ಯುವ ವೇಗಿ ಖಲೀಲ್ ಅಹಮ್ಮದ್‌ಗೆ ಎಚ್ಚರಿಕೆ ನೀಡಿದ ರೆಫ್ರಿ

ಯುವ ವೇಗಿ ಖಲೀಲ್ ಅಹಮ್ಮದ್‌ಗೆ ಎಚ್ಚರಿಕೆ ನೀಡಿದ ರೆಫ್ರಿ

0

ಕಳೆದ ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ  ಕೇವಲ 5 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಪಡೆದು ಮನೆ ಮಾತಾಗಿದ್ದ ಖಲೀಲ್ ಅಹಮ್ಮದ್‌ ರವರಿಗೆ ಪಂದ್ಯದ ನಂತರ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

[do_widget id=et_ads-16]

ವಿಕೆಟ್ ಪಡೆದ ಸಂಭ್ರಮದಲ್ಲಿ ನಿಯಮ ಮೀರಿ ವರ್ತಿಸಿದ ಯುವ ವೇಗಿಯಾದ ಖಲೀಲ್ ಅಹಮದ್ ರವರಿಗೆ ಮ್ಯಾಚ್ ರೆಫರಿ ರವರು ಎಚ್ಚರಿಕೆ ನೀಡಿ ಮೆರಿಟ್ ಪಾಯಿಂಟ್ ಅನ್ನು ಸಹ ಪಡೆದಿದ್ದಾರೆ.

[do_widget id=et_ads-17]

ಮರ್ಲಾನ್ ಸ್ಯಾಮುಯಲ್ಸ್ ರವರ ವಿಕೆಟ್ ಕಬಳಿಸಿದ ವೇಳೆಯಲ್ಲಿ ನಿಯಮ ಮೀರಿದ್ದಾರೆ. ಪದ ಬಳಕೆ ಹಾಗೂ ಸೆಲೆಬ್ರೇಷನ್ ಎದುರಾಳಿಯನ್ನ ಕೆಣಕುವಂತಿತ್ತು.ಈ ಮೂಲಕ ಖಲೀಲ್ ಐಸಿಸಿ ಕೋಡ್ ಲೆವೆಲ್ 1 ಉಲ್ಲಂಘಿಸಿದ್ದರು.

[do_widget id=et_ads-18]

ನಿಯಮ ಉಲ್ಲಂಘಿಸಿದ ಖಲೀಲ್ ಅಹಮ್ಮದ್‌ಗೆ ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ವಾರ್ನಿಂಗ್ ನೀಡಿದರು. ಇಷ್ಟೇ ಅಲ್ಲ ಡಿಮೆರಿಟ್ ಪಾಯಿಂಟ್ಸ್ ನೀಡಲಾಯಿತು. 4ನೇ ಏಕದಿನದಲ್ಲಿ ಖಲೀಲ್ ಅಹಮ್ಮದ್ 5 ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

[do_widget id=et_ads-19]