ಮಾಸ್ಟರ್ ಪ್ಲಾನ್- ಮೋದಿ ಮತ್ತೆ ಪ್ರಧಾನಿಯಾಗಬೇಕೇ? ಹಾಗಿದ್ದರೆ ಹೀಗೆ ಮಾಡಿ !

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಸಾವಿರಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಎಲ್ಲರನ್ನೂ ಐದು ವರ್ಷದಲ್ಲಿ ತಲುಪುವುದು ಬಹಳ ಕಷ್ಟಕರವಾದ ಸಂಗತಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳೆದ ಲೋಕಸಭಾ ಚುನಾವಣೆಯ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಅದರ ಕಾರ್ಯಗತಗೊಳಿಸುವಿಕೆಗೆ T-20 ಅನ್ನು ಅಳವಡಿಸಲಾಗಿದೆ. ‘ಟಿ 20’ ಪದವನ್ನು 20 ಓವರ್ಗಳ ಕ್ರಿಕೆಟ್ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಆ ಪದವನ್ನು ಬಿಜೆಪಿ ಬಳಸುತ್ತಿದೆ, ಆದರೆ ಕ್ರಿಕೆಟ್ ಮತ್ತು ಪಕ್ಷಕ್ಕೆ ಸಂಬಂಧವಿಲ್ಲ. ಬದಲಾಗಿ ಚಾಣಕ್ಯ ಮತ್ತು ಮೋದಿ ರವರು ಈ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದ್ದಾರೆ. ಒಂದು ವೇಳೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡಿದ್ದಲ್ಲಿ ಮೋದಿ ರವರು ಸುಲಭವಾಗಿ ಪ್ರಧಾನಿಗೆ ಮತ್ತೊಮ್ಮೆ ಏರುತ್ತಾರೆ.

ಈ ಮಾಸ್ಟರ್ ಪ್ಲಾನಿನ ಮೂಲಕ ಪ್ರತಿಯೊಬ್ಬ ಕಾರ್ಯಕರ್ತನಿಗೂ ಜವಾಬ್ದಾರಿಯನ್ನು ನೀಡಲು ನಿರ್ಧರಿಸಿದ್ದು ಪ್ರತಿ ಕಾರ್ಯಕರ್ತನು ತನಗೆ ತಿಳಿದಿರುವ 20 ಮನೆಗಳಿಗೆ ಹೋಗಿ ಚಹಾ ಕುಡಿಯುತ್ತಾ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿ ಜನರ ಮನಸ್ಸಿನಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಇಮೇಜ್ ಅನ್ನು ಸೃಷ್ಟಿಮಾಡಿ ಅದನ್ನು ಮತ ಪರಿವರ್ತನೆ ಮಾಡುವುದಕ್ಕೆ ಬಿಜೆಪಿ ಈ ಹೊಸ ತಂತ್ರಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ಈ ಟಿ-ಟ್ವೆಂಟಿ ಯೋಜನೆ ಕಳೆದ ಬಾರಿಯ ಚಾಯ್ ಪೆ ಚರ್ಚಾ ಎಂಬ ಕಾರ್ಯಕ್ರಮದ ಮುಂದುವರೆದ ಭಾಗವಾಗಿದ್ದು ಜನರು ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈ ಕಾರ್ಯಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು ಬಿಜೆಪಿಯ ಕಾರ್ಯಕರ್ತರು ಅಲ್ಲದೆ ಮೋದಿ ರವರ ಅಭಿಮಾನಿಗಳು ಸಹ ಈ ಕೆಲಸ ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.

Post Author: Ravi Yadav