ಕೊನೆಗೂ ಸಿಕ್ಕಿತು ಜಾತಿ ಮತ್ತು ಕುಟುಂಬ ರಾಜಕಾರಣಕ್ಕೆ ಮುಕ್ತಿ: ದಂಗಾದರೆ ಗೌಡರು

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೆಡಿಎಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕಾರಣ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ ಅದಕ್ಕೆ ತಕ್ಕಂತೆ ಪ್ರತಿ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷದವರು ತಮ್ಮ ಕುಟುಂಬದವರಿಗೆ ಮಣೆ ಹಾಕುವುದು ಸರ್ವೇಸಾಮಾನ್ಯವಾಗಿತ್ತು.

[do_widget id=et_ads-2]

ಆದರೆ ಈ ಬಾರಿ ಯಾಕೋ ಮೊಟ್ಟ ಮೊದಲ ಬಾರಿಗೆ ರಾಮನಗರದ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ದೇವೇಗೌಡರ ನಿರ್ಧಾರದ ವಿರುದ್ಧ ಧ್ವನಿಯೆತ್ತಿದ್ದರು. ಅನಿತಾ ಕುಮಾರಸ್ವಾಮಿ ರವರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದರು.

[do_widget id=et_ads-3]

ಇಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿಯೂ ಸಹ ನಾವು ರಾಮನಗರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬಾರದು ಎಂದು ಅಪಸ್ವರ ಎದ್ದಿತ್ತು. ಈ ದಂಗೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಡಿಕೆ ಶಿವಕುಮಾರ್ ಅವರ ಆಪ್ತ ಲಿಂಗಪ್ಪನವರ ಮಗ ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

[do_widget id=et_ads-4]

ಯಾಕೆಂದರೆ ರಾಮನಗರ ಜೆಡಿಎಸ್ ನಲ್ಲಿ ಅನಿತಾ ಕುಮಾರಸ್ವಾಮಿ ಗಿಂತಲೂ ಹೆಚ್ಚಿನ ಅರ್ಹತೆಯುಳ್ಳ ವ್ಯಕ್ತಿಗಳು ಇದ್ದಾರೆ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ ಅಂತಹ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಎಲ್ಲರೂ ಒತ್ತಾಯಿಸಿದರು ಇಲ್ಲವಾದಲ್ಲಿ ನಾವು ಯಾವುದೇ ಜಾತಿಯನ್ನು ಅಥವಾ ಕುಟುಂಬವನ್ನು ಗಮನಿಸದೆ ಪಕ್ಷಾಂತರ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.

[do_widget id=et_ads-5]

ಬಹುಶಹ ದೇವೇಗೌಡರು ಈ ಒತ್ತಾಯಕ್ಕೆ ಮಣಿದಂತೆ ಕಾಣುತ್ತಿದೆ. ಯಾಕೆಂದರೆ ರಾಮನಗರ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡದಿರಲು ಪಕ್ಷ ನಿರ್ಧರಿಸಿದೆ. ಹೌದು ತಮ್ಮ ಕುಟುಂಬದಿಂದ ಅಭ್ಯರ್ಥಿಯನ್ನು ಘೋಷಿಸುವ ಬದಲಿಗೆ ಯಾರಾದರೂ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರಿಗೆ ಕಾಂಗ್ರೆಸ್ ಪಕ್ಷವು ಸಹ ಬೆಂಬಲ ನೀಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ.

[do_widget id=et_ads-6]

ಈ ವಿಷಯವು ನ್ಯೂಸ್ ಚಾನಲ್ ಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕೊನೆಗೂ ಜಾತಿ ಮತ್ತು ಕುಟುಂಬ ರಾಜಕಾರಣ ಒಂದು ಚುನಾವಣೆಯಲ್ಲಿ ಆದರೂ ಅಂತ್ಯವಾಯಿತು ಇದು ಹೀಗೆ ಮುಂದುವರೆಯಲಿ ಎಂಬುದು ಜನರ ಆಶಯವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ವೈರಲ್ ಆಗಿದೆ.

[do_widget id=et_ads-7]

Post Author: Ravi Yadav