಷದ ಜೊತೆ ಮೈತ್ರಿಯನ್ನು ಮಾಡಿಕೊಂಡು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯಬೇಕು ಅಥವಾ ಬೇಡವೋ ಎಂಬ ಪ್ರಶ್ನೆಗೆ ಈ ಚುನಾವಣೆ ಉತ್ತರ ನೀಡಲಿದೆ.

[do_widget id=et_ads-2]

ಅದೇ ರೀತಿ ಬಿಜೆಪಿ ಪಕ್ಷವು ಅಧಿಕಾರದಲ್ಲಿ ನರೇಂದ್ರ ಮೋದಿರವರ ಮುಂದುವರೆಯಲು 25 ಸೀಟುಗಳನ್ನು ಉಡುಗೊರೆಯಾಗಿ ನೀಡಲಿದ್ದೇವೆ ಎಂದು ಘೋಷಿಸಿದ ಯಡಿಯೂರಪ್ಪನವರ ವರ್ಚಸ್ಸು ಈ ಚುನಾವಣೆಯ ಮೂಲಕ ನಿರ್ಧಾರವಾಗಲಿದೆ ಎಂದರೆ ತಪ್ಪಾಗಲಾರದು. ಅದೇ ರೀತಿ ಬಳ್ಳಾರಿಯ ಶ್ರೀರಾಮುಲು ಅವರನ್ನು ಸೋಲಿಸಲು ಐವತ್ತಕ್ಕೂ ಹೆಚ್ಚು ಶಾಸಕರು ಆರಕ್ಕೂ ಹೆಚ್ಚು ಸಂಸದರು ಮತ್ತು ಹಲವಾರು ಕಾಂಗ್ರೆಸ್ನ ಪ್ರಬಲ ನಾಯಕರು ಬಳ್ಳಾರಿಯಲ್ಲಿ ಬೀಡುಬಿಟ್ಟಿದ್ದು ಭಾರೀ ಕುತೂಹಲವನ್ನು ಕೆರಳಿಸಲು ಮತ್ತೊಂದು ಕಾರಣವಾಗಿದೆ.

[do_widget id=et_ads-3]

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉಪಚುನಾವಣೆ ಇಂದು ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಡೈಲಿ ಹಂಟ್ ನಡೆಸಿದ ಸಮೀಕ್ಷೆ ಯು ಹೀಗಿದೆ.

ಶಿವಮೊಗ್ಗ ಜಿಲ್ಲೆ:

ಪ್ರತಿಬಾರಿಯಂತೆ ಈ ಬಾರಿಯೂ ಸಹ ಯಡಿಯೂರಪ್ಪನವರನ್ನು ನೋಡಿ ಅವರ ಮಗನಾದ ರಾಘವೇಂದ್ರ ಅವರನ್ನು ಗೆಲ್ಲಿಸಲು ಶಿವಮೊಗ್ಗ ಜನತೆಯು ಸಿದ್ದರಾಗಿದ್ದಾರೆ ಎನ್ನಲಾಗಿದೆ. ಇನ್ನು ಮೈತ್ರಿ ಸರ್ಕಾರದ ಅಭ್ಯರ್ಥಿಯಾದ ಮಧು ಬಂಗಾರಪ್ಪ ನವರಿಗೆ ಭಾರಿ ಮುಖಭಂಗ ಉಂಟಾಗಲಿದ್ದು ಭಾರಿ ಸೋಲನ್ನು ಅನುಭವಿಸಲಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ.

[do_widget id=et_ads-4]

ರಾಮನಗರ:

ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕೈ ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಇದರಿಂದ ಅಲ್ಲಿ ಅನಿತಾ ಕುಮಾರಸ್ವಾಮಿ ರವರಿಗೆ ಎದುರಾಳಿ ಇಲ್ಲದಂತಾಗಿದೆ ಈ ಕ್ಷೇತ್ರದಲ್ಲಿ ಗೆಲುವು ಮೈತ್ರಿ ಸರ್ಕಾರದ ಅಭ್ಯರ್ಥಿಯಾದ ಅನಿತಾ ಕುಮಾರಸ್ವಾಮಿ ರವರಿಗೆ ಎಂಬುದು ತಿಳಿದುಬಂದಿದೆ.

[do_widget id=et_ads-5]

ಜಮಖಂಡಿ ವಿಧಾನಸಭಾ ಕ್ಷೇತ್ರ:

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯು ಸುಲಭ ಗೆಲುವನ್ನು ದಾಖಲಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಮೈತ್ರಿ ಸರ್ಕಾರಕ್ಕೆ ಶಾಕ್ ಆಗುವುದಂತೂ ಖಂಡಿತ. ಈ ಗೆಲುವಿನ ಜೊತೆ ಬಿಜೆಪಿ ಸೀಟುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದ್ದು ಸ್ವಲ್ಪ ಯಾಮಾರಿದರೂ ಸರ್ಕಾರ ಉರುಳು ವುದು ಖಚಿತ ಎನ್ನಲಾಗುತ್ತಿದೆ.

[do_widget id=et_ads-6]

ಮಂಡ್ಯ:

ಮಂಡ್ಯ ಕ್ಷೇತ್ರದಲ್ಲಿ ಅಂದುಕೊಂಡಂತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ತನ್ನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಿರುವ ಮಂಡ್ಯ ಮತದಾರರು ಲೋಕಸಭಾ ಚುನಾವಣೆಯಲ್ಲಿಯೂ ಸಹ ಮೈತ್ರಿ ಸರ್ಕಾರದ ಪರವಾಗಿ ಮತ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಜಿದ್ದಾಜಿದ್ದಿನ ಹೋರಾಟ ಕಂಡು ಬರಲಿದ್ದು, ಸಮೀಕ್ಷೆಯು ಸುಳ್ಳಾದರೂ ತಪ್ಪಾಗುವುದಿಲ್ಲ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

[do_widget id=et_ads-7]

ಬಳ್ಳಾರಿ ಕ್ಷೇತ್ರ:

ಬಿಜೆಪಿಯ ಪ್ರಮುಖ ನಾಯಕರಾದ ಶ್ರೀ ರಾಮುಲು ಅವರನ್ನು ಸೋಲಿಸಲು ಹರಸಾಹಸ ಪಟ್ಟು ಗುಂಪಿನಲ್ಲಿ ಕಾಂಗ್ರೆಸ್ ನಾಯಕರಿಗೆ ಬಾರಿ ಮುಖಭಂಗವಾಗಿದೆ ಎಂಬುದನ್ನು ಸಮೀಕ್ಷೆ ತಿಳಿಸಿಕೊಟ್ಟಿದೆ. ಬಹಳ ಸುಲಭವಾಗಿ ಬಳ್ಳಾರಿಯ ಶ್ರೀರಾಮುಲುರವರ ಸಹೋದರಿಯಾದ ಶಾಂತ ರವರು ಕಾಂಗ್ರೆಸ್ ಅಭ್ಯರ್ಥಿಯಾದ ಉಗ್ರಪ್ಪ ಅವರನ್ನು ಸೋಲಿಸಿ ಮತ್ತೊಮ್ಮೆ ಶ್ರೀರಾಮುಲು ಅವರ ಪರವಾಗಿ ಜನರ ಅಲೆ ಇದೆ ಎಂಬುದು ತಿಳಿಯಲಿದೆ ಎಂದು ಸಮೀಕ್ಷೆ ಹೇಳಿದೆ.

[do_widget id=et_ads-8]