ದೇವೇಗೌಡರ ಭದ್ರಕೋಟೆಯನ್ನು ಒಡೆಯಲು ಸಿದ್ಧರಾದ ಯುವ ನಾಯಕರು

ದೇವೇಗೌಡರ ಭದ್ರಕೋಟೆಯನ್ನು ಒಡೆಯಲು ಸಿದ್ಧರಾದ ಯುವ ನಾಯಕರು

0

ರಾಜಕೀಯಕ್ಕೆ ಬಂದಾಗಿನಿಂದಲೂ ಜೆಡಿಎಸ್ ಮತ್ತು ದೇವೇಗೌಡರ ಭದ್ರಕೋಟೆ ಎನಿಸಿಕೊಂಡಿರುವ ಹಾಸನ ಕ್ಷೇತ್ರ ಎಲ್ಲಿಲ್ಲದ ಕುತೂಹಲವನ್ನು ಈ ಬಾರಿಯ ಚುನಾವಣೆಯಲ್ಲಿ ಮೂಡಿಸಲಿದೆ. ಯಾಕೆಂದರೆ ಹಾಸನವನ್ನು ದೇವೇಗೌಡರ ಕೈಯಿಂದ ಕಿತ್ತು ಕೊಳ್ಳಲು ರಾಜ್ಯದ ಎರಡು ಯುವ ನಾಯಕರು ಟೊಂಕಕಟ್ಟಿ ನಿಲ್ಲಲಿದ್ದಾರೆ ಎನ್ನಲಾಗುತ್ತಿದೆ.

[do_widget id=et_ads-2]

ಮೊದಲಿನಿಂದಲೂ ಹಾಸನದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸುತ್ತಾ ಬಂದಿರುವ ದೇವೇಗೌಡರಿಗೆ ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶಾಸಕರಾದ ಪ್ರೀತಂ ಗೌಡ ರವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದು ಮತ್ತು ಇಷ್ಟೇ ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವು ಕೇವಲ ಕೆಲವೇ ಮತಗಳಿಂದ ಸೋಲನ್ನು ಕಂಡಿದ್ದು ಶಾಕ್ ನೀಡಿತ್ತು.

[do_widget id=et_ads-3]

ಕಳೆದ ಎಲ್ಲಾ ಚುನಾವಣೆ ಗಳಿಗಿಂತಲೂ ಜೆಡಿಎಸ್ ಪಕ್ಷವು ಕಡಿಮೆ ಮತವನ್ನು ಹಾಸನದಲ್ಲಿ ಪಡೆದಿತ್ತು ಎಂಬುದು ಗಮನಿಸಬೇಕಾದ ವಿಷಯ. ಹೀಗಾಗಿ ತಮ್ಮ ಭದ್ರಕೋಟೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ದೇವೇಗೌಡರು ತಲುಪಿದ್ದಾರೆ ಎನ್ನಲಾಗುತ್ತಿದೆ.

[do_widget id=et_ads-4]

ಯಾಕೆಂದರೆ ರಾಜ್ಯದ ಯುವ ನಾಯಕರಾದ ಪ್ರೀತಮ್ ಗೌಡ ಮತ್ತು ಪ್ರತಾಪ್ ಸಿಂಹ ರಂತಹ ಯುವ ನಾಯಕರು ಹಾಸನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಾಪ್ ಸಿಂಹರವರು ಮೈಸೂರಿನಿಂದ ಸ್ಪರ್ಧಿಸಿದರು ಸಹ ಹಾಸನದಲ್ಲಿ ಬಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

[do_widget id=et_ads-5]

ಇನ್ನು ಮೂಲತಹ ಹಾಸನದಲ್ಲಿ ಪ್ರೀತಮ್ ಗೌಡ ರವರು ಸಹ ಜೆಡಿಎಸ್ ಪಕ್ಷಕ್ಕೆ ವಿರುದ್ಧವಾಗಿ ಗೆದ್ದು ಬೀಗಿದ್ದೂ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಅದೇ ರೀತಿ ಈ ಎರಡು ನಾಯಕರ ವರ್ಚಸ್ಸಿನ ಮೇರೆಗೆ ಬಿಜೆಪಿ ಪಕ್ಷವು 2019ರ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಹಾಸನವನ್ನು ಗೆದ್ದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಛಿದ್ರವಾಗಲಿದೆ ಎಂಬುದಂತೂ ಸತ್ಯ.

[do_widget id=et_ads-6]