ರೈತರ ಕಷ್ಟಗಳೆಲ್ಲವೂ ದೂರ ದೂರ, ಮೋದಿ ಅವರಿಂದ ಐತಿಹಾಸಿಕ ನಿರ್ಧಾರ

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ವಿರೋಧ ಪಕ್ಷದವರು ಮೋದಿ ಅವರನ್ನು ರೈತ ವಿರೋಧಿ ಎಂದು ದೂಷಿಸುತ್ತಾರೆ ಆದರೆ ಮೋದಿ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸದಾ ರೈತರ ಪರವಾಗಿ ನಿಂತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

[do_widget id=et_ads-2]

ಈಗ ಮತ್ತೊಮ್ಮೆ ಮೋದಿ ಅವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು ರೈತರ ಕಷ್ಟಗಳನ್ನು ದೂರ ಮಾಡಲು ಹೊರಟಿದ್ದಾರೆ. ಇದೇ ಚಳಿಗಾಲದ ಅಧಿವೇಶನದಲ್ಲಿ ಐತಿಹಾಸಿಕ ನಿರ್ಧಾರ ವನ್ನು ಜಾರಿಗೆ ತಂದು ರೈತರ ಬಾಳು ಬೆಳಗಿಸಲು ಮೋದಿ ಅವರು ಪಣತೊಟ್ಟಿದ್ದಾರೆ.

[do_widget id=et_ads-3]

ಅಷ್ಟಕ್ಕೂ ಐತಿಹಾಸಿಕ ನಿರ್ಧಾರ ಏನು ಗೊತ್ತಾ?

ರೈತರು ಬೆಳೆದ ಬೆಳೆಗಳಿಗೆ ಇಷ್ಟು ದಿವಸ ಕನಿಷ್ಠ ಬೆಂಬಲ ಬೆಲೆ ಎಂದು ಘೋಷಿಸಲಾಗುತ್ತೀತ್ತು. ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸುವ ಮೊದಲು ರೈತರು ಆ ಬೆಳೆ ಬೆಳೆಯಲು ಎಷ್ಟು ಖರ್ಚು ಮಾಡಿರಬಹುದು ಎಂಬುದನ್ನು ಅರಿತು ರೈತರಿಗೆ ಯಾವುದೇ ಲಾಭವಿಲ್ಲದೆ ಆ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸಲಾಗುತ್ತಿತ್ತು. ಅಂದರೆ ಸರಿ ಸುಮಾರು ಹತ್ತು ಸಾವಿರ ಖರ್ಚು ಮಾಡಿ ಬೆಳೆಯನ್ನು ಬೆಳೆದರೆ ಆ ಬೆಳೆಗ ಸರ್ಕಾರದಿಂದ ಹತ್ತು ಸಾವಿರ ಕನಿಷ್ಟ ಬೆಲೆ ಎಂದು ಘೋಷಿಸಲಾಗುತ್ತಿತ್ತು.

[do_widget id=et_ads-4]

ಆದರೆ ಮೋದಿ ಅವರು ರೈತರು ಒಂದು ಬೆಳೆ ಬೆಳೆಯಲು ಹಲವು ದಿನಗಳ ಕಾಲ ಕಷ್ಟಪಟ್ಟು ದುಡಿಯುತ್ತಾರೆ ಅವರಿಗಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಎಷ್ಟು ಖರ್ಚು ಮಾಡಿರುತ್ತಾರೆ ಅದಕ್ಕಿಂತ ಕನಿಷ್ಠ ಶೇಕಡ 50 ರಷ್ಟು ಲಾಭ ಬರುವಂತೆ ಮಾಡಲು ಕನಿಷ್ಠ ಬೆಲೆಯನ್ನು ಘೋಷಿಸಲು ನಿರ್ಧರಿಸಿದ್ದಾರೆ. ಅಂದರೆ ಹತ್ತು ಸಾವಿರ ಖರ್ಚು ಮಾಡಿ ಬೆಳೆಯನ್ನು ಬೆಳೆದರೆ ರೈತರಿಗೆ ಕನಿಷ್ಠ ಸರ್ಕಾರದಿಂದ ಹದಿನೈದು ಸಾವಿರ ರೂಪಾಯಿ ಕನಿಷ್ಠ ಬೆಂಬಲ ಬೆಲೆ ಸಿಗಲಿದೆ.

[do_widget id=et_ads-5]

ಈ ನಿರ್ಧಾರವು ಒಂದು ಐತಿಹಾಸಿಕ ನಿರ್ಧಾರವಾಗಿದ್ದು ಇದುವರೆಗೂ ಯಾವ ಪ್ರಧಾನಮಂತ್ರಿಯೂ ಅಥವಾ ರಾಜ್ಯ ಸರ್ಕಾರಗಳು ಸಹ ಇಷ್ಟು ಕನಿಷ್ಠ ಬೆಂಬಲ ಬೆಲೆ ಯಾವುದೇ ರೈತರಿಗೆ ನೀಡಿಲ್ಲ, ಈ ಯೋಜನೆ ಜಾರಿಯಾದ ಕ್ಷಣದಿಂದ ರೈತನು ಬೆಳೆದ ಬೆಳೆಗಳಿಗೆ ಲಾಭ ಪಡೆಯದೆ ಇರುವುದಿಲ್ಲ.

[do_widget id=et_ads-6]

Post Author: Ravi Yadav