GST ಬಳಿಕ ಮತ್ತೊಂದು ಮಹತ್ತರ ಕಾರ್ಯದತ್ತ ಮೋದಿ ಸರ್ಕಾರದ ಚಿತ್ತ

GST ಬಳಿಕ ಮತ್ತೊಂದು ಮಹತ್ತರ ಕಾರ್ಯದತ್ತ ಮೋದಿ ಸರ್ಕಾರದ ಚಿತ್ತ

0

ನವದೆಹಲಿ: ದೇಶವಿಡೀ ಏಕರೂಪದ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ತಂದ ಬಳಿಕ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಕೈಹಾಕಿದೆ. ಈವರೆಗೆ ರಾಜ್ಯದಿಂದ ರಾಜ್ಯಕ್ಕೆ ಪ್ರತ್ಯೇಕವಾಗಿದ್ದ ಸ್ಟ್ಯಾಂಪ್ ಡ್ಯೂಟಿ(ಮುದ್ರಾಂಕ/ದಸ್ತಾವೇಜು ಶುಲ್ಕ)ಯನ್ನು ದೇಶದಲ್ಲೆಡೆ ಒಂದೇ ರೀತಿಯಾಗಿಸುವ ಬಗ್ಗೆ ಯೋಚಿಸಿದೆ.

[do_widget id=et_ads-2]

ಇದರಿಂದಾಗಿ ಷೇರು, ಸಾಲಪತ್ರ ಮುಂತಾದ ಹಣಕಾಸಿಗೆ ಸಂಬಂಧಪಟ್ಟ ದಾಖಲೆಗಳನ್ನು ದೇಶದ ಯಾವ ಮೂಲೆಯಿಂದಲೂ ಮತ್ತೊಂದು ಮೂಲೆಗೆ ವರ್ಗಾವಣೆ ಮಾಡುವುದರಿಂದ ವಾಣಿಜ್ಯೋದ್ಯಮಕ್ಕೆ ಬಲ ತುಂಬಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ.

[do_widget id=et_ads-3]

ಮೂಲಗಳ ಪ್ರಕಾರ ಈ ಬಗ್ಗೆ ರಾಜ್ಯ ಸರ್ಕಾರಗಳ ಮುಂದೆ ಪ್ರಸ್ತಾವನೆಯನ್ನೂ ಇರಿಸಿಯಾಗಿದೆ. ಇದರಿಂದ ರಾಜ್ಯಗಳಿಗೆ ಬರುವ ಆದಾಯಕ್ಕೆ ಯಾವುದೇ ರೀತಿಯ ಹೊಡೆತ ಬೀಳುವುದಿಲ್ಲ ಎಂಬ ಕಾರಣಕ್ಕೆ ರಾಜ್ಯಗಳು ನಕಾರ ಸೂಚಿಸುವ ಸಾಧ್ಯತೆಗಳು ಕಡಿಮೆ.ಜೊತೆಗೆ ಈ ನಡೆಯಿಂದ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವುದರಿಂದ ಕಾಯ್ದೆ ತಿದ್ದುಪಡಿ ಅತ್ಯಗತ್ಯ ಎಂದು ಕೂಗು ಉದ್ಯಮ ವಲಯದಿಂದಲೂ ಕೇಳಿ ಬರುತ್ತಿದೆ.

[do_widget id=et_ads-5]

ದೇಶದ ಮಾರುಕಟ್ಟೆಯನ್ನು ನಿಯಂತ್ರಿಸುವ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ(ಎಸ್‌ಇಬಿಇ) ಈ ಹಿಂದೆಯೇ ರಾಜ್ಯಗಳ ಮುಂದೆ ಇಂತಹ ಪ್ರಸ್ತಾವವನ್ನು ಇರಿಸಿತ್ತು. ಇದೀಗ ಕೇಂದ್ರ ಸರ್ಕಾರವೇ ಮನಸ್ಸು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶತಮಾನಗಳಿಂದ ಇರುವ ಮುದ್ರಾಂಕ ಸುಂಕ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಮಸೂದೆ ಮಂಡಿಸಲಿದೆ.

[do_widget id=et_ads-4]

Creadits: Kannada Dunia