ಟಿಪ್ಪು ಜಯಂತಿಯ ದಿನವೇ ಟಿಪ್ಪುಗೆ ಶಾಕ್ ನೀಡಲು ರೆಡಿಯಾದ ಮೋದಿ ಸರ್ಕಾರ

ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದಲೂ ಟಿಪ್ಪು ಜಯಂತಿ ಎಂದರೆ ಒಂದು ವಿವಾದದ ವಿಷಯವಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಹಲವಾರು ಜನರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದ್ದಾರೆ, ಯಾರೋ ಕೇವಲ ಕೆಲವರನ್ನು ಸಂತೋಷ ಪಡಿಸಲು ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಾ ಬಂದಿದೆ.  ಹಲವಾರು ಹಿಂದುಗಳ ವಿರೋಧಿಯಾದ ಟಿಪ್ಪುಸುಲ್ತಾನನ ಜಯಂತಿಯನ್ನು ಆಚರಿಸಲಾಗುವುದು ಎಂದು ಸರ್ಕಾರ ಪಟ್ಟು ಕುಳಿತಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗಿತ್ತು.

[do_widget id=et_ads-16]

ಅಂದು ವಿರೋಧಿಸಿದ್ಧ ಕುಮಾರಸ್ವಾಮಿ ರವರೆ ಈಗಿನ ಟಿಪ್ಪು ಜಯಂತಿಗೆ ಬೆಂಬಲ ಸೂಚಿಸಿರುವುದು ವಿಪರ್ಯಾಸವೇ ಸರಿ. ಆದರೆ ಈ ಎಲ್ಲಾ ವಿವಾದಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ಮೋದಿ ಸರ್ಕಾರವು ಟಿಪ್ಪು ಜಯಂತಿಯ ದಿನವೇ ಟಿಪ್ಪುಗೆ  ಶಾಕ್ ನೀಡಲು ರೆಡಿಯಾಗಿದೆ.  ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಜೆಪಿ ಸರ್ಕಾರವು ಮೊದಲಿನಿಂದಲೂ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದೆ. ಈ ಬಾರಿಯೂ ಸಹ ಟಿಪ್ಪು ಜಯಂತಿ ನಡೆಸಬಾರದು ಎಂದು ಹಲವಾರು ಬಿಜೆಪಿ ನಾಯಕರು ದನಿ ಎತ್ತಿದ್ದಾರೆ.

[do_widget id=et_ads-17]

ಆದರೆ ಕರ್ನಾಟಕದಲ್ಲಿ ಈಗ ಇರುವ ಮೈತ್ರಿ ಸರ್ಕಾರವು ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಇದರಿಂದ ಈಗ ಅಖಾಡಕ್ಕೆ ಇಳಿದಿರುವ ಮೋದಿ ಸರಕಾರವು ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಗೌರವ ತಂದುಕೊಡುವ ನಿರ್ಧಾರವನ್ನು ಮಾಡಿದ್ದಾರೆ. ಹಲವಾರು ಹಿಂದುಗಳ ಮಾರಣ ಹೋಮ ನಡೆಸಿದ ಟಿಪ್ಪು ಸುಲ್ತಾನ್ ರವರ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ ನಾಯಕರು ತೆಗೆದುಕೊಳ್ಳಲು ಹೋಗುತ್ತಿರುವ ನಿರ್ಧಾರ ನೋಡಿದರೆ ಭೇಷ್ ಎನ್ನುತ್ತೀರಾ.

[do_widget id=et_ads-18]

ಪ್ರತಿದಿನವೂ ಮೈಸೂರು ಮತ್ತು ಬೆಂಗಳೂರಿನ ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಲು ನಿರ್ಧರಿಸಿರುವ ಮೋದಿ ಸರಕಾರವು,  ನಮ್ಮ ಹೆಮ್ಮೆಯ ರಾಜರಾದ ಚಾಮರಾಜ ಒಡೆಯರ್ ಅವರ ಹೆಸರನ್ನು ಇಡಲು ಚರ್ಚಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

[do_widget id=et_ads-19]

ಇದರಿಂದ ಸಾಮಾನ್ಯವಾಗಿಯೇ ಕನ್ನಡಿಗರ ಮೊಗದಲ್ಲಿ ಸಂತೋಷ ಮೂಡಿದ್ದು ಈ ಸುದ್ದಿಯನ್ನು ಬಿಜೆಪಿ ವಕ್ತಾರರಾದ ಸುಧಾಂಶು ತ್ರಿವೇದಿ ರವರು  ಅಧಿಕೃತವಾಗಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಟಿಪ್ಪು ಜಯಂತಿಯ ದಿನವೇ ಘೋಷಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ರಾಜ್ಯ ಸರ್ಕಾರಕ್ಕೆ ಈ ಮೂಲಕ ಮತ್ತೊಂದು ಶಾಕ್ ನೀಡಲು ಬಿಜೆಪಿ ಸರ್ಕಾರ ತಯಾರಾಗಿದೆ.

[do_widget id=et_ads-20]

Post Author: Ravi Yadav