ಟ್ರಂಪ್ ತಂತ್ರ, ಮೋದಿ ಪ್ರತಿ ತಂತ್ರ: ದೊಡ್ಡಣ್ಣನಿಗೆ ಶಾಕ್ ನೀಡಲು ಸಿದ್ಧವಾಗಿದೆ ಭಾರತ

0

ಅಮೇರಿಕಾದ ಹೊಸ ನೀತಿ ನಿಯಮಗಳಿಂದ ಡಾಲರ್ ಬೆಲೆ ಹೆಚ್ಚಾಗುತ್ತಾ ಇದೆ. ಇದರಿಂದ ಭಾರತ ಮಾತ್ರವಲ್ಲದೆ ಇತರ ಬಲಿಷ್ಠ ದೇಶಗಳ ಆರ್ಥಿಕತೆ ಮೇಲೆ ಬರೆ ಬೀಳುತ್ತಿದೆ. ನಮ್ಮ ದೇಶದ ರೂಪಾಯಿಯಂತೆಯೇ ಇತರ ದೇಶಗಳ ಕರೆನ್ಸಿಗಳ ಮೇಲೆಯೂ ಪ್ರಭಾವ ಬಿದ್ದಿದೆ. ಇದರಿಂದಾಗಿಯೇ‌‌ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದು.

ಭಾರತದ ರೂಪಾಯಿ ಮೌಲ್ಯ ಕಡಿಮೆಯಾಗದಿದ್ದರೂ ಡಾಲರ್ ಬೆಲೆ ಜಾಸ್ತಿ ಆಗಿರುವುದು ಭಾರತ ಹಾಗೂ ಭಾರತ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕಾಗಿ ಮೋದಿ ಸರಕಾರ ಇದೆಲ್ಲದರಿಂದ ಹೊರ ಬರಲು ಇಂದು ಸಭೆ ಕರೆದಿದ್ದಾರೆ.ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ, RBI ಗವರ್ನರ್ ಹಾಗು ಇತರ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ರೂಪಾಯಿ ಅಪಮೌಲ್ಯ ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ವಿದೇಶದಿಂದ ಸಾಲ ಪಡೆಯುವುದನ್ನು ಕಡಿಮೆ ಮಾಡುವುದು ಹಾಗು ಅವಶ್ಯಕತೆ ಇಲ್ಲದ ಹಾಗು ಅಗತ್ಯ ಇಲ್ಲದ ವಸ್ತುಗಳ ಆಮದಿಗೆ  ನಿರ್ಬಂಧ ಹೇರಲಾಗಿದೆ. ಸರಕಾರದ ಈ ನೀತಿ ರೂಪಾಯಿ ಅಪಮೌಲ್ಯ ಕುಸಿತವನ್ನು ನಿಲ್ಲಿಸಬಹುದು ಎಂದು ನಂಬಿಕೆ ಇಟ್ಟಿದೆ. ದೇಶದ ಆರ್ಥಿಕ ವ್ಯವಸ್ಥೆ ಹೇಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹಾಗು RBI ಗವರ್ನರ್ ಊರ್ಜಿತ್ ಪಟೇಲ್ ಪ್ರಧಾನ ಮಂತ್ರಿ ಮೋದಿಯವರಿಗೆ ವಿವರಿಸಿದರು.

ಮೋದಿ ಸರಕಾರದ ನಿಯಮಗಳಿಂದ ಭಾರತ ಈ ಸ್ಥಾನಗಳಿಸಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಅರ್ಥವ್ಯವಸ್ಥೆ ಹೊಸ ಆಯಾಮ ಪಡೆದಿದೆ. ಭಾರತದ ಜಿಡಿಪಿ ಚೀನಾದ ಜಿಡಿಪಿಯನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ನೋಟ್ ಬ್ಯಾನ್, GST ಅಂತಹ ಆರ್ಥಿಕ ನೀತಿಯಿಂದ ಭಾರತ ವಿಶ್ವದ 6ನೇ ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ರಕ್ಷಣಾ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಎಲ್ಲದರಲ್ಲೂ‌ ಮೋದಿ ಸರಕಾರದ ಸಾಧನೆ ಹಿಂದಿ ಸರಕಾರಗಳಿಂದ ಎಷ್ಟೋ ಪಟ್ಟು ಮೇಲಿದೆ.