ಇದು ನನ್ನ ಹದಿನೈದು ಲಕ್ಷದ ಮತ್ತೊಂದು ಕಂತು: ಥ್ಯಾಂಕ್ಯು ಮೋದಿಜಿ

ದೇಶ ರಕ್ಷಣೆಗೆ ಬದ್ದ ,ಸೈನಿಕರ ರಕ್ಷಣೆಗೂ ಬದ್ಧ : ಶಹಬ್ಬಾಸ್ ಮೋದಿಜಿ

0

ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಅಂದರೆ ಭಾರತ ಪಾಕಿಸ್ತಾನ ಗಡಿಯಲ್ಲಿ ಸ್ಮಾರ್ಟ್ ಸರ್ವೇಲೆನ್ಸ್ ಸಿಸ್ಟಮ್ ಅಂದರೆ ಸ್ಮಾರ್ಟ್ ಬೇಲಿ ಸಿದ್ದಮಾಡಲಾಗಿದೆ. ಇದರಿಂದ ನೆಲ, ಜಲ, ಆಕಾಶದಲ್ಲಿ ಅದೃಶ್ಯವಾದ ರೀತಿಯಲ್ಲಿ ವಿದ್ಯುತ್‌ ಬ್ಯಾರಿಯರ್ ಅಂದರೆ ಬೇಲಿ ಇರುತ್ತದೆ. ಇದರಿಂದ ಬಿ ಎಸ್ ಎಫ್ ಸೈನಿಕರಿಗೆ ಭಾರತದ ಗಡಿಯೊಳಗೆ ನುಗ್ಗುವ ನುಸುಳುಕೋರರನ್ನು ಗುರುತಿಸಲು ಸಹಾಯವಾಗುತ್ತದೆ ಹಾಗೂ ಕಷ್ಟದ ಸಮಯದಲ್ಲಿ  ನುಸುಳುಕೋರರನ್ನು ತಡೆಯಲು ಸಾಧ್ಯವಾಗುತ್ತದೆ.

ಪಾಕಿಸ್ತಾನ, ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರನ್ನು ಹಾಗು ಅಕ್ರಮ ರೋಹಿಂಗ್ಯಾಗಳನ್ನು ತಡೆಯಲು ಇದು ಪ್ರಾಥಮಿಕ ಹಾಗು ಮೊದಲ ಹಂತದ ರಕ್ಷಣೆಯಾಗಿದೆ. ಭಾರತ ತನ್ನ ಎರಡೂ ನೆರೆ ದೇಶಗಳ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದೆ.

ಹಲವು ಉಪಕರಣಗಳ ಬಳಕೆ.

ಸ್ಮಾರ್ಟ್ ಪೆನ್ಸ್ ನಲ್ಲಿ ಕಣ್ಗಾವಲಿಗೆ, ಚಲನೆಯ ಮಾಹಿತಿಗೆ, ಡಾಟಾ ಸ್ಟೋರೇಜ್ ಗೆ ಅನೇಕ ಉಪಕರಣ ಉಪಯೋಗಿಸಲಾಗಿದೆ. ಸೆನ್ಸಾರ್ ರೀತಿಯ ಥರ್ಮಲ್ ಇಮೇಜರ್, ಅಂಡರ್ ಗ್ರೌಂಡ್ ಸೆನ್ಸಾರ್, ಫೈಬರ್ ಆಪ್ಟಿಕಲ್ ಸೆನ್ಸಾರ್, ರಾಡಾರ್, ಸೋನಾರ್ ಇನ್ನಿತರ ಉಪಕರಣಗಳ ಬಳಕೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಈ ಸ್ಮಾರ್ಟ್ ಪೆನ್ಸ್ 24 ಗಂಟೆಗಳೂ ಕಾವಲು ಮಾಡಬಹುದಾಗಿದೆ.

ವಾತಾವರಣ ಹೇಗೆ ಇದ್ದರೂ ಈ ಬೇಲಿ ಕೆಲಸ ಮಾಡುತ್ತದೆ. ದೂಳು, ಮಳೆ, ಏನೇ ಇದ್ದರೂ ಇದು ನಿರಂತರ ಕೆಲಸ ಮಾಡುತ್ತದೆ. ಮುಂದೆ ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ದ ೨,೪೦೦ ಕಿ.ಮೀ ದೂರದವರೆಗೆ ಇದನ್ನು ವಿಸ್ತರಿಸುವ ಯೋಜನೆ ಮಾಡಲಾಗಿದೆ. ಲೇಸರ್ ಹಾಗೂ ವಿದ್ಯುತ್ ಬಳಸಿ ಇನ್ನೂ ಅಧಿಕ ಉಪಕರಣ ಬಳಸಿ ಮಾಡಲಾದ ಈ ಅದೃಶ್ಯ ಬೇಲಿ ಭಾರತಕ್ಕೆ ಹೆಚ್ಚಿನ ಸಹಾಯವಾಗಲಿದೆ. ಈ ಅತ್ಯಾಧುನಿಕ ಬೇಲಿಯಲ್ಲಿ ಸಿಸಿ ಟಿವಿ ಅಳವಡಿಸಲಾಗಿದ್ದು ಯಾರಾದರೂ ನುಸುಳುಕೋರರಿದ್ದರೆ ತಕ್ಷಣ ಸೇನೆಗೆ ತಲುಪಲಿದೆ. ಇದರಿಂದ ನುಸುಳುಕೋರರನ್ನು ತಡೆಯಲು ಸುಲಭವಾಗಲಿದೆ.

ಈ ರೀತಿ ಕೆಲಸ ಮಾಡಲಿದೆ ಈ ಸ್ಮಾರ್ಟ್ ಪೆನ್ಸ್.

ಈ ಬೇಲಿಯಲ್ಲಿ ಥರ್ಮಲ್ ಇಮೇಜರ್, ಇನ್ಪ್ರಾ ರೆಡ್, ಲೇಸರ್ ಬೆಸ್ಟ್ ಇಂಡ್ರೂಡರ್ ಅಲರಾಮ್ ನ ಸೌಲಭ್ಯ ಇರುತ್ತದೆ. ಇದರಲ್ಲಿ ಅದೃಶ್ಯ ಬೇಲಿ ನೆಲ, ಜಲ, ಆಗಸದಲ್ಲಿ ನಿರ್ಮಾಣವಾಗುತ್ತದೆ. ಆಗಸದಲ್ಲಿ‌ ಏರ್ ಶಿಪ್ ಸೌಲಭ್ಯ ಇರುತ್ತದೆ. ಗ್ರೌಂಡ್ ಸೆನ್ಸಾರ್ ಇಂದ ನುಸುಳುಕೋರರ ಎಲ್ಲಾ ಉಪಾಯವನ್ನು ಹಾಳು ಮಾಡುತ್ತದೆ.

ಸುರಂಗ ಮಾರ್ಗದಲ್ಲಿ ನುಸುಳಲು ಸಾಧ್ಯವಿಲ್ಲ ಇನ್ನು ಮುಂದೆ.

ಭೂಮಿ ಅಗೆದು ನುಸುಳಲು ಪ್ರಯತ್ನಿಸುವ ಉಪಾಯ ಫಲಿಸಲ್ಲ. ರಡಾರ್, ಸೋನಾರ್ ಸಿಸ್ಟಮ್ ಈ ತರ ಸುರಂಗ ತೋಡುವುದನ್ನು ರಿಯಲ್ ಟೈಮ್ ಅಲ್ಲಿ ಸೇನೆಗೆ ಮಾಹಿತಿ ರವಾನಿಸುತ್ತದೆ. ಹಾಗು ಇದು ಸೇನೆಗೆ ನುಸುಳುಕೋರರನ್ನು ಬಂಧಿಸಲು ಸುಲಭವಾಗುತ್ತದೆ.