ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ನಾದ ಗೌತಮ್ ಗಂಭೀರ್ ಅವರು ಸಮಾಜ ಸೇವೆಯಲ್ಲಿ ಯಾವಾಗಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸಮಾಜದ ಮೇಲೆ ಬಹಳ ಕಾಳಜಿಯನ್ನು ಹೊಂದಿರುವ ಗೌತಮ್ ಗಂಭೀರ್ ಅವರು ಆಪ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
[do_widget id=et_ads-2]
ದೆಹಲಿಯಲ್ಲಿ ದಿನೇದಿನೇ ವಾಯು ಮಾಲಿನ್ಯದಿಂದ ಪರಿಸರದ ಕೆಡುತ್ತಿದೆ, ಹಳೆ ಕಾರುಗಳ ನಿಷೇಧ, ಖಾಸಗಿ ಕಾರು ಬಳಕೆಗೆ ನಿರ್ಬಂಧ ಸೇರಿದಂತೆ ಹಲವಾರು ಕ್ರಮ ತೆಗೆದುಕೊಂಡರೂ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಇಷ್ಟು ದಿನ ಸರಕಾರ ಏನು ಮಾಡುತ್ತಿದೆ ಎಂಬುದನ್ನು ಗೌತಮ್ ಗಂಭೀರ್ ಅವರು ಪ್ರಶ್ನಿಸಿದ್ದಾರೆ.
[do_widget id=et_ads-3]
ಮಾಲಿನ್ಯ ನಿಯಂತ್ರಿಸಲು ಅರವಿಂದ ಕ್ರೇಜಿವಾಲ್ ರವರು ವಿಫಲರಾಗಿದ್ದಾರೆ. ಇದರಿಂದ ದೆಹಲಿಯಲ್ಲಿ ಡೆಂಗ್ಯೂ ಮಾರಕ ರೋಗ ಹೆಚ್ಚಾಗುತ್ತಿದೆ ಆಮ್ ಆದ್ಮಿ ಸರ್ಕಾರಕ್ಕೆ ಒಂದು ವರ್ಷ ಸಂಪೂರ್ಣ ಸಮಯವಿತ್ತು ಆದರೆ ಯಾವ ಕ್ರಮಗಳನ್ನು ಕೈಗೊಂಡು ಮಾಲಿನ್ಯವನ್ನಾಗಲಿ ಅಥವಾ ಡೆಂಗ್ಯೂ ಮಾರಕ ರೋಗವನ್ನು ತಡೆಗಟ್ಟಲು ಸರ್ಕಾರ ಪ್ರಯತ್ನಿಸಲಿಲ್ಲ ಎಂದು ಆರೋಪ ಮಾಡಿರುವ ಗಂಭೀರ್ ಅವರು ನಮ್ಮ ಪೀಳಿಗೆ ಸುಳ್ಳು ಭರವಸೆಗಳನ್ನುಕಂಡ ಪೀಳಿಗೆ ಎಂದು ಗಂಭೀರ ಟ್ವೀಟ್ ಮಾಡಿದ್ದಾರೆ.
[do_widget id=et_ads-4]