ಶಾಕ್ ಆದ ಬಿಎಸ್ ವೈ: ಶಿಸ್ತಿನ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ

ಶಾಕ್ ಆದ ಬಿಎಸ್ ವೈ: ಶಿಸ್ತಿನ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಜೆಪಿ ಪಕ್ಷವು ಶಿಸ್ತಿನ ಪಕ್ಷ ಎಂದು ಹೆಸರು ಪಡೆದಿದೆ ಯಾಕೆಂದರೆ ಸಾಮಾನ್ಯವಾಗಿ ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಮತ್ತು ಅಪಸ್ವರಗಳು ಕಡಿಮೆ. ಪ್ರತಿಯೊಬ್ಬ ನಾಯಕರು ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ವರಿಷ್ಠರ ನಿರ್ಧಾರ ಗಳನ್ನು ಗೌರವಿಸುತ್ತಾರೆ.

[do_widget id=et_ads-2]

ಆದರೆ ಬಿಜೆಪಿ ಪಕ್ಷದಲ್ಲಿ ಈಗ ಭಿನ್ನಮತ ಭುಗಿಲೆದ್ದಿದ್ದು ಇಷ್ಟು ದಿನ ಇಲ್ಲದೆ ಇರುವ ಭಿನ್ನಮತ ಚುನಾವಣೆ ಹತ್ತಿರ ಬಂದಾಗ ಎದ್ದಿರುವುದು ಬಿಜೆಪಿ ನಾಯಕರಲ್ಲಿ ಎಲ್ಲಿಲ್ಲದ ಆತಂಕ ಮೂಡಿಸುತ್ತಿದೆ.ಅದರಲ್ಲಿಯೂ ಕರ್ನಾಟಕದಲ್ಲಿ ಪ್ರತಿ ಸೀಟು ಅಧಿಕಾರಕ್ಕೆ ತಮ್ಮನ್ನು ಹತ್ತಿರ ಕೊಂಡೊಯ್ಯುತ್ತದೆ ಎಂದು ನಂಬಿದ್ದ ಬಿಜೆಪಿ ಪಕ್ಷಕ್ಕೆ ಉಪಚುನಾವಣೆಯ ಸಂದರ್ಭದಲ್ಲಿ ಈ ಶಾಕ್ ಆಗಿರುವುದು ವಿಷಾದನೀಯ ಸಂಗತಿ.

[do_widget id=et_ads-3]

ಅಷ್ಟಕ್ಕೂ ವಿಷಯದ ಮೂಲವೇನು?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉಪಚುನಾವಣೆಗೆ ಪ್ರತಿ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಅದೇ ರೀತಿ ಬಿಜೆಪಿ ಪಕ್ಷವೂ ಸಹ ಜಮಖಂಡಿಯಲ್ಲಿ ನಡೆಯಲಿರುವ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿತ್ತು.

[do_widget id=et_ads-4]

ಇಂತಹ ಇಂತಹ ಸಮಯದಲ್ಲಿ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರಾದ ಬಿ ಎಸ್ ಸಿಂಧೂರ ರವರು ಅಭ್ಯರ್ಥಿಯ ಆಯ್ಕೆಯಿಂದ ಅಸಮಾಧಾನ ರಾಗಿದ್ದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಯಾರೂ ಊಹಿಸದ ಬೆಳವಣಿಗೆ ಪಕ್ಷದಲ್ಲಿ ನಡೆದಿದ್ದು ಬಿಎಸ್ ಯಡಿಯೂರಪ್ಪ ನವರಿಗೆ ಶಾಕ್ ಆಗಿದೆ.

[do_widget id=et_ads-5]

ಬಂಡಾಯವನ್ನು ಶಮನ ಮಾಡಲು ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪನವರು ಮುಂದಾಗಿದ್ದು ಅವರ ಜೊತೆ ಗೋವಿಂದ ಕಾರಜೋಳ ರವರು ಸಹ ಬಿ ಎಸ್ ಸಿಂಧೂರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

[do_widget id=et_ads-6]