ಬಿಜೆಪಿಗೆ ಶಾಕ್: ಉಪಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

ಬಿಜೆಪಿಗೆ ಶಾಕ್: ಉಪಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

0

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯು ಎಲ್ಲಿಲ್ಲದ ಕುತೂಹಲವನ್ನು ಕ್ಷಣಕ್ಷಣವೂ ಮೂಡಿಸುತ್ತಿದೆ.  ಒಂದು ಕಡೆ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಮತ್ತೊಂದು ಕಡೆ ಜನರು ಹಲವು ಕಡೆ ಅಭ್ಯರ್ಥಿಗಳ ವಿರುದ್ಧ ಧ್ವನಿಯೆತ್ತಿ ವಿರೋಧಿಸುತ್ತಿದ್ದಾರೆ. ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ರವರ ಜನತೆ ಅವರ ವಿರುದ್ಧವೇ ತಿರುಗಿಬಿದ್ದಿದ್ದನ್ನು ಕಂಡಿದ್ದ ಬಿಜೆಪಿ ಪಕ್ಷವು ಗೆದ್ದು ಬಿಡುತ್ತೇವೆ ಎಂಬ ಉತ್ಸಾಹದಲ್ಲಿ ಇತ್ತು.

[do_widget id=et_ads-16]

ಆದರೆ ಈ ಎಲ್ಲಾ ಆಸೆಗಳಿಗೆ ತಣ್ಣೀರೆರಚಿದ್ದಾರೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಚಂದ್ರಶೇಖರ್. ಇದನ್ನು ಕೆಲವರು ಡಿಕೆ ಶಿವಕುಮಾರ್ ಅವರ ಆಟ ಎಂದು  ಹೇಳುತ್ತಿದ್ದಾರೆ. ಅಭ್ಯರ್ಥಿಯನ್ನು ಕೊನೆಯ ಸಮಯದಲ್ಲಿ ಹಿಂದೆ ಸರಿಸಲು ಕಾರಣವಾದರೂ ಏನಿರಬಹುದು ಎಂದು ಎಲ್ಲರೂ  ಆಲೋಚಿಸುತ್ತಿದ್ದಾರೆ.

[do_widget id=et_ads-17]

ಹೌದು ನೀವು ಓದುತ್ತಿರುವುದು ನಿಜ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಚಂದ್ರಶೇಖರ್ ರವರು ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಸಿಪಿ ಯೋಗೇಶ್ವರ್ ಅವರ ಮೇಲೆ ಆರೋಪಗಳನ್ನು ಮಾಡಿರುವ ಚಂದ್ರಶೇಖರ್ ರವರು ಇದ್ದಕ್ಕಿದ್ದ ಹಾಗೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಬಿಜೆಪಿ ಮುಖಂಡರ ಮೇಲೆ ಕಿಡಿಕಾರಿದ್ದಾರೆ.

[do_widget id=et_ads-18]

ತಮ್ಮ ನಿರ್ಧಾರಕ್ಕೆ ಸಿಪಿ ಯೋಗೀಶ್ವರ್ ಅವರ ಕಾರಣ ಎಂದು ಆರೋಪಿಸಿರುವ ಚಂದ್ರಶೇಖರ್ ರವರು ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ಹಿಂದೆ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆರೋಪಿಸುತ್ತಿದ್ದಾರೆ. ಆದರೆ ಇದುವರೆಗೂ ಅದ್ಯಾವುದಕ್ಕೂ ಯಾವುದೇ ಪುರಾವೆ ಗಳಾಗಲಿ ಸಿಕ್ಕಿಲ್ಲ.

[do_widget id=et_ads-19]