ದಿನಕರ್ ಗೆ ಸಿಕ್ತು ‘ಅವನಿ’ ಸುಳಿವು: ಅಪಘಾತಕ್ಕೀಡಾದ ರಮಣ್.!

ದಿನಕರ್ ಗೆ ಸಿಕ್ತು ‘ಅವನಿ’ ಸುಳಿವು: ಅಪಘಾತಕ್ಕೀಡಾದ ರಮಣ್.!

0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ರಾಧಾ ರಮಣ’ ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ರಮಣ್ ಮನೆಗೆ ನಿಜವಾದ ಅವನಿ ಎಂಟ್ರಿಕೊಡುವ ಸಾಧ್ಯತೆ ಇದೆ.ನಿಜವಾದ ಅವನಿ, ಸಿತಾರ ದೇವಿ ಗೃಹಬಂಧನದಲ್ಲಿರುವುದು ನಿಮಗೆಲ್ಲ ಗೊತ್ತೇ ಇದೆ. ಅವನಿಯನ್ನ ಸಿತಾರ ದೇವಿ ಬಚ್ಚಿಟ್ಟಿರುವ ಜಾಗವನ್ನ ತಿಳಿದುಕೊಳ್ಳುವಲ್ಲಿ ದಿನಕರ್ ಯಶಸ್ವಿ ಆಗಿದ್ದಾರೆ.

[do_widget id=et_ads-2]

ಅತ್ತ ಅವನಿಯನ್ನ ಕರೆದುಕೊಂಡು ಬರಲು ದಿನಕರ್ ಹೊರಟಿದ್ದರೆ, ಇತ್ತ ಅವನಿ ವಿಚಾರವಾಗಿ ಯಾರೋ ರಮಣ್ ಗೆ ಫೋನ್ ಮಾಡಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತ ಡ್ರೈವ್ ಮಾಡುತ್ತಿದ್ದ ಕಾರಣ, ರಮಣ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮುಂದೆ ಓದಿರಿ…

[do_widget id=et_ads-3]

ಯಶಸ್ವಿ ಆಗ್ತಾರಾ ದಿನಕರ್.? ಅವನಿ ಇರುವ ಜಾಗ ಗೊತ್ತಾಯ್ತು

ಅವನಿ ಇರುವ ಜಾಗ ದಿನಕರ್ ಗೆ ಗೊತ್ತಾಗಿದೆ. ನಿಜವಾದ ಅವನಿಯನ್ನ ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ದಿನಕರ್ ಹರಸಾಹಸ ಪಡುತ್ತಿದ್ದಾರೆ. ಅವನಿಯನ್ನ ಗೃಹಬಂಧನದಿಂದ ಪಾರು ಮಾಡುವಲ್ಲಿ ದಿನಕರ್ ಯಶಸ್ವಿ ಆಗ್ತಾರಾ.?

ಹೊಸ ಸ್ಕೆಚ್ ಹಾಕಿದ ಸಿತಾರ ದೇವಿ  !! ಸಿತಾರ ದೇವಿ ತಲೆಯಲ್ಲಿ ಹೊಸ ಪ್ಲಾನ್

ಮಾದನನ್ನು ಕಿಡ್ನ್ಯಾಪ್ ಮಾಡಲು ಹೋಗಿ ಸಿತಾರ ದೇವಿ, ರಮಣ್ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಮನೆಯಲ್ಲಿ ಅವಮಾನ ಎದುರಿಸಿದ ಮೇಲೆ ಮಾನಸಿಕವಾಗಿ ಕುಗ್ಗಿದ ಸಿತಾರ ದೇವಿ ಇದೀಗ ಬ್ಯಾಕ್ ಇನ್ ಆಕ್ಷನ್. ಸಿತಾರ ದೇವಿ ತಲೆಯಲ್ಲೀಗ ಹೊಸ ಪ್ಲಾನ್ ಹುಟ್ಟಿದೆ. ರಾಣಿ ಕಥೆಯನ್ನ ಫಿನಿಶ್ ಮಾಡಲು ಸಿತಾರ ದೇವಿ ಸ್ಕೆಚ್ ಹಾಕಿದ್ದಾರೆ.

[do_widget id=et_ads-4]

ರಾಧಾ ಸರ್ ಪ್ರೈಸ್ ಪ್ಲಾನ್ ರಾಧಾಗೆ ಸಂಭ್ರಮ

”ನನ್ನ ಹಾಗೂ ರಮಣ್ ಮಧ್ಯೆ ಇರುವ ಎಲ್ಲಾ ಕನ್ ಫ್ಯೂಶನ್ ಗಳು ಕ್ಲಿಯರ್ ಆಗಬೇಕು. ರಮಣ್ ಮುಂದೆ ನನ್ನ ಪ್ರೀತಿಯನ್ನ ಮನಸ್ಸು ಬಿಚ್ಚಿ ಹೇಳಿಕೊಳ್ಳಬೇಕು” ಅಂತ ರಾಧಾ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಹೀಗಿರುವಾಗಲೇ ಅವರಿಗೆ ಆಘಾತದ ಸುದ್ದಿ ಸಿಕ್ಕಿದೆ.

[do_widget id=et_ads-5]

ಮುಂದಿನ ತಿರುವು.? ಅಪಘಾತಕ್ಕೀಡಾದ ರಮಣ್

ರಮಣ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅತ್ತ ರಮಣ್ ಗಾಗಿ ಕಾಯುತ್ತ ಸರ್ ಪ್ರೈಸ್ ಪ್ಲಾನ್ ಮಾಡಿದ್ದ ರಾಧಾಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರಮಣ್ ಪ್ರಾಣಕ್ಕೆ ಏನಾದರೂ ಅಪಾಯ ಆಗಿದ್ಯಾ.? ಧಾರಾವಾಹಿಗೆ ಇನ್ಯಾವ ತಿರುವು ಸಿಗುತ್ತೋ, ನೋಡಬೇಕು.

[do_widget id=et_ads-6]

Creadits; FilmBeat