ಮುಗಿಯಿತೇ ಡಿಕೆಶಿ ಹವಾ, ರಾಮನಗರದಲ್ಲಿ ಮೈತ್ರಿಗೆ ಮತ್ತೊಂದು ಶಾಕ್

ಕೇವಲ 6 ತಿಂಗಳ ಅಧಿಕಾರಕ್ಕಾಗಿ ನಡೆಯುತ್ತಿರುವ ಉಪಚುನಾವಣೆ ರಾಜ್ಯದಲ್ಲಿ ಭಾರೀ ಕುತೂಹಲವನ್ನು ಉಂಟು ಮಾಡುತ್ತಿದೆ. ಸಾಮಾನ್ಯವಾಗಿ ರಾಮನಗರವು ಜೆಡಿಎಸ್ ವಶದಲ್ಲಿ ಇರುತ್ತಿತ್ತು ಆದರೆ ಜೆಡಿಎಸ್ ಕುಟುಂಬದವರನ್ನು ಹೊರತುಪಡಿಸಿದರೆ ಉಳಿದಂತೆ ಡಿಕೆ ಶಿವಕುಮಾರ್ ಅವರ ಹವಾ ಜೋರಾಗಿತ್ತು.

[do_widget id=et_ads-2]

ಮೈತ್ರಿ ಸರ್ಕಾರದಲ್ಲಿ ಬಿಜೆಪಿಯನ್ನು ಸೋಲಿಸುವ ಹುಮ್ಮಸ್ಸಿನಲ್ಲಿ ರಾಮನಗರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ನಿರ್ಧರಿಸಲಾಗಿತ್ತು ಅದರಂತೆಯೇ ಜೆಡಿಎಸ್ ಪಕ್ಷದ ಕಡೆಯಿಂದ ಅಭ್ಯರ್ಥಿಯು ಸಹ ಘೋಷಿಸಲಾಗಿತ್ತು. ಇದರಿಂದ ಡಿಕೆಶಿ ರವರ ಹಿಡಿತದಲ್ಲಿದ್ದ ರಾಮನಗರ ಕಾಂಗ್ರೆಸ್ ಕೈ ತಪ್ಪಿದಂತೆ ಕಾಣುತ್ತಿದೆ.

[do_widget id=et_ads-6]

ಈ ಮೊದಲು ಕೇವಲ ಲಿಂಗಪ್ಪ ಮತ್ತು ಅವರ ಮಗ ಮತ್ತು ಕೆಲವು ಕಾಂಗ್ರೆಸ್ ಬೆಂಬಲಿಗರು ಪಕ್ಷವನ್ನು ರಾಮನಗರದಲ್ಲಿ ಉಳಿಸಿಕೊಳ್ಳಲು ಹೋರಾಡುತ್ತಿರುವ ಬಗ್ಗೆ ತಿಳಿಸಿದರು ಆದರೆ ಈಗ ಮತ್ತೊಂದು ಪ್ರಮುಖ ನಾಯಕ ಬಂಡಾಯ ಎದ್ದು ಡಿಕೆ ಶಿವಕುಮಾರ್ ಅವರಿಗೆ ಬಹುದೊಡ್ಡ ಸವಾಲು ಎದುರಾದಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ರಾಮನಗರದಲ್ಲಿ ಡಿ ಕೆ ಶಿವಕುಮಾರ್ ಅವರ ಹವಾ ಕಡಿಮೆಯಾಗಿದೆ ಎನಿಸುತ್ತಿದೆ.

[do_widget id=et_ads-3]

ಈಗ ಹೊಸದಾಗಿ ಕಳೆದ ಬಾರಿಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ರವರು ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ರಾಮನಗರದ ವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟು ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿದೆ ಮೈತ್ರಿ ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಹೀಗಾಗಿ ನನ್ನನ್ನು ಏಕಾಂಗಿಯಾಗಿ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ, ಕಳೆದ ಬಾರಿ ನನಗೆ ಮತ ಹಾಕಿದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ನಾನು ಮೋಸ ಮಾಡಲಾರೆ ಎಂದು ಹೇಳಿದ್ದಾರೆ.

[do_widget id=et_ads-4]

ಇದನ್ನೆಲ್ಲಾ ನೋಡಿದರೆ ಇಬ್ಬರ ಜಗಳದ ನಡುವೆ ಮೂರನೇ ಅವರಿಗೆ ಲಾಭ ಎಂಬಂತೆ ಬಿಜೆಪಿ ಪಕ್ಷಕ್ಕೆ ಭಾರೀ ಲಾಭವಾಗುವಂತೆ ಕಾಣುತ್ತಿದೆ ಒಂದು ವೇಳೆ ರಾಮನಗರವು ಕೇಸರಿಮಯ ವಾದಲ್ಲಿ ಜನರು ಸ್ಪಷ್ಟ ಸಂದೇಶವನ್ನು ಮೈತ್ರಿ ಸರ್ಕಾರಕ್ಕೆ ನೀಡಿದಂತಾಗುತ್ತದೆ ಮತ್ತು ಅಧಿಕಾರದಲ್ಲಿರುವ ಮೈತ್ರಿ ಸರ್ಕಾರಕ್ಕೆ ಭಾರಿ ಮುಜುಗರ ಉಂಟಾಗುತ್ತದೆ.

[do_widget id=et_ads-5]

Post Author: Ravi Yadav