ಸಿದ್ದು ಮುಂದೆ ನಡೆಯಲಿಲ್ಲ ಡಿಕೆಶಿ ಆಟ: ಶುರುವಾಗಲಿದೆಯೇ ಮತ್ತೊಂದು ಯುದ್ಧ

ಸಿದ್ದು ಮುಂದೆ ನಡೆಯಲಿಲ್ಲ ಡಿಕೆಶಿ ಆಟ: ಶುರುವಾಗಲಿದೆಯೇ ಮತ್ತೊಂದು ಯುದ್ಧ

0

ಕೆಲವೇ ಕೆಲವು ದಿನಗಳ ಹಿಂದಷ್ಟೇ ರಾಜ್ಯ ರಾಜಕಾರಣವನ್ನು ಅಲ್ಲಾಡಿಸಿದ ಪ್ರಮುಖ ಸಂಗತಿಯೆಂದರೆ ಬೆಳಗಾವಿ ಜಿಲ್ಲೆಯ ಪಿ ಎಲ್ ಡಿ ಬ್ಯಾಂಕ್ ನ ಅಧಿಕಾರ. ಹೌದು ಯಾವುದೋ ಕೇವಲ ಒಂದು ಬ್ಯಾಂಕಿನ ಅಧ್ಯಕ್ಷ ಸ್ಥಾನದ ಚುನಾವಣೆ ಇಡೀ ರಾಜ್ಯದ ಸರ್ಕಾರವನ್ನು ಅಲುಗಾಡಿಸುವ ಮಟ್ಟಕ್ಕೆ ತಲುಪಿತ್ತು.

[do_widget id=et_ads-2]

ಈ ಬಂಡಾಯವನ್ನು ಶಮನ ಮಾಡಲು ಜಾರಕಿಹೊಳಿ ಸಹೋದರರ ಆಪ್ತ ಸಿದ್ದರಾಮಯ್ಯ ರವರೆ ಕಣಕ್ಕಿಳಿಯ ಬೇಕಾಗಿತ್ತು. ಯಾಕೆಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಡಿಕೆ ಶಿವಕುಮಾರ್ ಅವರ ಬೆಂಬಲವಿತ್ತು ಇದನ್ನು ಕಂಡು ಗರಂ  ಆಗಿದ್ದ ಜಾರಕಿಹೊಳಿ ಸಹೋದರರು ಸರ್ಕಾರಕ್ಕೆ ಬೀಳಿಸುವ ಮಟ್ಟಕ್ಕೆ ತಲುಪಿದ್ದರು. ಅಂದು ಸಿದ್ದರಾಮಯ್ಯ ರವರೆ ಸರ್ಕಾರ ಉಳಿಸಿ ಜಾರಕಿಹೊಳಿ ಸಹೋದರರು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದರು.

[do_widget id=et_ads-3]

ಆದರೆ ಈ ನಿರ್ಧಾರದ ಹಿಂದೆ ಬಹುದೊಡ್ಡ ಗುಟ್ಟು ಅಡಗಿದೆ ಎಂಬುದು ನೆನ್ನೆಯಷ್ಟೇ ಬಹಿರಂಗಗೊಂಡಿದೆ. ಡಿಕೆ ಶಿವಕುಮಾರ್ ರವರು ಇತ್ತೀಚೆಗೆ ಕಾಂಗ್ರೆಸ್ ನ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರೆ ಅದಕ್ಕೆ ತಾಜಾ ಉದಾಹರಣೆಯೆಂದರೆ ಮೊನ್ನೆಯಷ್ಟೇ ಲಿಂಗಾಯಿತ ಧರ್ಮದ ಪರವಾಗಿ ಮಾತನಾಡಿ ಹಲವು ಕಾಂಗ್ರೆಸ್ ನಾಯಕರನ್ನು ಎದುರು ಹಾಕಿಕೊಂಡಿದ್ದರು ಇದರಿಂದ ಸಾಮಾನ್ಯವಾಗಿಯೇ ಸಿದ್ದರಾಮಯ್ಯನವರಿಗೆ ಡಿಕೆ ಶಿವಕುಮಾರ್ ಅವರು ತಲೆನೋವಾಗಿ ಪರಿಣಮಿಸಿದರು.

[do_widget id=et_ads-4]

ಇದನ್ನು ಅರಿತುಕೊಂಡ ಸಿದ್ದರಾಮಯ್ಯರವರು ಡಿಕೆ ಶಿವಕುಮಾರ್ ಅವರಿಗೆ ಶಾಕ್ ನೀಡಲು ಕಾಂಗ್ರೆಸ್ನ ಮಹಿಳಾ ಘಟಕ ಅಧ್ಯಕ್ಷ ಸ್ಥಾನ ದಿಂದ ಡಿ ಕೆ ಶಿವಕುಮಾರ್ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊಕ್ ನೀಡಿ ಪುಷ್ಪ ಅಮರನಾಥ ಅವರನ್ನು ಆಯ್ಕೆ ಮಾಡಿದ್ದಾರೆ. ಇವರು ಮೂಲತಃ ಮೈಸೂರಿನವರಾಗಿದ್ದು ಸಿದ್ದರಾಮಯ್ಯ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ.

[do_widget id=et_ads-5]

ಜಾರಕಿಹೊಳಿ ರವರ ಪ್ರಭಾವದಿಂದ ಸಿದ್ದರಾಮಯ್ಯರವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊಕ್ ನೀಡಲಾಗಿದೆ ಎನ್ನಲಾಗುತ್ತಿದ್ದು ಇದರಿಂದ ಸಾಮಾನ್ಯವಾಗಿಯೇ ಡಿಕೆ ಶಿವಕುಮಾರ್ ತಲೆ ಕೆಡಿಸಿಕೊಂಡಿದ್ದು ಕಾಂಗ್ರೆಸ್ ಪಾಳೆಯದಲ್ಲಿ ಎರಡು ಪ್ರಮುಖ ನಾಯಕರ ವಿರುದ್ಧ ಶೀತಲ ಸಮರ ಏರ್ಪಟ್ಟಿದೆ. ಈ ವಿದ್ಯಮಾನಗಳಿಗೆ ಡಿಕೆ ಶಿವಕುಮಾರ್ ಅವರು ಯಾವ ರೀತಿಯ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

[do_widget id=et_ads-6]