20 ಲೋಕಸಭಾ ಕ್ಷೇತ್ರಗಳು ಮೋದಿ ರವರಿಗೆ ಬೋನಸ್:ವಿಪಕ್ಷಗಳು ವಿಲ ವಿಲ

20 ಲೋಕಸಭಾ ಕ್ಷೇತ್ರಗಳು ಮೋದಿ ರವರಿಗೆ ಬೋನಸ್:ವಿಪಕ್ಷಗಳು ವಿಲ ವಿಲ

0

ದೇಶದಲ್ಲಿ ಪ್ರತಿ ಕ್ಷಣಕೊಮ್ಮೆ 2019 ರ ಲೋಕಸಭಾ ಚುನಾವಣೆಯೇ ಕಾವು ಏರತೊಡಗಿದೆ, ಪ್ರತಿ ಪಕ್ಷವು ದೇಶದ ಅಧಿಕಾರದ ಗದ್ದುಗೆ ಹಿಡಿಯಲು ಅಷ್ಟೇ ಅಲ್ಲದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿವೆ. ಇವೆಲ್ಲದುರ ನಡುವೆ ಮೋದಿ ರವರ ಸಿಂಹ ಗರ್ಜನೆ ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ಮುಂದುವರೆಯುತ್ತಿದೆ. ವಿರೋಧ ಪಕ್ಷಗಳು ರಚಿಸಿಕೊಂಡ ತೃತೀಯ ರಂಗ ಮೂರ್ಖರಂತೆ ಸುನಾಮಿ ತಡೆಯಲು ಕಟ್ಟಿದ ಗೋಡೆ ಎಂಬಂತೆ ಸುನಾಮಿ ಬರುವ ಮೊದಲೇ ಬಿದ್ದು ಹೋದಂತೆ ಆಗಿದೆ.

[do_widget id=et_ads-2]

ಇಂತಹ ಸಮಯದಲ್ಲಿ ಮೋದಿರವರಿಗೆ 20 ಲೋಕಸಭಾ ಕ್ಷೇತ್ರಗಳು ಬೋನಸ್ ಸಿಕ್ಕಂತೆ ಆಗಿದೆ. ಮೊದಲೇ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಬಹುಮತ ಪಡೆಯದಂತೆ ತಡೆಯಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ವಿರೋಧ ಪಕ್ಷಗಳು ತಮ್ಮ ಪ್ರಯತ್ನ ತಾವು ಮಾಡುವುದರಲ್ಲಿ ತಲೆ ಕೆಡಿಸಿಕೊಂಡಿರುವಾಗ ಈ ಬೋನಸ್ ವಿರೋಧ ಪಕ್ಷದವರ ನಿದ್ದೆಗೆಡಿಸಿದೆ.

[do_widget id=et_ads-3]

ಅಷ್ಟಕ್ಕೂ ಆ ಬೋನಸ್ ಹೇಗೆ ಸಿಗುತ್ತದೆ ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರ ಮೋದಿ ಅವರಿಗೆ ಬೆಂಬಲ ಘೋಷಿಸಿ ನಂತರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂದು ಮುಖ್ಯಮಂತ್ರಿಯಾದ ಚಂದ್ರಬಾಬು ನಾಯ್ಡು ನವರು ಬೆಂಬಲವನ್ನು ವಾಪಸ್ ಪಡೆದಿದ್ದರು. ಇಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಮಿತ್ರ ಪಕ್ಷವಾಗಿ ಚುನಾವಣೆಯನ್ನು ಎದುರಿಸುವುದಾಗಿ ಘೋಷಿಸಿದರು.

[do_widget id=et_ads-4]

ಆದರೆ ಆಂಧ್ರ ಪ್ರದೇಶದ ವಿರೋಧಪಕ್ಷವಾದ ವೈ ಎಸ್ ಆರ್ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 20 ಕ್ಕೂ ಹೆಚ್ಚು ಸೀಟುಗಳನ್ನು ಗಳಿಸಲಿದೆ ಎಂದು ರಾಜಕೀಯ ಪಂಡಿತರು ಮತ್ತು ಸಮೀಕ್ಷೆಗಳು ಹೇಳುತ್ತಿವೆ. ಬದ್ಧ ವಿರೋಧಿಗಳಾದ ಚಂದ್ರಬಾಬು ನಾಯ್ಡು ರವರು ಮತ್ತು ಜಗಮೋಹನ್ ರೆಡ್ಡಿ ರವರು ಖಂಡಿತವಾಗಿಯೂ ಒಂದೇ ಬಣದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದಿಲ್ಲ.

[do_widget id=et_ads-5]

ಅಷ್ಟೇ ಅಲ್ಲದೆ ನರೇಂದ್ರ ಮೋದಿ ಅವರಿಗೆ ಬಹಳ ಆಪ್ತರಾಗಿರುವ ಜಗನ್ಮೋಹನ್ ರೆಡ್ಡಿ ರವರು ಲೋಕಸಭಾ ಚುನಾವಣೆಯ ನಂತರ ಮೋದಿ ಅವರಿಗೆ ಬೆಂಬಲ ಘೋಷಿಸುವುದು ಬಹುತೇಕ ಖಚಿತವಾಗಿದೆ ಯಾಕೆಂದರೆ ಹಲವು ಬಾರಿ ನರೇಂದ್ರ ಮೋದಿ ಅವರನ್ನು ನಾವು ಬೆಂಬಲಿಸುವುದಾಗಿ ಮತ್ತು ಅವರು ನಮ್ಮ ದೇಶವನ್ನು ಉದ್ಧಾರ ಮಾಡಲು ಹುಟ್ಟಿದ ಒಬ್ಬ ಉನ್ನತ ನಾಯಕ ಎಂದು ಜಗನ್ ಮೋಹನ್ ರೆಡ್ಡಿ ರವರು ಹೇಳುತ್ತಿರುತ್ತಾರೆ.

[do_widget id=et_ads-6]