ನಿಮ್ಮ ಭೂ ಪ್ರದೇಶ ನಮಗೆ ಬೇಡ, ನಮ್ಮ ಭೂ ಪ್ರದೇಶದ ತಂಟೆಗೆ ಬಂದರೆ !! ಅಷ್ಟೇ

ನಿಮ್ಮ ಭೂ ಪ್ರದೇಶ ನಮಗೆ ಬೇಡ, ನಮ್ಮ ಭೂ ಪ್ರದೇಶದ ತಂಟೆಗೆ ಬಂದರೆ !! ಅಷ್ಟೇ

0

ಭಾರತ ದೇಶವು ಎಲ್ಲಾ ರೀತಿಯಿಂದ ಸೇನೆಯಲ್ಲಿ ಸದೃಢವಾಗಿ ಇದ್ದರೂ ಇದುವರೆಗೂ ಯಾವುದೇ ದೇಶಗಳ ಮೇಲಾಗಲಿ ಆಕ್ರಮಣ ಮಾಡಿ ತಮ್ಮ ಸಿದ್ಧಾಂತವನ್ನು ಇತರ ಪ್ರದೇಶಗಳ ಮೇಲೆ ಹೇರಲು ಇದುವರೆಗೂ ಪ್ರಯತ್ನಪಟ್ಟಿಲ್ಲ. ಆದರೆ ಇತ್ತೀಚೆಗೆ ಸೇನೆಯನ್ನು ಮತ್ತಷ್ಟು ಬಲಿಷ್ಠ ಮಾಡುತ್ತಿರುವ ನರೇಂದ್ರ ಮೋದಿರವರ ನಿರ್ಧಾರಗಳನ್ನು ನೋಡಿದ ಕೆಲವರು ಭಾರತ ದೇಶವು ಇನ್ನಿತರ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತದೆ ಎಂದು ಊಹಿಸಿದ್ದರು.

[do_widget id=et_ads-2]

ಇದರ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಭಾರತದ ಆಚೆಗೆ ಯಾವುದೇ ಭೂ ಪ್ರದೇಶವನ್ನು ವಿಸ್ತರಿಸುವ ಬಯಕೆ ಭಾರತೀಯ ಸೇನೆಗೆ ಇಲ್ಲ ಬದಲಾಗಿ ನಮ್ಮ ಭೂ ಪ್ರದೇಶವನ್ನು ಉಳಿಸಿಕೊಳ್ಳುವ ತಾಕತ್ತು ಭಾರತೀಯ ಸೇನೆಗೆ ಇದೆ ಎಂದು ಹೇಳಿದ್ದಾರೆ.

[do_widget id=et_ads-3]

ಇದೇ ವೇಳೆ ಮಾತನಾಡಿರುವ ರಾವತ್ ರವರು ಭಾರತ ಮತ್ತು ಪೆಸಿಫಿಕ್ ಭಾಗದಲ್ಲಿ ಭೌಗೋಳಿಕ ರಾಜಕೀಯ ಮತ್ತು ಸವಾಲುಗಳು ಹೆಚ್ಚಾಗುತ್ತಿವೆ ಇದರಿಂದ ಬಾಹ್ಯ ಮತ್ತು ಆಂತರಿಕ ಭದ್ರತೆಯ ಪರಿಸರ ನಿರ್ಮಾಣ ಕಷ್ಟವಾಗುತ್ತಿದೆ ಆದರೆ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ರಾಜಕೀಯ ಅಭಿವೃದ್ಧಿ ಸಾಧಿಸುವುದು ಮಾತ್ರ ಭಾರತದ ಗುರಿಯಾಗುತ್ತದೆ ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿ ನಮ್ಮ ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರಲು ನಾವು ತಯಾರಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

[do_widget id=et_ads-4]

ಪೂರ್ವ ಏಷ್ಯಾ ಹಾಗೂ ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿಯಲ್ಲಿ ದೇಶದ ಸಾರ್ವಭೌಮತೆಗೆ ಅಂತಹ ಯಾವುದೇ ಗಡಿ ವಿವಾದಗಳು ನಲ್ಲಿ ನಾವು ಸುಮ್ಮನೆ ಕೂರುವುದಿಲ್ಲ ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ನೀಡಿದರು.

[do_widget id=et_ads-5]