ಬಿಗ್ ಬ್ರೇಕಿಂಗ್: ರಾಜೀನಾಮೆ ನೀಡಿದ ಸಮ್ಮಿಶ್ರ ಸರ್ಕಾರದ ಸಚಿವ

ಬಿಗ್ ಬ್ರೇಕಿಂಗ್: ರಾಜೀನಾಮೆ ನೀಡಿದ ಸಮ್ಮಿಶ್ರ ಸರ್ಕಾರದ ಸಚಿವ

0

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಹಲವಾರು ಶಾಸಕರು ಮತ್ತು ಸಚಿವರು ರಾಜೀನಾಮೆ ಬೆದರಿಕೆ ಹಾಕುತ್ತಾ ಬಂದಿದ್ದಾರೆ ಕೆಲವರಿಗೆ ಸಚಿವ ಸ್ಥಾನ ಸಿಗದೆ ಇರುವುದು ಮತ್ತು ಕೆಲವರಿಗೆ ಸಿಕ್ಕರು ಅವರಿಗೆ ಬೇಕಾದ ಖಾತೆ ಸಿಗದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

[do_widget id=et_ads-2]

ಆದರೆ ಈಗ ಬೆದರಿಕೆಗಳು ನಿಜವಾಗುತ್ತವೆ ಮೈತ್ರಿ ಸರ್ಕಾರದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ. ಬಹಿರಂಗವಾಗಿ ಮಾಧ್ಯಮಗಳ ಮುಂದೆ ಮಾಹಿತಿ ನೀಡಿರುವ ಸಚಿವರು ರಾಜೀನಾಮೆ ನೀಡುವ ವಿಷಯವನ್ನು ಬಹಿರಂಗಗೊಳಿಸಿದ್ದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

[do_widget id=et_ads-3]

ಅಷ್ಟಕ್ಕೂ ವಿಷಯದ ಮೂಲವೇನು?

ಹಲವಾರು ದಿನಗಳಿಂದ ಮೈತ್ರಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದ ಸಚಿವರಾದ ಎನ್. ಮಹೇಶ್ ರವರು ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿ ಯಾಗಿ ಚುನಾವಣೆಯನ್ನು ಎದುರಿಸಿದ್ದವು ಈ ಪೈಕಿ ಕೊಳ್ಳೇಗಾಲದ ವಿಧಾನಸಭಾ ಕ್ಷೇತ್ರದಿಂದ ಇವರು ಚುನಾಯಿತರಾಗಿದ್ದರು.

[do_widget id=et_ads-4]

ಇನ್ನು ತಮ್ಮ ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎನ್.ಮಹೇಶ್ ಅವರು ಮಂತ್ರಿ ಸ್ಥಾನ ಬಹಳ ದೊಡ್ಡದು, ನಮ್ಮ ಪಕ್ಷದ ಚಟುವಟಿಕೆಗಳಿಗೆ ಹೆಚ್ಚಿನ ಗಮನವನ್ನು ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ ಹೀಗಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ ಅಂತ ಹೇಳಿದ್ದಾರೆ.

[do_widget id=et_ads-5]

ರಾಜೀನಾಮೆ ಪತ್ರವನ್ನು ನಾನು ಸಿಎಂಗೆ ಸಲ್ಲಿಸಿದ್ದು, ನಾನು ಕುಮಾರಸ್ವಾಮಿಯವರಿಗೆ ವೈಯುಕ್ತಿಕವಾಗಿ ವಂದನೆಗಳನ್ನು ಸಲ್ಲಿಸುವೆ ಅಂತ ಹೇಳಿದರು. ಯಾವುದೇ ಕಾರಣಕ್ಕೂ ನಾನು ರಾಜೀನಾಮೆಯನ್ನು ವಾಪಸ್ಸು ತೆಗೆದುಕೊಳ್ಳುವುದಿಲ್ಲ, ಮೊದಲು ನನ್ನ ಕ್ಷೇತ್ರ ಹಾಗೂ ನನ್ನ ಪಕ್ಷದ ದೊಡ್ಡದು, ಪಕ್ಷದ ಸಂಘಟನೆಗೆ ನಾನು ತೊಡಗಿಸಿಕೊಳ್ಳುವೆ ಅಂತ ಹೇಳಿದರು.

[do_widget id=et_ads-6]