ಬಂಧನ ಭೀತಿ- ಅವಿತು ಕೊಂಡರೆ ಡಿಕೆಶಿ? ಪ್ರಧಾನಿ ಭೇಟಿ ರದ್ದು?

ರಾಜ್ಯ ರಾಜಕಾರಣದಲ್ಲಿ ಕಳೆದ ಎರಡು ದಿನಗಳಿಂದ ಡಿಕೆ ಶಿವಕುಮಾರ್ ಅವರ ಬಂಧನ ಭೀತಿ ತಲ್ಲಣವನ್ನು ಸೃಷ್ಟಿಸಿದೆ. ಡಿಕೆ ಶಿವಕುಮಾರ್ ಅವರು ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತ ದೆಹಲಿಗೆ ತೆರಳಿದ್ದ ಯಡಿಯೂರಪ್ಪನವರು ಬೆಂಗಳೂರಿಗೆ ವಾಪಸಾಗಿದ್ದಾರೆ.

ಯಡಿಯೂರಪ್ಪನವರು ವಾಪಸಾಗುತ್ತಿದ್ದಂತೆ ಶೋಭಾ ಕರಂದ್ಲಾಜೆ ಶ್ರೀರಾಮುಲು ಸೇರಿದಂತೆ ಹಲವು ಬಿಜೆಪಿ ನಾಯಕರು ರಹಸ್ಯಸಭೆಗಳನ್ನು ನಡೆಸುತ್ತಿದ್ದಾರೆ.  ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ರವರು ಯಾರಿಗೂ ತಿಳಿಸದ ಹಾಗೆ ರಹಸ್ಯ ಸ್ಥಳಕ್ಕೆ ಹೋಗಿದ್ದಾರೆ.

ಇಂದು ಬೆಳಗ್ಗೆ 10:150 ಮಾಧ್ಯಮದವರೊಂದಿಗೆ ಮಾತನಾಡಿದ ನಂತರ ಎಲ್ಲಾ ಸರ್ಕಾರಿ ವಾಹನ ಗಳನ್ನು  ಮತ್ತು  ಬೆಂಗಾವಲು ಪಡೆ ಗಳನ್ನು ಬಿಟ್ಟು ತಮ್ಮ ನಿವಾಸದಿಂದ ಡಿಕೆ ಶಿವಕುಮಾರ್ ಅವರು ಯಾರಿಗೂ ತಿಳಿಸದೆ ರಹಸ್ಯ ಸ್ಥಳಕ್ಕೆ ಹೋಗಿದ್ದಾರೆ. ಯೋಜನೆಯಂತೆ ನಾಳೆ ಡಿಕೆಶಿ ರವರು ಪ್ರಧಾನಿಯವರನ್ನು ಭೇಟಿಯಾಗಬೇಕಿತ್ತು.

ಆದರೆ ತಮ್ಮ ಆಪ್ತರಿಗೆ ತಿಳಿಸದೆ ರಹಸ್ಯ ಸ್ಥಳಕ್ಕೆ ಹೋಗಿರುವುದರಿಂದ ಬಂಧನ ಭೀತಿಯಿಂದ ಇವರು ಅವಿತು ಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಪ್ರಧಾನಿಯವರನ್ನು ಭೇಟಿಯಾಗುವವರೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ರಾಜ್ಯಸಭಾ ಸದಸ್ಯರಾದ ರಾಮಮೂರ್ತಿ ರವರು ಸಹ ಡಿಕೆಶಿ ರವರನ್ನು  ಭೇಟಿಯಾಗದೇ ವಿಫಲವಾಗಿ ವಾಪಸಾದ ಘಟನೆಯೂ ಸಹ ನಡೆದಿದೆ.

Post Author: Ravi Yadav