ಅಂದು ರೇವಣ್ಣ ಇಂದು ದೇಶಪಾಂಡೆ- ದುರಹಂಕಾರದ ಪರಮಾವಧಿಯೇ?

ಅಂದು ರೇವಣ್ಣ ಇಂದು ದೇಶಪಾಂಡೆ- ದುರಹಂಕಾರದ ಪರಮಾವಧಿಯೇ?

0

ಕಳೆದ ಕೆಲವು ದಿನಗಳ ಹಿಂದಷ್ಟೇ ಕೊಡಗಿನ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ನೀಡುವ ವೇಳೆ ಬಿಸ್ಕೆಟ್ ಪ್ಯಾಕ್ ಗಳನ್ನು ಸಂತ್ರಸ್ತರಿಗೆ ಎಸೆದು ದೇಶದೆಲ್ಲೆಡೆ ಸುದ್ದಿಯಾಗಿದ್ದ ಎಚ್ ಡಿ ರೇವಣ್ಣ ಅವರ ಕಾರ್ಯವೈಖರಿಯನ್ನು ಹಲವಾರು ಜನ ಮನಸ್ಸಿಗೆ ಬಂದಂತೆ ದೂಷಿಸಿದ್ದರು. ಆದರೆ ಈಗ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ವಿ ದೇಶಪಾಂಡೆ ಅವರನ್ನು ಇಡೀ ದೇಶವೇ ದೂಷಿಸುವಂತಹ ಕೆಲಸವನ್ನು ಮಾಡಿದ್ದಾರೆ.

[do_widget id=et_ads-16]

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಆರ್ ವಿ ದೇಶಪಾಂಡೆ ರವರು ಜಿಲ್ಲೆಯ ಹಳಿಯಾಳದಲ್ಲಿ ನಡೆದ ಲೋಕೋಪಯೋಗಿ ಇಲಾಖೆ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ನೂತನ ಒಳಕ್ರೀಡಾಂಗಣದ ಉದ್ಘಾಟನೆಗೆ ಬಂದಿದ್ದರು.

[do_widget id=et_ads-17]

ಅದೇ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಹಲವಾರು ಕ್ರೀಡಾಪಟುಗಳಿಗೆ ಕಿಟ್ ವಿತರಣೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು. ಹೆಸರು ಕರೆದ ಮೇಲೆ ಒಬ್ಬೊಬ್ಬರಾಗಿ ಕಿಟ್ ಗಳನ್ನು ಸ್ವೀಕರಿಸಲು ಬರುತ್ತಿದ್ದ ಕ್ರೀಡಾಪಟುಗಳು ಕೇವಲ ಕೆಲವೇ ಕ್ಷಣಗಳನ್ನು ತಡ ಮಾಡಿದ್ದಕ್ಕಾಗಿ ಆರ್ ವಿ ದೇಶಪಾಂಡೆ ರವರು ವೇದಿಕೆಯಿಂದ ಲೆಕ್ಕಗಳನ್ನು ಕ್ರೀಡಾಪಟುಗಳ ಮೇಲೆ ಎಸೆದಿದ್ದಾರೆ.

[do_widget id=et_ads-18]

ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿರುವ ಕ್ರೀಡಾಪಟುಗಳ ಸಾಧನೆಯನ್ನು ಮೆಚ್ಚಿ ಕೊಳ್ಳಬೇಕೆ ಹೊರತು ಅವರನ್ನು ಈ ರೀತಿ ಅವಮಾನಿಸುವುದು ತಪ್ಪು ಎಂಬುದು ನಮ್ಮ ಅಭಿಪ್ರಾಯ. ಕೆಲವು ದಿನಗಳ ಹಿಂದಷ್ಟೇ ಕ್ರೀಡಾಲೋಕದಲ್ಲಿ ಸಾಧನೆ ಮಾಡಿರುವ ಸಾಧಕರ ಜೊತೆ ನಮ್ಮ ದೇಶದ ಪ್ರಧಾನ ಮಂತ್ರಿಗಳೇ ಖುದ್ದು ಚರ್ಚೆಯನ್ನು ಮಾಡಿದ್ದರು.

[do_widget id=et_ads-19]

ಒಂದು ದೇಶದ ಪ್ರಧಾನ ಮಂತ್ರಿಗಳೇ ಆ ರೀತಿಯ ಗೌರವ ನೀಡಿದ ಮೇಲೆ ಕೇವಲ ಒಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಆರ್ ವಿ ದೇಶಪಾಂಡೆ ಅವರು ಈ ರೀತಿ ಮಾಡುವುದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

[do_widget id=et_ads-20]