ಮೋದಿ ರವರಿಗೆ ಶಾಕ್: ಪಂಚರಾಜ್ಯಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

ಮೋದಿ ರವರಿಗೆ ಶಾಕ್: ಪಂಚರಾಜ್ಯಗಳಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು?

0

ಚುನಾವಣೆಗಳಿಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಒಬ್ಬೊಬ್ಬರ ಸಮೀಕ್ಷೆಗಳ ಲೆಕ್ಕಾಚಾರಗಳು ಶುರುವಾಗುತ್ತವೆ. ಈಗ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಪಂಚರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವುದನ್ನು ಟೈಮ್ಸ್ ನೌ ವಾರ್​​​ ರೂಂ ಸ್ಟ್ರ್ಯಾಟಜಿಸ್ ಮತದಾನ ಪೂರ್ವ ಸಮೀಕ್ಷೆ ನಡೆಸಿದೆ.

[do_widget id=et_ads-2]

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಡ ರಾಜ್ಯದಲ್ಲಿ ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಯಾವ ಪಕ್ಷ ಎಷ್ಟೆಷ್ಟು ಸ್ಥಾನಗಳಲ್ಲಿ ಗೆಲ್ಲಲಿವೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

[do_widget id=et_ads-3]

ಛತ್ತೀಸ್​​ಗಡದಲ್ಲಿ ಮತ್ತೆ BJP ಸರ್ಕಾರ:  ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಕುರಿತು ಟೈಮ್ಸ್ ನೌ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಬಿಜೆಪಿ ಅತಿ ದೊಡ್ಡ ಪಕ್ಷವಾಗಲಿದ್ದು,ಒಟ್ಟು 90 ಸ್ಥಾನಗಳಲ್ಲಿ ಬಿಜೆಪಿ 47, ಕಾಂಗ್ರೆಸ್ 33, ಇತರರಿಗೆ 10 ಸ್ಥಾನಗಳು ಸಿಗಲಿವೆ. ಕಳೆದ ಬಾರಿ 49 ಗೆದ್ದಿದ್ದ ಬಿಜೆಪಿಗೆ ಈ ಬಾರಿ 47 ಸ್ಥಾನ ಸಾಧ್ಯತೆ ಇದ್ದು, ಮತ್ತೊಮ್ಮೆ ಆಡಳಿತಾರೂಢ ಬಿಜೆಪಿಗೆ ಮತದಾರ ಒಲಿಯಲಿದ್ದಾನೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

[do_widget id=et_ads-4]

ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಮಧ್ಯಪ್ರದೇಶದಲ್ಲೂ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.ಒಟ್ಟು 230 ಸ್ಥಾಣಗಳ ಪೈಕಿ ಬಿಜೆಪಿ 142 ಸ್ಥಾನ. ಕಾಂಗ್ರೆಸ್ಸಿಗೆ 77 ಸ್ಥಾನ ಲಭಿಸಿದೆ. ಇನ್ನು ಇತರೆ ಪಕ್ಷಗಳು 11 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ.

[do_widget id=et_ads-5]

ರಾಜಸ್ಥಾನದಲ್ಲಿ ಆಡಳಿತರೂಢ BJPಗೆ ಸೋಲು:ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆಯಂತೆ ರಾಜಸ್ಥಾನದಲ್ಲಿ ಮತದಾರ ಕಾಂಗ್ರೆಸ್​ಗೆ​​ ಒಲಿದಿದ್ದು,  ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಿದೆ. ಒಟ್ಟು 200 ಸ್ಥಾನಗಳಲ್ಲಿ ಬಿಜೆಪಿ 75, ಕಾಂಗ್ರೆಸ್ 115, ಇತರರು 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆಯಿಂದ ತಿಳಿದುಬಂದಿದೆ.

[do_widget id=et_ads-6]

Creadits: Suvarna News