ರಾಜಕೀಯ ನೂತನ ಮುಖ್ಯಮಂತ್ರಿ ? ರೇಸ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತಾ?

ರಾಜಕೀಯ ನೂತನ ಮುಖ್ಯಮಂತ್ರಿ ? ರೇಸ್ ನಲ್ಲಿ ಯಾರ್ಯಾರು ಇದ್ದಾರೆ ಗೊತ್ತಾ?

0

ಕರ್ನಾಟಕ ರಾಜಕೀಯವೂ ಕ್ಷಣಕ್ಷಣವೂ ರಣರಂಗವಾಗಿ ಮಾರ್ಪಡುತ್ತಿದೆ. ಒಂದು ಕಡೆ ಉಪಚುನಾವಣೆಯ ಕಾವು ಆಗುತ್ತಿದೆ ಆದರೆ ಇನ್ನೊಂದು ಕಡೆ ಕುಮಾರಸ್ವಾಮಿರವರ ಮುಖ್ಯಮಂತ್ರಿ ಅಧ್ಯಾಯ ಕೊನೆಗೊಳ್ಳಲಿದೆ ಎಂದು ಬಂದಿರುವ ಮಾಹಿತಿ ರಾಜ್ಯ ರಾಜಕಾರಣವನ್ನು ಅಲ್ಲಾಡಿಸುತ್ತದೆ.

[do_widget id=et_ads-2]

ಮೊದಲಿನಿಂದಲೂ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಹಲವು ನಾಯಕರಲ್ಲಿ ವಿರೋಧ ವ್ಯಕ್ತವಾಗಿತ್ತು ಅದರಲ್ಲಿಯೂ ಕುಮಾರಸ್ವಾಮಿರವರ ಕೆಲವು ಹೇಳಿಕೆಗಳಿಂದ ಪಕ್ಷಕ್ಕೆ ಬಾರಿ ಧಕ್ಕೆಯಾಗಿದೆ ಎಂದು ಹಲವಾರು ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇಷ್ಟೇ ಅಲ್ಲದೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಾದ ಭಿನ್ನಾಭಿಪ್ರಾಯಗಳು ಮತ್ತಷ್ಟು ದಿನೇ ದಿನೇ ಹೆಚ್ಚಾಗುತ್ತಿದೆ.

[do_widget id=et_ads-15]

ಇದರಿಂದ ಸಾಮಾನ್ಯವಾಗಿಯೇ ಕಾಂಗ್ರೆಸ್ ಪಕ್ಷವು ಚಿಂತೆಗೆ ಒಳಗಾಗಿತ್ತು, ಇದೇ ವಿಷಯವನ್ನು ಬಳಸಿಕೊಂಡು ರಾಮನಗರದಲ್ಲಿ ನಡೆಯುವ ಚುನಾವಣೆಯ ಆಧಾರದ ಮೇಲೆ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ನಿರ್ಧಾರವನ್ನು ಪಕ್ಷ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ರಾಮನಗರದಲ್ಲಿ ಜೆಡಿಎಸ್ ಪಕ್ಷವು ಗೆಲ್ಲದೆ ಹೋದಲ್ಲಿ ಕುಮಾರಸ್ವಾಮಿರವರ ಪದಚ್ಯುತಿ ಆಗಲಿದೆ.

[do_widget id=et_ads-5]

ಅಧಿಕಾರಕ್ಕಾಗಿ ಸಚಿವರಾದ ಡಿ ಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಕುಮಾರ್ ರವರು ಪ್ರಚಾರ ಕಾರ್ಯಕ್ರಮದಲ್ಲಿ ಅಷ್ಟಾಗಿ ತೊಡಗಿ ಕೊಳ್ಳುತ್ತಿಲ್ಲ ಎಂದು ರಾಜಕೀಯ ಪಂಡಿತರು ಹೇಳುತ್ತಿದ್ದಾರೆ ಯಾಕೆಂದರೆ ಈಗಾಗಲೇ ದೇವೇಗೌಡರು ಹೇಳಿದಂತೆ ತಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗದಿದ್ದರೆ ತಮ್ಮ ಜಾತಿಯವರೇ ಆದ ಡಿಕೆ ಶಿವಕುಮಾರ್ ರವರೇ ಮುಖ್ಯಮಂತ್ರಿ ಆಗಬೇಕು ಅವರು ಒಬ್ಬ ಅರ್ಹ ವ್ಯಕ್ತಿ ಎಂಬುದು ನನಗೆ ತಿಳಿದಿದೆ ಎಂಬ ಹೇಳಿಕೆಯನ್ನು ನೆನೆಸಿಕೊಳ್ಳುತ್ತಾರೆ.

[do_widget id=et_ads-4]

ಆದರೆ ಇದರಿಂದ ಕಾಂಗ್ರೆಸ್ ಪಕ್ಷದಲ್ಲಿಯೂ ಸಹ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುವ ಸೂಚನೆಗಳು ಕಾಣುತ್ತಿವೆ ಯಾಕೆಂದರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ ಕಳೆದುಕೊಳ್ಳುವ ಮನುಷ್ಯನಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಒಂದು ವೇಳೆ ಅದೇ ನಡೆದಲ್ಲಿ ಕುಮಾರಸ್ವಾಮಿ ಅವರ ಪದಚ್ಯುತಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಎರಡಕ್ಕೂ ಕಾರಣವಾಗಲಿದೆ.

[do_widget id=et_ads-3]

ಒಂದು ವೇಳೆ ಮೈತ್ರಿ ಸರ್ಕಾರ ಮುರಿದು ಬಿದ್ದಲ್ಲಿ ಮತ್ತೊಮ್ಮೆ ಚುನಾವಣೆ ಎದುರಿಸಲು ಪಕ್ಷಗಳು ಸಿದ್ಧರಾಗಿದ್ದ ಲ್ಲಿ ಲೋಕಸಭಾ ಚುನಾವಣೆಯ ಜೊತೆ ಕರ್ನಾಟಕವು ಹಲವು ವರ್ಷಗಳ ನಂತರ ವಿಧಾನಸಭಾ ಚುನಾವಣೆಯನ್ನು ಕಾಣಲಿದೆ. ಆದರೆ ಈ ಬಾರಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಜನರು ಗೆಲ್ಲಿಸುವುದರ ಲ್ಲಿ  ಅನುಮಾನವೇ ಇಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ ಯಾಕೆಂದರೆ ಕೊಟ್ಟ ಅವಕಾಶವನ್ನು ಮೈತ್ರಿ ಸರ್ಕಾರವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದು ಜನರಿಗೆ ತಿಳಿದಿದೆ ಎಂದಿದ್ದಾರೆ.

[do_widget id=et_ads-9]