ರಾಮನಗರ ಹೋದರೇನಂತೆ, ಮಂಡ್ಯದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ ಕಾಂಗ್ರೆಸ್

ರಾಮನಗರ ಹೋದರೇನಂತೆ, ಮಂಡ್ಯದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ ಕಾಂಗ್ರೆಸ್

0

ಉಪಚುನಾವಣೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯು ಡಿ ಕೆ ಶಿವಕುಮಾರ್ ರವರ ಮತ್ತು ಅವರ ಸಹೋದರರ ಆಟದಲ್ಲಿ ಹಿಂದೆ ಸರಿದು ಬಿಜೆಪಿ ಗೆ ಬಿಗ್ ಶಾಕ್ ನೀಡಿದ್ದರು. ಇದರಿಂದ ಸಾಮಾನ್ಯವಾಗಿಯೇ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿತ್ತು.

[do_widget id=et_ads-2]

ಈ ಬಗ್ಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪನವರು ಡಿ ಕೆ ಶಿವಕುಮಾರ್ ರವರು ಮತ್ತು ಅವರ ಸಹೋದರರು ದುಡ್ಡಿನಿಂದ ಮತ್ತು ಚಂದ್ರಶೇಖರ್ ಅವರನ್ನು ಹೆದರಿಸಿ ಪಕ್ಷಕ್ಕೆ ಕರೆಸಿಕೊಂಡಿದ್ದಾರೆ ಇಂತಹ ನಾಯಕರಿಂದ ರಾಜಕೀಯ ಮತ್ತಷ್ಟು ಹದಗೆಡಲಿದೆ ಎಂದು ಕಿಡಿಕಾರಿದರು. ಆದರೆ ಆ ಘಟನೆ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ಮಂಡ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಶಾಕ್ ಎದುರಾಗಿದೆ.

[do_widget id=et_ads-3]

ಉಪ ಚುನಾವಣೆಯ ಕುರಿತು ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ಪಕ್ಷದ ಅಭ್ಯರ್ಥಿ ಯನ್ನು ಬೆಂಬಲಿಸಬೇಕು ಎಂದು ಹೇಳುತ್ತಿರುವಾಗ ಇದ್ದಕ್ಕಿದ್ದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವುದಿಲ್ಲ ಬದಲಾಗಿ ಬಿಜೆಪಿ ಪಕ್ಷಕ್ಕೆ ಇಲ್ಲವೇ ನೋಟ ಮತ ಚಲಾಯಿಸುತ್ತೇವೆ ಎಂದು ವಾಗ್ವಾದ ನಡೆಸಿದರು.

[do_widget id=et_ads-4]

ಇದರಿಂದ ಕೊಂಚ ಕಾಲ ಸಭೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಆದರೂ ಕೊನೆಗೆ ರಾಜಿಯಾಗದ ಕಾಂಗ್ರೆಸ್ ಕಾರ್ಯಕರ್ತರು ಸಭೆ ಬಿಟ್ಟು ಬಿಜೆಪಿ ಪರ ಘೋಷಣೆಗಳನ್ನು ಕೂಗುತ್ತ ಸಭೆಯಿಂದ ಹೊರ ನಡೆದರು. ಈ ಎಲ್ಲಾ ವಿದ್ಯಮಾನಗಳನ್ನು ನೋಡಿದರೆ ಕಾಂಗ್ರೆಸ್ ತಳಮಟ್ಟದ ಕಾರ್ಯಕರ್ತರು ಖಚಿತವಾಗಿಯೂ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎನ್ನಲಾಗುತ್ತಿದೆ.

[do_widget id=et_ads-5]