ಬಿ ಎಸ್ ವೈ ಮತ್ತೆ ಅಧಿಕಾರಕ್ಕೆ? ಪಣತೊಟ್ಟ ಗೋವಾ ಮಹಾರಾಷ್ಟ್ರ ನಾಯಕರು

ಕೆಲವು ದಿನಗಳ ಹಿಂದಷ್ಟೇ ಮೈತ್ರಿ ಸರ್ಕಾರಕ್ಕೆ ಬಹು ದೊಡ್ಡ ಕಂಟಕವೊಂದು ಎದುರಾಗಿತ್ತು, ಬೆಳಗಾವಿಯ  ಪಿ ಎಲ್ ಡಿ  ಬ್ಯಾಂಕಿನ ಚುನಾವಣೆ ಇಡಿ ರಾಜ್ಯದ ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಜಾರಕಿಹೊಳಿ ಬೆಂಬಲಿಗರು ಇನ್ನೇನು ಸರ್ಕಾರ ಉರುಳಿಸುವ ಅವರು ಎನ್ನುವ  ಹೊತ್ತಿಗೆ ಕಾಂಗ್ರೆಸ್ ನಾಯಕರ ದಂಡು ರವಾನಿಸಿ ಸಂಧಾನ ನಡೆಸುವಲ್ಲಿ ಮೈತ್ರಿ ಸರ್ಕಾರ ಯಶಸ್ವಿಯಾಗಿತ್ತು.

ಆದರೆ ಇದೇ ಸಮಯದಲ್ಲಿ ಬಿಎಸ್ ಯಡಿಯೂರಪ್ಪ ನವರನ್ನು ಜನಾದೇಶದಂತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಗೋವಾ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕರ ಮೇಲೆ ಜವಾಬ್ದಾರಿಯನ್ನು ಹೇರಲಾಗಿತ್ತು.  ಈಗ ಅಖಾಡದಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಬಿಜೆಪಿ ನಾಯಕರು ಕಣಕ್ಕಿಳಿದಿದ್ದು  ರಾಜ್ಯದೆಲ್ಲೆಡೆ  ತಲ್ಲಣವನ್ನು ಸೃಷ್ಟಿಸಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಪಿ ಎಲ್ ಡಿ  ಬ್ಯಾಂಕಿನ ಚುನಾವಣೆಯಲ್ಲಿ ಜಾರಕಿಹೊಳಿ ರವರಿಗೆ ಹಿನ್ನಡೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇದನ್ನು ಸಂದಾನದ ಮೂಲಕ ಕಾಂಗ್ರೆಸ್ ನಾಯಕರು ಬಗೆಹರಿಸಿದರು. ಆದರೆ ಕಾಂಗ್ರೆಸ್ ನಾಯಕರ ಬೆಂಬಲವೂ ಸಹ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಾರಕಿಹೊಳಿ ರವರು ಕಳೆದ ಕೆಲವು ದಿನಗಳಿಂದ ಯಾವುದೇ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇಷ್ಟೇ ಆಗಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಬದಲಾಗಿ ಜಾರಕಿಹೊಳಿಯವರು ಗೋವಾ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕರ  ಸಂಪರ್ಕದಲ್ಲಿ  ಇದ್ದಾರೆ ಎಂಬ ಬ್ರೇಕಿಂಗ್ ಮಾಹಿತಿ ಹೊರಬಿದ್ದಿದೆ. ಈ ವಿಷಯ ತಿಳಿದ ರಾಜ್ಯ ಕಾಂಗ್ರೆಸ್ ನಾಯಕರು ಎಷ್ಟೇ ಪ್ರಯತ್ನಪಟ್ಟರೂ ಜಾರಕಿಹೊಳಿ  ರವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಇತ್ತ ಬಿಜೆಪಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪ ನವರಿಗೆ ಅಕ್ಟೋಬರ್ ನ ವರೆಗೂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಸರ್ಕಾರ ಬೀಳಿಸುವ ಅಗತ್ಯ ಅಕ್ಟೋಬರ್ ನವರೆಗೂ ಇಲ್ಲ ಆನಂತರ ಸರ್ಕಾರವು ಬೀಳಲಿದೆ ನೀವು ಮತ್ತೆ ಮುಖ್ಯಮಂತ್ರಿಯಾಗಲಿದ್ದೀರಾಎಂದು ಸಂದೇಶವನ್ನು ರವಾನಿಸಿದೆ ಎಂದು ತಿಳಿದು ಬಂದಿದೆ.

ಜಾರಕಿಹೊಳಿ ಬ್ರದರ್ಸ್ ರವರ ಜೊತೆಗೆ ಬರೋಬ್ಬರಿ 16 ಶಾಸಕರ ದಂಡು ಬಿಜೆಪಿ ಪಕ್ಷದತ್ತ ವಲಸೆ ಬರಲಿದೆ ಎಂಬ ಬೃಹತ್ ಮಾಹಿತಿ ಹೊರಬಂದಿದೆ.  ಇದಕ್ಕೆಲ್ಲಾ ಕಾರಣ ಕೇವಲ ಒಂದು ಬ್ಯಾಂಕಿನ ಚುನಾವಣೆ ಎಂದರೆ  ಎಲ್ಲರ ಹುಬ್ಬೇರಿಸಿದೆ.

ಒಂದು ವೇಳೆ ಜಾರಕಿಹೊಳಿ ಬ್ರದರ್ಸ್ ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿ ದಲ್ಲಿ ಜನ ಆದೇಶದಂತೆ ಶ್ರೀಯುತ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ  ಕಂಗೊಳಿಸಲಿದ್ದಾರೆ. ಇನ್ನು ಏನು ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Post Author: Ravi Yadav