ಮಂಡ್ಯ: ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಕಾಂಗ್ರೆಸ್ ಕಾರ್ಯಕರ್ತರು

ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಕಾಂಗ್ರೆಸ್ ಕಾರ್ಯಕರ್ತರು

0

ರಾಜ್ಯದಲ್ಲಿ ಕ್ಷಣಕ್ಷಣವೂ ಲೋಕಸಭಾ ಉಪ ಚುನಾವಣೆಯ ಕಾವು ಏರತೊಡಗಿದೆ. ಇತ್ತ ಸಾಮಾನ್ಯ ಜನರೂ ತಾವು ಯಾರಿಗೆ ಮತ ನೀಡಿದರೆ ಒಳ್ಳೆಯದು ಎಂದು ಚಿಂತಿಸುತ್ತಿದ್ದರೆ ಅತ್ತ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿಕೊಳ್ಳುತ್ತೇವೆ.

[do_widget id=et_ads-2]

ರಾಜ್ಯದಲ್ಲಿ ಅಪವಿತ್ರ ಮೈತ್ರಿ ಎಂದೆ ಖ್ಯಾತಿ ಪಡೆದುಕೊಂಡಿರುವ ಮೈತ್ರಿ ಸರ್ಕಾರವು ತನ್ನ ಖ್ಯಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಹಲವಾರು ಸ್ವಪಕ್ಷ ನಾಯಕರೇ ಬಂಡಾಯ ಎದ್ದಿದ್ದಾರೆ. ಅದರಲ್ಲಿಯೂ ರಾಮನಗರ ಲೋಕಸಭಾ ಕ್ಷೇತ್ರವು ರಣರಂಗವಾಗಿ ಮಾರ್ಪಟ್ಟಿದೆ ಒಂದು ಕಡೆಯಿಂದ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಆಯ್ಕೆಯಿಂದ ಅಸಮಾಧಾನಗೊಂಡಿದ್ದಾರೆ. ಇನ್ನೊಂದು ಕಡೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರು ಬಂಡಾಯವೆದ್ದಿದ್ದಾರೆ.

[do_widget id=et_ads-3]

ಈಗ ರಾಮನಗರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರವೂ ಸರಿಯಾಗಿದೆ ಎಂದುಕೊಳ್ಳುವಷ್ಟರಲ್ಲಿ ಮಂಡ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಭಾರೀ ಆತಂಕವನ್ನು ಉಂಟು ಮಾಡಿದೆ. ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದಕ್ಕಾಗಿ ಬಂಡಾಯ ಎದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

[do_widget id=et_ads-4]

ಒಂದು ವೇಳೆ ಕಾಂಗ್ರೆಸ್ ಪಕ್ಷವು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ಕಾಂಗ್ರೆಸ್ ಬೆಂಬಲಿಗರು ಬಿಜೆಪಿ ಪಕ್ಷದ ಕಡೆ ಪ್ರಚಾರ ಮಾಡಿ ಬಿಜೆಪಿ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ಮೈತ್ರಿ ಸರ್ಕಾರದ ನಾಯಕರು ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಮತ್ತಷ್ಟು ಮೂಡುತ್ತಿದೆ.

[do_widget id=et_ads-5]

ರಾಮನಗರ ಕಾಂಗ್ರೆಸ್ ನನ್ನು ಬಿಗಿಮುಷ್ಟಿಯಲ್ಲಿ ಹಿಡಿದುಕೊಂಡಿದ್ದ ಡಿ ಕೆ ಶಿವಕುಮಾರ್ ಅವರ ಕೈ ತಪ್ಪಿರುವ ರಾಮನಗರ ಕಾಂಗ್ರೆಸ್ ಒಂದು ಕಡೆ ತಲೆ ನೋವು ಆಗಿದ್ದರೆ ಈಗ ಮಂಡ್ಯದಲ್ಲಿ ಭುಗಿಲೆದ್ದಿರುವ ಬಂಡಾಯ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

[do_widget id=et_ads-6]