ಸಿದ್ದರಾಮಯ್ಯ ಅವರನ್ನು ಹಲವಾರು ಪ್ರಕರಣಗಳು ಕಾಡಿದ್ದವು, ಆದರೆ ಈ ಎಲ್ಲಾ ಪ್ರಕರಣಗಳ ನಡುವೆ ಹೆಚ್ಚು ಕಾಡಿದ್ದು ಸಿದ್ದರಾಮಯ್ಯರವರ ವಾಚಿನ ಪ್ರಕರಣ. ಸಿದ್ದರಾಮಯ್ಯರವರ ಅಧಿಕಾರದಲ್ಲಿರುವಾಗ ಕೈಗೆ ಭಾರಿ ಮೌಲ್ಯದ ವಾಚ್ ಅನ್ನು ಧರಿಸಿ ಸುದ್ದಿ ಮಾಡಿದ್ದರು. ಈ ವಾಚ್ ದೇಶದೆಲ್ಲೆಡೆ ಸುದ್ದಿ ಮಾಡಿತ್ತು, ಆದರೆ ಆ ಪ್ರಕರಣವನ್ನು ಎಸಿಬಿ ಮುಚ್ಚಿ ಹಾಕಿತ್ತು.
[do_widget id=et_ads-2]
ಈಗ ಈ ಹಳೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಎಸಿಬಿ ಸಂಸ್ಥೆಯು ಈ ಪ್ರಕರಣವನ್ನು ಹಳ್ಳ ಹಿಡಿಸುವ ಹುನ್ನಾರ ಮಾಡಿದೆ ಎಂದು ಆರೋಪಗಳು ಕೇಳಿಬರುತ್ತಿವೆ ಮತ್ತು ಇದಕ್ಕೆ ಸಾಕ್ಷಿಗಳು ಸಹ ಹೊರಬಿದ್ದಿವೆ. ಇದರಿಂದ ಸಾಮಾನ್ಯವಾಗಿ ಸಿದ್ಧರಾಮಯ್ಯನವರಿಗೆ ಬಂಧನ ಭೀತಿ ಎದುರಾಗಿದೆ.
[do_widget id=et_ads-3]
ಬಿಜೆಪಿ ವಕೀಲರಾದ ನಟರಾಜ್ ಶರ್ಮಾ ಎನ್ನುವವರು 77 ಲಕ್ಷ ಮೌಲ್ಯದ ಹುಬ್ಲೋಟ್ ವಾಚ್ ಅನ್ನು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಿದ್ದೇನೆ ಎಂದು ಗಿರೀಶ್ ಚಂದ್ರ ವರ್ಮಾ ಎಂಬುವವರು ನೀಡಿದ್ದ ಬಿಲ್ ನಕಲಿಯಾಗಿದೆ ಎಂದು ಮಾಧ್ಯಮಗಳ ಮುಂದೆ ದಾಖಲೆ ಸಮೇತ ಮಾತನಾಡಿದ್ದಾರೆ. ಈ ಬಿಲ್ ನೀಡಿರುವ ಅಂಗಡಿ ವಿಳಾಸ ಸಹ ತಪ್ಪು ಇದೆ ಎಂದು ಕೂಡ ಆರೋಪಿಸುತ್ತಿರುವ ಬಿಜೆಪಿ ವಕೀಲರಾದ ನಟರಾಜ್ ಶರ್ಮಾ ಅವರು ಮತ್ತೊಮ್ಮೆ ಪ್ರಕರಣ ರೀ ಓಪನ್ ಮಾಡಲು ಸಿದ್ಧರಾಗಿದ್ದಾರೆ.
[do_widget id=et_ads-4]
ಒಂದು ವೇಳೆ ಈ ಪ್ರಕರಣದಲ್ಲಿಸಿದ್ದರಾಮಯ್ಯರವರು ಅಪರಾಧಿಯೆಂದು ನಿರೂಪಣೆ ಯಾದಲ್ಲಿ ಸಿದ್ದರಾಮಯ್ಯನವರು ಜೈಲಿಗೆ ಸೇರಬೇಕಾಗುತ್ತದೆ ಅಷ್ಟೇ ಅಲ್ಲದೆ ಎಸಿಬಿ ಸಂಸ್ಥೆಯನ್ನು ತಮ್ಮ ಬಳಕೆಗೆ ಪ್ರಯತ್ನಿಸಿದ ಕಾರಣ ಶಿಕ್ಷೆ ಹೆಚ್ಚಾಗುವ ಸಂಭವ ಸಹ ಹೆಚ್ಚಾಗಿದೆ.
[do_widget id=et_ads-5]