ಕ್ಷಿಪ್ರ ಬೆಳವಣಿಗೆ- ರಾಜ್ಯ ರಾಜಕೀಯವನ್ನು ತಲ್ಲಣಗೊಳಿಸಿದ ಬಿ ಎಸ್ ವೈ ಹೇಳಿಕೆ

ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ಮೈತ್ರಿ ಸರ್ಕಾರ ಉರುಳುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಜೆಪಿ ಪಕ್ಷದವರು ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದರೂ ತೆರೆಮರೆಯಲ್ಲಿ ಆಪರೇಷನ್ ಕಮಲದಲ್ಲಿ ತೊಡಗಿದೆ ಎಂಬ ಆರೋಪ ಗಳು ಕೇಳಿ ಬರುತ್ತಿದ್ದವು.

ಆದರೆ ಮೈತ್ರಿ ಸರ್ಕಾರಕ್ಕೆ ಸವಾಲುಗಳ ಮೇಲೆ ಸವಾಲುಗಳು ಎದುರಾಗುತ್ತಿವೆ. ಈಗ ಎದುರಾಗಿರುವ ಜಾರಕಿಹೊಳಿ ಬ್ರದರ್ಸ್ ರವರ ಸಮಸ್ಯೆಯು ಸರ್ಕಾರ ಉರುಳಿಸುವ ಹಂತಕ್ಕೆ ತಲುಪಿದೆ. ಇತ್ತ ಜಾರಕಿಹೊಳಿ ಬ್ರದರ್ಸ್ ರವರು ನಾವು ಸರ್ಕಾರ ಬೀಳಿಸಿಯೇ ಸಿದ್ಧ ಎಂದು ಪಣ ತೊಟ್ಟಂತೆ ಕಾಣುತ್ತಿದೆ.

ಇವೆಲ್ಲದರ ನಡುವೆ ಇಷ್ಟು ದಿನ ಮೌನವಾಗಿದ್ದ ಯಡಿಯೂರಪ್ಪನವರು ಮೌನ ಮುರಿದಿರುವುದು ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನು ಸೃಷ್ಟಿಸಿದೆ.  ನಾವು ಯಾರನ್ನು ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಕರೆಯುವುದಿಲ್ಲ ಬಂದರೆ ಬೇಡ ಎನ್ನುವುದಿಲ್ಲ ಎಂದು ಹೇಳುತ್ತಿದ್ದ ಯಡಿಯೂರಪ್ಪನವರು  ಇದ್ದಕಿದ್ದ ಹಾಗೆ ಬಾಂಬ್ ಸಿಡಿಸಿದ್ದಾರೆ.

 

ನಾವು ಯಾವುದೇ ನಾಯಕರನ್ನು ನಮ್ಮ ಪಕ್ಷಕ್ಕೆ ಕರೆತರಲು ಪ್ರಯತ್ನಿಸಿಲ್ಲ ಆದರೆ ಕಾಂಗ್ರೆಸ್ ನ ಪ್ರಮುಖ ನಾಯಕರು ಬಿಜೆಪಿ ಪಕ್ಷವನ್ನು ಕೆಲವೇ ಕೆಲವು ದಿನಗಳಲ್ಲಿ ಸೇರಲಿದ್ದಾರೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಲ್ಲವೂ ತಿಳಿದಂತೆ ಯಡಿಯೂರಪ್ಪನವರಿಗೆ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.

ಇವರು ಜಾರಕಿಹೊಳಿ ಬ್ರದರ್ಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೆಲವು ರಾಜಕೀಯ ಪಂಡಿತರು  ಅಭಿಪ್ರಾಯಪಟ್ಟಿದ್ದಾರೆ. ಇವನ್ನೆಲ್ಲಾ ನೋಡಿದರೆ ಮೈತ್ರಿ ಸರ್ಕಾರ ಉರುಳಲಿದೆ ಎಂದು ಎಲ್ಲರಿಗೂ ಅನಿಸುತ್ತಿದೆ.

Post Author: Ravi Yadav