ಬಿತ್ತು 4 ಜೀವ, ಕುಮಾರಸ್ವಾಮಿ ರವರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಿ…!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಬೀಗುತ್ತಾರೆ. ಇತ್ತ ರಾಜ್ಯದ ರೈತರು ತಮ್ಮ ಸಾಲ ಮನ್ನಾ ಆಗುತ್ತದೆ ಎಂದು ಹಗಲು ಕನಸು ಕಾಣುತ್ತಾ ಕುಳಿತಿದ್ದಾರೆ.ಬ್ಯಾಂಕಿನ ಅಧಿಕಾರಿಗಳು ಮನೆ ಬಾಗಿಲಿಗೆ ಬಂದರೆ ನನ್ನ ಹೆಸರು ಹೇಳಿ ಎಂದು ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಸಾಲ ಮನ್ನದ ವಿಷಯವನ್ನು ಕೆದಕಿದಾಗ ಯಾವ ಒಬ್ಬ ರೈತನು ಸಾಲಮನ್ನ ವಾಗಿದೆಯೆಂದು ಹೇಳಿಕೊಳ್ಳುತ್ತಿಲ್ಲ.

ಬದಲಾಗಿ ಇನ್ನೂ ಮೂರು ಜಿಲ್ಲೆಗಳ ಜನರು ಮಾತ್ರ ಕುಮಾರಸ್ವಾಮಿ ರವರನ್ನು ಜಾಣ ಕುರುಡರಂತೆ ಕಾಣುತ್ತಾ ಬೆಂಬಲಿಸುತ್ತಿದ್ದಾರೆ. ಈಗ ಮಂಡ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು ರಾಜ್ಯದ ರೈತರಲ್ಲಿ ಭಯವನ್ನು ಉಂಟು ಮಾಡಿದೆ.

ಒಂದೇ ಕುಟುಂಬದ ನಾಲ್ಕು ಜನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ಬಾರಿ ಸಿಎಂ ಕುಮಾರಸ್ವಾಮಿ ರವರ ಜನತಾದರ್ಶನದಲ್ಲಿ  ಕುಮಾರಸ್ವಾಮಿ ರವರನ್ನು ಈ ಕುಟುಂಬವು ಭೇಟಿಯಾಗಿತ್ತು ಎಂಬುದು ಗಮನಿಸಬೇಕಾದ ವಿಷಯ. ಜನರ ಸಮಸ್ಯೆಗಳನ್ನು ನಿಂತ ಜಾಗದಲ್ಲಿ ಪರಿಹಾರ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ  ಅವರು ಎರಡು ಬಾರಿ ಬೇಟಿಯಾದ ಕುಟುಂಬಕ್ಕೆ ಯಾವ ಸಹಾಯವನ್ನು ಮಾಡಲಿಲ್ಲ.

ಅದರ ಫಲಿತಾಂಶವಾಗಿ ಈಗ ನಾಲ್ಕು ಜೀವಗಳು ಆತ್ಮಹತ್ಯೆಗೆ ಶರಣಾಗಿವೆ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಆಗಿದೆ ಎಂದು ರಾಜ್ಯದ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಈಗಲಾದರೂ ಜನ ಎಚ್ಚೆತ್ತುಕೊಂಡು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರೆ ಒಳಿತು ಎಂಬುದು ನಮ್ಮ ಉದ್ದೇಶ. ದಯವಿಟ್ಟು ಪ್ರತಿಯೊಬ್ಬರಿಗೂ ನಾವು ಕೇಳಿಕೊಳ್ಳುವುದೇನೆಂದರೆ ಮತ ಒಬ್ಬ ಅರ್ಹ ವ್ಯಕ್ತಿಗೆ ನೀಡಿ ನಿಮ್ಮ ಜಾತಿ ಧರ್ಮ ಯಾವುದನ್ನು ನೋಡಿಕೊಂಡು ದಯವಿಟ್ಟು ಮತ ನೀಡಬೇಡಿ.

Post Author: Ravi Yadav